ಪುಟಗಳು

16 September 2010

ಗಣೇಶ ಹಬ್ಬ........ಅಂದು-ಇಂದು.....!!!

 ಹಿಂದೂಗಳು ನಾವು ಬರುವ ಇಲ್ಲ ಹಬ್ಬಗಳನ್ನೂ ಸಂತೋಷದಿಂದ ಆಚರಿಸುವುದು ನಮ್ಮ ಸಂಪ್ರದಾಯ....ದಿನ ನಿತ್ಯದ ಅಗತ್ಯವಿರುವ ವಸ್ತುಗಳ ಬೆಲೆ ಗಗನಕ್ಕೆರಿದರೂ ಸರಿಯೇ ನಾವು ಹಬ್ಬ ಆಚರಿಸದೇ ಇರಲು ಸಾಧ್ಯವಿಲ್ಲ.....ಇನ್ನು ನಮ್ಮ ವಿಘ್ನ ನಿವಾರಕ ಗಣೇಶ ಹಬ್ಬ ಬಂತೆಂದರೆ ಸಾಕು ಎಲ್ಲಿಲ್ಲದ ಸಡಗರ-ಸಂಭ್ರಮ........ಗಣೇಶ ಹಬ್ಬದ ಬಗ್ಗೆ ನನಗೆ ಅನಿಸಿದ ಎರಡು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ..... ನಾನು ಚಿಕ್ಕವಳಿದ್ದಾಗ ನಮ್ಮೂರಿನಲ್ಲಿ ಗಣೇಶ ಹಬ್ಬ ಬಂತೆಂದರೆ ಎಲ್ಲಿಲ್ಲದ ಸಡಗರ....ನನ್ನೂರಿನ ಪ್ರತಿಯೊಬ್ಬರು ಸೇರಿ ಈ ಹಬ್ಬ ಆಚರಣೆ ಮಾಡುತ್ತಿದೆವು.....ಅಲ್ಲಿ ಯಾವುದೇ ರೀತಿಯ ರಾಜಕೀಯ ಪ್ರಭಾವವಾಗಲಿ....ಜಾತಿಯ ಪ್ರಭಾವವಾಗಲಿ.....ಯಾವುದು ಇರುತ್ತಿರಲಿಲ್ಲ...ಆಗ ನನಗೆ ಅನಿಸುತ್ತಿದಿದು ಅಬ್ಬ ನನ್ನ ಊರು ಎಷು ಚೆನ್ನ ಎಲ್ಲರು ಸೇರಿ ಎಷ್ಟು ಚೆನ್ನಾಗಿ ಹಬ್ಬ  ಆಚರಿಸುತ್ತಿದ್ದಾರೆ ......."ಊರಿಗೊಂದೇ ಗಣಪತಿ" ಎಂಬ ಮಾತು ನೆನಪಾಗುತ್ತಿತ್ತು. ಇನ್ನು ಗಣೇಶನಿಗೆ ಪೂಜೆ ಮುಗಿಸಿ ನೀಡುವ ಪ್ರಸಾದಕ್ಕೆ ಯಾವಾಗಲು ನಾನು ಮುಂದು...ಹುಡುಗಿಯಾಗಿದ್ದರು ಮನೆಯಲ್ಲಿ ಮುದ್ದಿನಿಂದ ಸಾಕಿದ್ದರಿಂದ ಹುಡುಗರ ಮಧ್ಯೆ ಯಾವುದೇ ಮುಜುಗರ ಅಥವ ನಾನು ಹುಡುಗಿ ಎಂದು ಯೋಚಿಸದೆ ಪ್ರಸಾದಕ್ಕಾಗಿ ನುಗ್ಗಿ ಹೋಗುತ್ತಿದೆ........ಹೀಗೆ ನನ್ನೂರು ಎಂದರೆ ನನಗೆ ಒಂಥರಾ ಅಭಿಮಾನ...ಗೌರವ....   ಕೆಲವು ವರ್ಷಗಳ ನಂತರ ನನ್ನೂರಿನ ಸ್ಥಿತಿಯೇ ಬದಲಾಯಿತು.....

