ಪುಟಗಳು

24 September 2010

ಸಾರ್ಥಕ ಬದುಕು ಅಂದರೆ.......???

ಬಹಳಷ್ಟು ಸಲ ನನ್ನನು ಕಾಡುವ ಪ್ರಶ್ನೆ ಬದುಕು ಸಾರ್ಥಕವಾಗಲು ಏನು ಮಾಡುಬೇಕು?  ಇದಕ್ಕೆ ಉತ್ತರ ಸಿಗುವುದು ಸುಲಭದ ಮಾತಲ್ಲ ಎಂಬುದು ನನಗೆ ತಿಳಿದೆದೆ. ಪ್ರತಿ ಮನುಷ್ಯನು ಜೀವನದಲ್ಲಿ ಕೆಲವೊಂದು ಆಸೆಗಳನ್ನೂ ಇಟ್ಟುಕೊಂಡಿರುತ್ತಾನೆ ಕೆಲವೊಮ್ಮೆ ಅವು ಅತಿಯಾಸೆಗಳು ಆಗಿರುತ್ತವೆ........ಸಾಮಾನ್ಯವಾಗಿ ಒಬ್ಬ ಸಾಮಾನ್ಯ ಮನುಷ್ಯನನ್ನ  ಯಾರಾದರು ನಿನ್ನ ಆಸೆ ಏನು?? ಎಂದು ಕೇಳಿದಾಗ ಮಾಮೂಲಿಯಾಗಿ ಬರುವ ಉತ್ತರ ಸುಖವಾಗಿ ಬಾಳಬೇಕು ಎಂಬುದೇ ಆಗಿರುತ್ತದೆ....ಸುಖ ಅನ್ನುವ ಎರಡಕ್ಷರದಲ್ಲಿ ಏನೇನೆಲ್ಲ ಅಡಗಿದೆ....ಕೆಲವರಿಗೆ ಸುಖ ಹಣ ಸಂಪಾದನೆ ಮಾಡುವಲ್ಲಿ ಸಿಕ್ಕರೆ ಮತ್ತೆ ಕೆಲವರಿಗೆ ಒಂದು ಮನೆ ಕಟ್ಟಬೇಕು, ಮನೆಯವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳಬೇಕು, ನಮ್ಮ ಹೆಣ್ಣು ಮಕ್ಕಳಿಗೆ ಒಳ್ಳೆಯ ಕೆಲಸ, ಆಸ್ತಿ ಹೊಂದಿರುವ ಹುಡುಗನನ್ನು ನೋಡಿ ಮದುವೆ ಮಾಡಬೇಕು, ಗಂಡು ಮಗನಿಗೆ ಒಳ್ಳೆಯೇ ಶಿಕ್ಷಣ ಕೊಡಿಸಿ ಲಂಚ ಕೊಟ್ಟಾದರೂ ಸರಿ ಸರ್ಕಾರೀ ಕೆಲಸ ಕೊಡಿಸಬೇಕು......ಹೇಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹೀಗೆ ಬೆಳೆಯುವ ಪಟ್ಟಿ ಕೇವಲ ತನಗೆ-ತನ್ನ ಮನೆಯವರಿಗೆ ಮಾತ್ರ ಸಂಬಂದಿಸಿರುತ್ತದೆ.....
ಸಾರ್ಥಕ ಬದುಕು ಎಂದರೆ ಇದೇನಾ?? ವಯುಕ್ತಿಕ ಮಟ್ಟದಲ್ಲಿ ನೋಡಿದಾಗ....ಮನೆ ಕಟ್ಟುವುದು....ಹಣ, ಆಸ್ತಿ ಸಂಪಾದನೆ, ನಾನು ಇರುವ ಮನೆ, ಮನೆ ಮುಂದೆ ಇರುವ ಜಾಗ ಸ್ವಚ್ವ ವಾಗಿರಬೇಕು....ಮನೆಯಲ್ಲಿ ಒಬ್ಬ ಮನುಷ್ಯನ ಅಗತ್ಯಗಳನೆಲ್ಲ ಪೂರೈಸುವ ವಸ್ತುಗಳು ಇರಬೇಕು....ದಿನ ಬೆಳಿಗ್ಗೆ ಎದ್ದು ಬಿಸಿ-ಬಿಸಿ ಕಾಫಿ ಕುಡಿದು, ತಿಂಡಿ ತಿಂದು ಆಫೀಸಿಗೆ ಹೋಗಿ ಕೆಲಸ ಮುಗಿಸಿ ಮತ್ತೆ ಊಟ ಮಾಡಿ ಟೈಮ್ ಪಾಸು ಮಾಡೋದಕ್ಕೆ ಒಂದಿಷ್ಟು ಹೊತ್ತು TV  ನೋಡಿ ಮತ್ತೆ ಮಲಗುವುದು....ಇನ್ನು ರಜಾ ದಿನಗಳಲ್ಲಿ ಒಂದಿಷ್ಟು ಮೋಜು-ಮಸ್ತಿ ಮಾಡುವುದು....... ಇಷ್ಟೇ ಆದರೆ ಸಾರ್ಥಕ ಬದುಕು ಎಂದು ಕರೆಯಲು ಸಾಧ್ಯವೇ???