ಆಗ ನಾನು BA  ಓದುತ್ತಿದ್ದೆ....ಪ್ರತಿ ವರ್ಷದಂತೆ ಆ ವರ್ಷವೂ ಗಣೇಶ ಹಬ್ಬ ಬಂತು....ಅದರ ಜೊತೆಗೆ ಮನೆ ಮನೆಗೆ ಬಂದು ಗಣೇಶ ಇಡುತ್ತಿದ್ದೇವೆ ಹಣ ಕೊಡಿ ಎಂದು ಕೇಳುತ್ತಿದ್ದರು....ನನಗೆ ಆಶ್ಚರ್ಯವಾಗಿದ್ದು ಇಷ್ಟು ವರ್ಷದಿಂದ ಯಾರು ಕೂಡ ನನ್ನೂರಿನಲ್ಲಿ ಇದಕ್ಕಾಗಿ ಹಣ ಸಂಗ್ರಹಿಸುತ್ತಿರಲಿಲ್ಲ.....ಊರಿನ ಹಿರಿಯರು ಇದರ ಜವಾಬ್ಧಾರಿ ಹೊರುತ್ತಿದ್ದರು.....ಹಬ್ಬದಲ್ಲಿ ಇಲ್ಲ ಖರ್ಚು.... ಆಗು-ಹೋಗುಗಳಿಗೆ.... ಅವರೇ ಕಾರಣರಾಗಿರುತ್ತಿದ್ದರು.....ಆದರೆ ಇದ್ದಕ್ಕಿದ್ದ ಹಾಗೆ ಈ ರೀತಿ ಹಣ ಕೇಳಲು ಏನು ಕಾರಣ??? ಇದಕ್ಕೆ ಉತ್ತರ..... ಅಯ್ಯೋ ಅದೇ ನೋಡಿ ನಮ್ಮ ರಾಜಕೀಯದ ಪ್ರಭಾವ....ಯಾವಾಗ ನಮ್ಮೂರಿನ ಜನರು ನಾನು BJP ಪಕ್ಷ ನೀನು JDS  ಎಂದು ಜಗಳವಾದತೊಡಗಿದರೋ  ಅಲ್ಲಿಂದ ಶುರು ನೋಡಿ...ಚಿತ್ರ-ವಿಚಿತ್ರ ಹಬ್ಬದ ಆಚರಣೆ.....  "ಊರಿಗೊಂದೇ ಗಣಪತಿ" ಎಂಬುದು ನಂತರ "ಪಕ್ಷಕೊಂದು ಗಣೇಶ" ಆಯಿತು...ಒಬ್ಬರ ಮೇಲೊಬ್ಬರು ಎಂಬಂತೆ ಅವರಿಗಿಂತ ನಾವು ಜೋರಾಗಿ ಗಣೇಶ ಕೂರಿಸಬೇಕು ಎಂದು BJP  ಪಕ್ಷದವರು ಅಂದು ಕೊಂಡರೆ ಈ ಬಾರಿ ನಾವು ಅವರಿಗಿಂತ ನಾವು ಜೋರಾಗಿ ಗಣೇಶ ಕೂರಿಸಬೇಕು ಎಂದು   JDS , ನಂತರ ಕಾಂಗ್ರೆಸ್ ಪಾರ್ಟಿ....ನನಗೆ ಇನ್ನು ನೆನಪಿದೆ ಒಂದೇ ವರ್ಷದಲ್ಲಿ 3  ಪಕ್ಷದವರು ಕುರಿಸಿದ್ದ ಗಣೇಶನನ್ನು ನೋಡಿ ನಾನು ಮನಸ್ಸಿನಲ್ಲಿಯೇ "ಗಣೇಶ ನಿನ್ನ ಮಹಿಮೆ ಅಪಾರ" ಎಂದು ಕೊಂಡೆ....

ಇನ್ನು ನನ್ನೂರಿನ ಜನೆರೆ ಹೀಗೋ ಅಥವ ಇಲ್ಲ ಹಳ್ಳಿ ಜನರೇ ಹೀಗೋ ಗೊತ್ತಿಲ್ಲ.....ಎಲ್ಲಿ ಗಣೇಶನ್ನು ಯಾರೂ ಕೂರಿಸಿದರೆ ನಮಗೇನು ಪ್ರಸಾದ ಸಿಕ್ಕರೆ ಸಾಕು....ಒಂದು ಪಕ್ಷದವರು ಕೂರಿಸಿದ ಗಣೇಶನ ಕಡೆ ಪ್ರಸಾದ ಸಿಗದಿದ್ದರೆ ಏನಂತೆ ಇನ್ನೊಂದು ಕಡೆ ಹೋಗೋಣ ಅಂತ ಹೇಳುತ್ತಿರುವುದನ್ನು ಎಷ್ಟೋ ಬಾರಿ ನಾನು ಕೇಳಿದ್ದೇನೆ.....