ನಾವು ಬದುಕಿರುವ ಸಮಾಜಕ್ಕೆ ನಾವು ನೀಡುವುದಾದರೂ ಏನು?? ಸಹಾಯದ ಅಗತ್ಯವಿರುವವರಿಗೆ ಎಂದಾದರೂ ಕೈಚಾಚಿದ್ದೆವೆಯೇ?? ತಿನ್ನಲು ಒಂದು ಹೊತ್ತು ಊಟ ಇಲ್ಲದವರು ಇಂದು ಎಷ್ಟೋ ಜನರಿದ್ದಾರೆ ಆದರೆ ಉಳ್ಳವರು ಮದುವೆ, ನಾಮಕರಣ, ಅನೇಕ ಸಮಾರಂಭಗಳಲ್ಲಿ ಹೊಟ್ಟೆ ಬಿರಿಯೆ ತಿಂದು ಉಳಿದುದ್ದನ್ನು ತಿಂದ ಎಲೆಯಲ್ಲಿಯೇ ಬಿಟ್ಟು ಹೋಗುವ ಜನರಿದ್ದಾರೆ ಅವರು ಬಿಟ್ಟು ಹೋಗುವ ಊಟದಲ್ಲಿ ಕಡಿಮೆಯೆಂದರೆ ಎರಡು ಮಕ್ಕಳಿಗೆ ಹೊಟ್ಟೆ ತುಂಬಿಸಬಹುದಾಗಿದೆ.....ಇಂಥಹ ಸಮಾರಂಭಗಳಲ್ಲಿ ಸಂಬ್ರಮದಿಂದ ಓಡಾಡಿಕೊಂಡು ಊಟ ಮಾಡುವವರು ಯಾರಾದರು ಅದರ ಬಗ್ಗೆ ಯೋಚನೆ ಮಾಡಿದ್ದಾರೆಯೇ...?? ಇಲ್ಲ...  ಮಾನ ಮುಚ್ಚಲು ಬೇಕಿರುವ ಬಟ್ಟೆ ಇಲ್ಲದವರು ಎಷ್ಟೋ ಜನರಿದ್ದಾರೆ....ಆದರೆ ನಾವುಗಳು ತಿಂಗಳಿಗೊಮ್ಮೆ ಹೊಸ ಬಟ್ಟೆ ಖರಿದಿಸುತ್ತಲೇ ಇರುತ್ತೇವೆ...ಎಂದಾದರೂ ಇದರ ಬಗ್ಗೆ ಯೋಚಿಸುತ್ತೆವೆಯೇ?? ಯಾರ ಯಾರಿಗೋ ಬೇಡ ನಮ್ಮ ಹೆತ್ತ ತಂದೆ-ತಾಯಿಯರಿಗೆ ನೀಡುವುದಾದರೂ ಏನು ?? ವಯಸ್ಸಾದ ಕಾಲದಲ್ಲಿ ಅವರಿಗೆ ನೀಡಬೇಕದ  ಆಸರೆಯನ್ನು ಕೊಡಲು ಇಂದು ನಾವು ವೃದ್ಧಶ್ರಮಗಳ ಮೊರೆ ಹೋಗಿದ್ದೇವೆ....ಅನೇಕ ಕುರುಡರು ರಸ್ತೆ ದಾಟಲು, ಬಸ್ಸು ಹತ್ತಲು ಪರದಾಡುತ್ತಿದ್ದರು ನಮ್ಮ ಪಾಡಿಗೆ ನಾವು ಇರುತ್ತೇವೆ......ದಿನ ನಿತ್ಯ ನಾವು ಬೇಟಿಕೊಡುವ ಸ್ಥಳಗಳಲ್ಲಿ ಮಾಮೂಲಿ ಎಂಬಂತೆ ಚಿಕ್ಕ ವಯಸ್ಸಿನ ಮಕ್ಕಳು ಶಾಲೆ ತೊರೆದು ದುಡಿಯುವುದನ್ನು ನಾವು ನೋಡುತ್ತಲೇ ಇರುತ್ತೇವೆ....   

ಇನ್ನು ಎಲ್ಲೋ ಯಾರೋ ಸತ್ತರೆ ನಮಗೇನು ಎಂಬ ಭಾವನೆ ನಾನು ಅನೇಕರಲ್ಲಿ ಕಂಡಿದ್ದೇನೆ....ಇಂದು ಮುಂಜಾನೆ ಕೂಡ ಆದದ್ದು ಅದೇ..ನಮ್ಮ ಆಫೀಸ್ ನಲ್ಲಿ ಡ್ರೈವರ್ ಆಗಿ ಕೆಲಸಮಾಡುತ್ತಿದ್ದ ಶ್ರೀಕಂಠ ಅವರು ಮುಂಜಾನೆ ತೀರಿಹೋದರು ಎಂದು ತಿಳಿದು ಬೇಸರದಿಂದ ಕುಳಿತು ಅಳುತ್ತಿದ್ದ ನಾನು...ಅದೇ ಆಫೀಸಿನಲ್ಲಿ ವಿಷಯ ತಿಳಿದಿದ್ದರೂ ತಮ್ಮ ಪಾಡಿಗೆ ತಾವು ತಮಾಷೆ ಮಾತನಾಡುತ್ತ ನಗುತ್ತಿದ್ದರವರನ್ನು ಕಂಡೆ.....ನಮ್ಮ ಜೊತೆಯಲ್ಲಿಯೇ ಕೆಲಸಮಾಡುತ್ತಿದ್ದ ಒಬ್ಬ ವ್ಯಕ್ತಿ ಇನ್ನಿಲ್ಲ ಎಂದು ತಿಳಿದಾಗ ನಾವು ನೀಡುವ ಪ್ರತಿಕ್ರಿಯೆ ಇದೇನಾ ??? ಸರಿ ಅವರಿಗಾಗಿ ಅಳುತ್ತ.... ಗಲಾಟೆ ಮಾಡಿ... ಆಫೀಸ್ ಗೆ ರಜಾ ನೀಡಿ ಎಂದು ಕೇಳಲು ಆಗುವುದಿಲ್ಲ ಕಾರಣ ಅವರು Dr ರಾಜಕುಮಾರ್ ಸತ್ತಗಲೋ, ವಿಷ್ಣುವರ್ಧನ್ ಸತ್ತಗಲೋ, ನಾವು ಮಾಡಿದ್ದನ್ನು ಕೇವಲ ಒಬ್ಬ ಮಾಮೂಲಿ ವ್ಯಕ್ತಿ ಸತ್ತಾಗ ನಾವು ಮಾಡುವುದಿಲ್ಲ ಅಲ್ಲವೇ...... ಎಲ್ಲಿ ನನ್ನ ಪ್ರಶ್ನೆ ಇಷ್ಟೇ....ಸತ್ತ ವ್ಯಕ್ತಿ ಯಾರೇ ಆದರೂ ಅವರನ್ನು ಕ್ಷಣ ಮಾತ್ರ ನೆನೆಯುವುದು ಮುಖ್ಯ...ಅದು ಪ್ರಸಿದ್ದ ವ್ಯಕ್ತಿಗಳಾದ  Dr ರಾಜಕುಮಾರ್, ವಿಷ್ಣುವರ್ಧನ್, ಗಂಗೂಬಾಯಿ ಹಾನಗಲ್ಲ, ಅಶ್ವಥ್,  ರಾಜಶೇಕರ್ ರೆಡ್ಡಿಯೇ ಆಗಿರಲಿ ಅಥವಾ ವೀರಪ್ಪನ್, ಪ್ರಭಾಕರನ್ ರಂಥಹ ಕುಖ್ಯಾತ ವ್ಯಕ್ತಿ ಗಳೇ ಆಗಿರಲಿ ಸತ್ತಮೇಲೆ ಅವರುಗಳನ್ನು ಕೇವಲ ಒಬ್ಬ ಮನುಷ್ಯನನ್ನಗಿಯೇ ನೋಡಬೇಕು....