ಇನ್ನು ನಾನು MA ಸೇರಿದೆ.... ಆಗಲು ಒಂದು ಹೊಸ ಬದಲಾವಣೆ......  ಪ್ರತಿ ವರ್ಷದಂತೆ ಆ ವರ್ಷವೂ ಗಣೇಶ ಹಬ್ಬ ಬಂತು....ಆಗ ನೋಡಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಸಹ ಬೀದಿ ಬೀದಿಗಳಲ್ಲಿ ಹೋಗುವವರನ್ನು ಬರುವವರನ್ನು ಅಡ್ಡಗಟ್ಟಿ ಚಂದ ವಸೂಲಿಗೆ ಇಳಿದುಬಿಟ್ಟಿದ್ದರು....ಅಯ್ಯೋ ಗಣೇಶ ನಿನ್ನ ಹಬ್ಬ ಆಚರಿಸಲು ನಮ್ಮೂರಿನ ಜನರಿಗೆ ಎಂತಹ ಬಡತನ ಕೊಟ್ಟುಬಿಟ್ಟೆ....ಎಲ್ಲರನ್ನು ಕಾಡಿ-ಬೇಡಿ ಇಲ್ಲ ಜಬರುದಸ್ತಿಯಿಂದ  ದುಡ್ಡು ಕೇಳಿ ಹಬ್ಬ ಆಚರಿಸ ಬೇಕೇ??? ಇಗ ನೋಡಿ "ಪಕ್ಷಕೊಂದು ಗಣೇಶ" ಹೋಗಿ  ನಮ್ಮೂರಿನ "ಗಲ್ಲಿಗೊಂದು ಗಣೇಶ" ಆಗಿಬಿಟ್ಟಿತು....  ಇತ್ತಿಚಿನ ವರ್ಷಗಳಲ್ಲಿ ನಮ್ಮೂರಿನಲ್ಲಿ ಗಣೇಶ ಹಬ್ಬ ಬಂತೆಂದರೆ ಸುಮಾರು 7 - 8  ಗಣೇಶನನ್ನು ಕಾಣಬಹುದು.....ನನ್ನೂರಿನಲ್ಲಿ ಇರುವುದು ಕೇವಲ 150  ಮನೆಗಳು....150  ಮನೆಗಳಿಗೆ 7 - 8  ಗಣೇಶ......