ನಂತರ ಆತ ಮಾಡಿರುವ ಕೆಲಸಗಳು ಬರುತ್ತವೆ ಎಂಬುದು ನನ್ನ ವಯುಕ್ತಿಕ ಅಭಿಪ್ರಾಯ.... ನಮ್ಮ ದೇಶದಲ್ಲಿ ನಮ್ಮ ಬಂಧುಗಳೋ , ಸ್ನೇಹಿತರೋ ಸತ್ತಾಗ ನೀಡುವ ಪ್ರತಿಕ್ರಿಯೆಯನ್ನ ಪಾಕಿಸ್ತಾನದಲ್ಲಿ ಯಾರೋ ಒಬ್ಬರನ್ನು ಗುಂಡಿಕ್ಕಿ ಕೊಂದ ದೃಶ್ಯವನ್ನು ನೇರವಾಗಿ ನೋಡಿದಾಗಲು ನಾವು ಮರುಗುವುದಿಲ್ಲ ಕಾರಣ ಅವರು ನಮ್ಮವರಲ್ಲ..ಅವರಿಗೂ ನಮಗೂ ಸಂಭಂದವಿಲ್ಲ ಎಂದು.......

ನಾವು ಪ್ರಪಂಚದಲ್ಲಿ ಕಷ್ಟದಲ್ಲಿರುವ ಎಲ್ಲರಿಗೂ ಸಹಾಯ ಮಾಡಲು ಸಾಧ್ಯವಿಲ್ಲವೆಂದು ನನಗೆ ತಿಳಿದೆದೆ....ಆದರೆ ಬದುಕನ್ನು ಸಾರ್ಥಕಗೊಳಿಸಲು ನಮ್ಮ ಮನೆಯವರಿಗಾಗಿ  ನಾವು ಮಾಡುವ ಪ್ರಯತ್ನದಲ್ಲಿ ಕಿಂಚಿತ್ತಾದರೂ ಕೈಲಾಗದವರ, ಸಹಾಯದ ಬೇಕಾಗಿರುವವರಿಗೆ ನಮ್ಮ ಕೈಲಾದ ಸಹಾಯ ಮಾಡಬಹುದು ಎಂಬುದು ನನ್ನ ಅಭಿಪ್ರಾಯ....ಸರಿ ಇನ್ನು ನಾವು ಹೇಗೆ ಇಂಥಹವಿರಿಗೆ ಸಹಾಯ ಮಾಡಬಹುದು ಎಂಬ ಪ್ರಶ್ನಗೆ ನನಗೆ ಅನ್ನಿಸಿದ ಕೆಲವು ಉತ್ತರಗಳನ್ನು ಇಲ್ಲಿ ನೀಡಲು ಇಷ್ಟ ಪಡುತ್ತೇನೆ......ಊಟದ ವಿಷಯ ಬಂದಾಗ ಯಾವುದೇ ಸಭೆ- ಸಮಾರಂಭಗಳಿಗೆ ಹೋದಾಗ ಅಗತ್ಯವಿರುವಷ್ಟು, ನಿಮಗೆ ತಿನ್ನಲು ಆಗುವಷ್ಟು ಮಾತ್ರ ಹಾಕಿಸಿಕೊಳುವುದು ಒಂದು ವೇಳೆ ಉದಿದರೆ ಅದನ್ನ ಯಾವುದಾದರು ಅನಾಥಾಶ್ರಮ, ವೃದ್ದಾಶ್ರಮ ಅಥವ ದೇವಸ್ಥಾನದ ಮುಂದೆ ಸಾಲಾಗಿ ಕುಳಿತು ದುಡಿಯಗದೆ ಇರುವ ಜೀವಗಳಿಗೆ ನೀಡಬಹುದು. ಬಟ್ಟೆ ವಿಷಯಕ್ಕೆ ಬಂದಾಗ ನೀವು ತಿಂಗಳಿಗೊಮ್ಮೆ ಹೊಸ ಬಟ್ಟೆ ಖರೀದಿಸುವುದು ತಪ್ಪಲ್ಲ ಆದರೆ ನಿಮ್ಮ ಹಳೆಯ ಬಟ್ಟೆಗಳನ್ನು ಬೀರುವಿನಲ್ಲಿ ಗಂತು ಕಟ್ಟಿ ಇಡುವ ಬದಲಿಗೆ ಅನಾಥ ಮಕ್ಕಳಿಗೆ ನೀಡುವುದು ಉತ್ತಮವಲ್ಲವೇ. ಕೇವಲ ನಿಮ್ಮ ಮನೆ, ಮನೆ ಮುಂದಿನ ಜಾಗ ಮಾತ್ರ ಸ್ವಚ್ಛತೆ ಬಗ್ಗೆ ಮಾತ್ರ ಕಾಳಜಿ ವಹಿಸದೆ ಇಡೀ ಬೀದಿಯ ಸ್ವಚ್ಛತೆಯ ಬಗ್ಗೆ ಎಲ್ಲರು ಕುಡಿ ಶ್ರಮಿಸಿದರೆ....