ಇನ್ನು ಇತ್ತಿಚಿನ ದಿನಗಳಲಿ ನಾನು ಕಂಡ ಇನ್ನೊದು ಬೆಳವಣಿಗೆಎಂದರೆ ಹಬ್ಬ ದಿನಗಳಲಿ ಏರ್ಪಡಿಸುವ archestra ....ಆಹಾ ಏನು ಗಣೇಶ ಎಂದಾದರೂ ನನ್ನ ಹಬ್ಬವನ್ನು ಈ ರೀತಿ ಆಚರಿಸಿ ಎಂದು ಹೇಳಿದ್ದನೆಯೇ.....ಕುಡಿದು.... ತುರಾಡಿ ಅಲ್ಲಿ ಹಾಡುವವರಿಗೆ ಅಸಭ್ಯವಾಗಿ ಬೈಯುತ್ತ....ಅಲ್ಲಿ ಹೊಟ್ಟೆ ಪಾಡಿಗಾಗಿ ಹಾಡುವ ಹೆಣ್ಣು ಮಕ್ಕಳನ್ನು ಕಿಟಲೆ ಮಾಡುತ್ತಾ.... ತಾವು ಹೇಳಿದ ಹಾಡನ್ನೇ ಹಾಡಬೇಕು ಎಂದು ವರ್ತಿಸುವ ನನ್ನೂರಿನ ಜನರನ್ನು ಕಂಡೆರೆ ಇತ್ತೀಚಿಗೆ ಒಂದು ರೀತಿಯ ದ್ವೇಷ ಹುಟ್ಟುತ್ತಿದೆ....ಇನ್ನು ಹಬ್ಬದ ಸಂದರ್ಭದಲ್ಲಿ ಜೋರಾಗಿ ದ್ವನಿವರ್ಧಕಗಳನ್ನೂ ಹಾಕಿ ತಮಗೆ ಇಷ್ಟ ಬಂದ ಸಿನಿಮ ಹಾಡುಗಳನ್ನು ಹಾಕುವ ಪರಿ ಆಹಾ ಆ ಗಣೇಶನೇ ಮೆಚ್ಚಬೇಕು.... ಅಂದು ಆಚರಿಸುತ್ತಿದ ನಮ್ಮೂರಿನ ಗಣೇಶನ ಹಬ್ಬಕ್ಕೂ ಇಂದು ಆಚರಿಸುತ್ತಿರುವ ಹಬ್ಬಕ್ಕೂ ನಿಜವಾಗಿಯೂ ಅಜಗಜಾಂತರ ವ್ಯತ್ಯಾಸ ಕಾಣುತ್ತದೆ....ದ್ವೇಷ....ಪಕ್ಷ....ನಾನೋ-ನೀನೋ ನೋಡಿಯೇ ಬಿಡೋಣ ಇಂದು ಒಬ್ಬರಿಗೊಬ್ಬರು ಸವಾಲು ಹಾಕಿದಂತೆ ಇಂದು ಹಬ್ಬ ಆಚರಿಸುತ್ತರೆಯೇ ಹೊರತು ಕಿಂಚಿತ್ತು ಭಕ್ತಿಯು ಅವರಲ್ಲಿ ಇಲ್ಲವಾಗಿದೆ..... ಎಲ್ಲರನ್ನು ಒಂದು ಮಾಡುವ ಉದ್ದೇಶದಿಂದ ಗಣೇಶ ಹಬ್ಬ ಆಚರಣೆ ಶುರುವಾಯಿತು ಆದರೆ ಇಂದು ಅದೇ ಹಬ್ಬ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಎಲ್ಲರು ಕಿತ್ತಾಡುವಂತಹ ಪರಿಸ್ತಿತಿ ಒದಗಿದೆ.... ಇಂತಹ ಬದಲಾವಣೆ ನನ್ನ ಊರಿನಲ್ಲಿ ಮಾತ್ರವಲ್ಲ ಇಂದು ಅನೇಕ ಹಳ್ಳಿಗಳಲ್ಲಿ ಇಂಥ ಪರಿಸ್ತಿತಿ ಇದೆ.....ನಮ್ಮ ಕೊಳಕು ರಾಜಕೀಯ ನಮ್ಮ ಹಬ್ಬ...ಆಚರಣೆಗಳ ಜೊತೆಗೆ ದಿನ ನಿತ್ಯ ಜೀವನನ್ನು ಕೊಳಕು ಮಾಡಿ ಬಿಟ್ಟಿದೆ.....ಇಲ್ಲಿ ಯಾರೂ ಯಾರ ಬಗ್ಗೆಯೂ ಆಲೋಚನೆ ಮಾಡುವುದಿಲ್ಲ....ಹಿಂದಿನ ದಿನಗಳಲಿ ಹಳ್ಳಿ ಜನರಲ್ಲಿ ಇದ್ದ ಪರಸ್ಪರ ಅವಲಂಬನೆ ಇಂದು ನಾವು ಕಾಣುವುದಿಲ್ಲ....ಎಲ್ಲವು ಬದಲಾಗಿದೆ........ಮನುಷ್ಯ....ಆತನ ಯೋಚನೆ......ಅದು ಕೇವಲ ತನ್ನ ಮತ್ತು ತನ್ನ ಮನೆಗೆ ಮಾತ್ರ ಸೀಮಿತವಾಗಿದೆ......ಸಮುದಾಯಕ್ಕಲ್ಲ.....ಎವೆಲ್ಲೆದಕ್ಕು ಕೊನೆ ಎಂದು???                                

 
                       

No comments:

Post a Comment