ಒಂದು ಬೀದಿ  ಸ್ವಚ್ಛವಾಗಿದ್ದರೆ.......ಒಂದು ಊರು ಸ್ವಚ್ಚವಗಿದ್ದಂತೆ...ಒಂದು ಊರು ಸ್ವಚ್ಚವಗಿದ್ದರೆ ಒಂದು ರಾಜ್ಯ.....ಒಂದು ರಾಜ್ಯ ಸ್ವಚ್ಛವಾಗಿದ್ದರೆ..... ಒಂದು ದೇಶ ಆರೋಗ್ಯ ಪೂರ್ಣವಾಗಿದ್ದಂತೆ ಅಲ್ಲವೇ..? ಹಣ ಸಂಪಾದನೆಯೊಂದೆ ಸಾರ್ಥಕ ಜೀವನದ ಗುರುತಲ್ಲ.....ತಾಣ ಮನೆ- ಮನೆಯವರು ಎಂಬ ಭಾವನೆಯಾ ಜೊತೆಗೆ....ಒಂದು ಚೂರು-ಪಾರು ಕಷ್ಟದಲ್ಲಿರುವವರ ಸಹಾಯಕ್ಕೆ ಬರಬಹುದಲ್ಲವೇ? ಪ್ರತಿ ವಾರವನ್ನು ಮೋಜು-ಮಸ್ತಿ ಮಾಡಿ ಕಳೆಯುವುದಕಿಂತ ಶಲ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಓದುವುದನ್ನು ಕಲಿಸುದಕ್ಕೆ ಮೀಸಲಿಡಬಹುದಲ್ಲವೇ. ಕಾಣದ ದೇವರ ಮುಂದೆ ನಿಂತು ಎಲ್ಲರನ್ನು ಚೆನ್ನಾಗಿ ಇಟ್ಟಿರು ಎಂದು ಕೇಳುತ್ತ ಸಮಯ ವ್ಯರ್ಥ ಮಾಡುವ ಬದಲು ನಿಮ್ಮ ಕಣ್ಣಿಗೆ ಕಾಣುವ ನಿಮ್ಮ ಸಹಾಯದ ಅಗತ್ಯವಿರುವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಸಾರ್ಥಕ ಬದುಕು ಸಾಗಿಸಲು ಇಷ್ಟು ಸಾಕಲ್ಲವೇ???

ಸಲಹೆಗನ್ನು ಕೊಡುವುದು ತುಂಬಾ ಸುಲಭ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟ..ಇಷ್ಟು ಹೇಳಿ ತೋಚಿದ್ದನೆಲ್ಲ ಗೀಚಿರುವ ನೀವು ಇಲ್ಲಿಯವರೆಗೆ ಮಾಡಿರುವ ಸಹಾಯದ ಪಟ್ಟಿ ಕೊಡಿ ಎಂದರೆ.....ದಯವಿಟ್ಟು ಕ್ಷಮಿಸಿ ಇಲ್ಲಿಯವರೆಗೆ ನನ್ನನ್ನು ಪ್ರೀತಿಸಿದ ಜೀವಗಳಿಗೆ ತೊಂದರೆ ಕೊಡುವುದನ್ನು ಬಿಟ್ಟು ಬೇರೆ ಯಾವುದೇ ಸಹಾಯವನ್ನು ನಾನು ಮಾಡಿಲ್ಲ....................                            

3 comments: