ಇತ್ತೀಚಿಗೆ ಎಲ್ಲೆ ಮೀರಿ ಮೂರ್ಖರ ಪೆಟ್ಟಿಗೆಯಲ್ಲಿ (TV ) ಪ್ರಸಾರವಾಗುತ್ತಿರುವ ರಿಯಾಲಿಟಿ ಷೋಗಳೆಂಬ ಅರ್ಥವಿಲ್ಲದ ಕಾರ್ಯಕ್ರಮಗಳನ್ನು ನೋಡಿ ನನಗೆ ಅನಿಸಿದ ಎರಡು ಮಾತುಗಳನ್ನು ಬರೆಯಲು ಇಷ್ಟಪಡುತ್ತೇನೆ..... ಜಗತ್ತಿನ ಅತ್ಯಂತ ಪ್ರಭಾವಿ ಸಮೂಹ ಮಾಧ್ಯಮಗಳಲ್ಲಿ ಬಹುಷಃ TV ಎಂಬ ಮಾಯಾಪೆಟ್ಟಿಗೆಯಷ್ಟು ಬೇರೆ ಯಾವುದೇ ಮಾಧ್ಯಮವು ತನ್ನ ಪ್ರಬಾವ ಬೀರುವುದಿಲ್ಲ.... ಇಂದು ಇದರ ಪ್ರಭಾವ ಎಷ್ಟಿದೆ ಎಂದರೆ ಹುಟ್ಟಿ ಕೆಲವೇ ತಿಂಗಳಾದ ಮಗುವಿನ ಅಳು ನಿಲ್ಲಿಸಲು TV ಹಾಕಿ ಅದರ ದ್ವನಿ ಕೇಳಿಸಿದರೆ ಸಾಕು...ಆ ಮಗು ಥಟ್ಟನೆ ಅಳು ನಿಲ್ಲಿಸುವುದು.....ಅಷ್ಟರ ಮಟ್ಟಿಗೆ ಇದು ಪ್ರಭಾವ ಬೀರುತ್ತಿದೆ..... ಚಿಕ್ಕ ಮಕ್ಕಳಿನಿಂದ ಹಿಡಿದು ವಯಸ್ಸಾದ ಹಿರಿಯ ಜೀವಿಗಳವರೆಗೆ TV ತಮ್ಮ ಸಮಯ ಕಳೆಯುವುದಕ್ಕೆ ಇರುವ ಒಂದು ಸಾಧನವಾಗಿಬಿಟ್ಟಿದೆ..... ನೀವು ಯಾರನ್ನಾದರೂ TV ಯನ್ನು ಏಕೆ ನೋಡುತ್ತಿರಿ ಎಂಬ ಪ್ರಶ್ನೆ ಕೇಳಿ ನೋಡಿ......ಬಹುತೇಕ ಮಂದಿ ಹೇಳುವ ಉತ್ತರ "TIME PASS " ಗಾಗಿ ಎಂದು ಹೇಳುತ್ತಾರೆ.....ಟೈಮ್ ಅನ್ನು ಯಾರೂ ಪಾಸ್ ಮಾಡಬೇಕಾಗಿಲ್ಲ ಅದು ನೀವು ಪಾಸ್ ಮಾಡಿದರು.... ಇಲ್ಲವಾದರೂ.... ಪಾಸ್ ಆಗುತ್ತಲೇ ಇರುತ್ತದೆ....ಅದರ ಜೊತೆಗೆ ಪಾಸ್ ಆಗಬೇಕಾದವರು ನಾವುಗಳು....
ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿ TV ಇರಲಿಲ್ಲ ಅಂದು ನಮ್ಮುರಿಗೆಲ್ಲ ಕೇವಲ ಒಂದು ಮನೆಯಲ್ಲಿ ಮಾತ್ರ TV ಇತ್ತು ನಾವೆಲ್ಲ ಒಂದು ವಾರದಲ್ಲಿ ಕೇವಲ ಎರಡು ದಿನ ಮಾತ್ರ TV ಅವರ ಮನೆಗೆ ನೋಡಲು ಹೋಗುತ್ತಿದ್ದೆವು.... ಪ್ರತಿ ಬುಧವಾರ ಬರುತ್ತಿದ್ದ ಚಿತ್ರ ಮಂಜರಿ ಮತ್ತು ಭಾನುವಾರ ಬರುತ್ತಿದ್ದ ಹಿಂದಿಯ ರಾಮಾಯಣ ಕಾರ್ಯಕ್ರಮ......ಆದರೆ ಇಂದು ಪ್ರತಿ ಮನೆ ಅಷ್ಟೆ ಏಕೆ ಗುಡಿಸಲುಗಳಲ್ಲಿ ವಾಸಿಸುವವರು TV ಹೊಂದಿರುತ್ತಾರೆ....ಮನೆಯಲ್ಲಿ TV ಇರುವುದು ಅವರ ಪ್ರತಿಷ್ಠೆಯ ಜೊತೆಗೆ ಮೂಲಭೂತ ಅಗತ್ಯಗಳಲ್ಲಿ ಒಂದು ಎಂಬಂತೆ ಆಗಿಬಿಟ್ಟಿದೆ.... ಅಂದರೆ ಜನರು ಟಿವಿಯ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆ ಅಲ್ಲವೇ???
ಜನರ ಈ ಅವಲಂಬನೆಯನ್ನೇ ಲಾಭವಾಗಿಸಿಕೊಂಡು ಇಂದು ಖಾಸಗಿ ಚಾನೆಲ್ ಗಳ ದರ್ಬಾರ್ ಗಳನ್ನೂ ಹೇಳಲು ಪದಗಳೇ ಸಾಲದು.... ಕೇವಲ ಬೆರಳೆಣಿಕೆಯಷ್ಟು ಇದ್ದ ಚಾನೆಲ್ ಗಳ ಸಂಖ್ಯೆ ಇಂದು ೨೦೦ -೨೫೦ರ ವರೆಗೆ ಧಾಟಿದೆ.....ಇನ್ನು ಕೆಲವು ಚಾನೆಲ್ ಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಗೋಳನ್ನು ಹೇಳತೀರಲಗದು. ಹಿಂದಿ, ತಮಿಳು, ತೆಲುಗು ಧಾರಾವಾಹಿಗಳನ್ನೇ ಕನ್ನಡಕ್ಕೆ ಬಟ್ಟಿ ಇಳಿಸುವ ವೈಕರಿ ಅಬ್ಬಬ!!! ಇನ್ನು ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದಾಗ ರಿಯಾಲಿಟಿ ಷೋ ಗಳೆಂಬ ಎಲ್ಲೆ ಮೀರಿದ ಹೊಸ ಕಾರ್ಯಕ್ರಮಗಳು ಅಬ್ಬರ.... ಮೊದಮೊದಲಿಗೆ ನಾನು ಕೂಡ ಈ ಷೋಗಳನ್ನೂ ನೋಡುತ್ತಾ ಅದನ್ನೇ ಮನರಂಜನೆ ಎಂದು ಕೊಂಡಿದ್ದೆ.... ಪ್ರತಿ ಷೋಗಳಲ್ಲೂ ನಿರೂಪಕರು ನೆಡಿಸಿಕೊಡುವ ರೀತಿ ಅದನ್ನು ನೋಡಲು ಒಂದು ರೀತಿಯ ಸಂತೋಷ ಅನುಭವವಾಗುತ್ತಿತ್ತು....ಆದರೆ ಇತ್ತೀಚಿಗೆ ಚಾನೆಲ್ ಗಳು ತಮ್ಮ ಜನಪ್ರಿಯತೆಗಳನ್ನು ಹೆಚ್ಚಿಸಿಕೊಳ್ಳಲು, ಲಾಭ ಸಂಪಾದನೆಯ ಮನೋಭಾವದಿಂದ ತಮ್ಮ ಷೋ ಗಳಲ್ಲಿ ಭಾಗವಹಿಸುವವರನ್ನ ನಡೆಸಿಕೊಳ್ಳುವ ರೀತಿಯನ್ನು ನೋಡಿದಾಗ ಸಮಾಜವನ್ನು ಒಂದು ಒಳ್ಳೆಯ ಮಾರ್ಗದಲ್ಲಿ ತೆಗೆದುಕೊಂಡು ಹೋಗುವಲ್ಲಿ ಮುಖ್ಯ ಪಾತ್ರ ವಹಿಸುವ TV ಮಾಧ್ಯಮದ ಬಗ್ಗೆ ಕೀಳು ಭಾವನೆ ಹುಟ್ಟುತ್ತದೆ.....
ಇಂದು ನಾವು ಪ್ರತಿ ನಿತ್ಯ ಅನೇಕ ರಿಯಾಲಿಟಿ ಷೋ ಗಳನ್ನೂ ನೋಡುತ್ತೇವೆ.....ಮೊದಲ ಬಾರಿಗೆ ಈ ಷೋ ಗಳು ಜನರ ಮನ ಗೆದ್ದರು ಬರುಬರುತ್ತಾ ಇವುಗಳ ಹಾವಳಿ ಹೇಳಲು ಅಸಾಧ್ಯ....ಇನ್ನು ಇತ್ತೀಚಿನ ಷೋ ಗಳಲ್ಲಿ ನಿರೂಪಕ, (ಹೆಚ್ಚಾಗಿ) ನಿರೂಪಕಿ ಮಣಿಯರು ಧರಿಸುವ ಉಡುಪುಗಳೋ ಅಯ್ಯೋ ಇವರಿಗೆ ಇದೆಂತಹ ಬಟ್ಟೆಯ ಬಡತನ ಬಂದಿದೆ ಎನ್ನುವಂತಾಗಿದೆ...ಕಾರ್ಯಕ್ರಮದ ಶುರುವಿನಲ್ಲೋ ತಮಗೆ ತಾವೇ ಕರ್ನಾಟಕದ No .1 ರಿಯಾಲಿಟಿ ಷೋ ಎಂದು ಹೇಳುವ ನಿರೂಪಕಿ ಮಣಿಯರು ಇಂಥಹ No .1 ರಿಯಾಲಿಟಿ ಷೋಗಳನ್ನೂ ಮತ್ತು ತಮ್ಮನ್ನು ಮನೆಮಂದಿಯೆಲ್ಲ ಕೂತು ನೋಡುವ ಮಂದಿ ಇದ್ದಾರೆ ಎಂಬುದನ್ನು ಮರೆತಿದ್ದಾರೆನೋ ಎಂಬಂತೆ ಅನಿಸುವುದು ಸಹಜ... ಇನ್ನು ಕೆಲವು ದಿನಗಳಿಂದ ಪ್ರಸಾರವಾಗುತ್ತಿರುವ ಒಂದು ರಿಯಾಲಿಟಿ ಷೋ ಬಗ್ಗೆ ಹೇಳಲೇ ಬೇಕು....ಹೌದು "ಅದು ಹಳ್ಳಿ ಹೈದ ಪ್ಯಾಟೆಗ್ ಬಂದ" ಎಂಬ ಷೋ....ಕರ್ನಾಟಕದ ಗುಡ್ಡಗಾಡಿನ ಯುವಕರರಿಗೆ ಪ್ಯಾಟೆ ಲೈಫ್ ತೋರಿಸಿ ಆಟ ಆಡಿಸುವ ಈ ರಿಯಾಲಿಟಿ ಷೋ ಮೊದಲು ನನ್ನಲ್ಲಿ ಒಂದು ರೀತಿಯ ಕೂತುಹಲ ಮೂಡಿಸಿತ್ತು ಆದರೆ ನೋಡುತ್ತಾ ನೋಡುತ್ತಾ ರಿಯಾಲಿಟಿ ಷೋನ ಹೆಸರಿನಲ್ಲಿ ಆ ಮುಗ್ದ ಹುಡುಗರಿಗೆ ಅವಮಾನ ಮಾಡುವ ಪರಿ ನೀವು ಕೂಡ ನೋಡಿದ್ದಿರಿ ಎಂದು ನನ್ನ ತಿಳಿದಿದ್ದೇನೆ.... ಮಾನವೀಯ ಮೌಲ್ಯಗಳನ್ನು ಮರೆತು ಈ ಷೋ ನಲ್ಲಿ ಹಿನ್ನೆಲೆ ದ್ವನಿಯಲ್ಲಿ ಹೇಳುವ ಮಾತುಗಳನ್ನು ಕೇಳಿದಾಗ ಕೆಳುಗರಿಗೆನೋ ಒಂದು ರೀತಿಯ ತಮಾಷೆ ಎನಿಸಿದರೂ..... ಒಂದು ಜವಾಬ್ಧಾರಿಯುತ ಹೊಣೆ ಹೊತ್ತ ಚಾನೆಲ್ ಮಾಡುವ ಕೆಲಸ ಇದಲ್ಲವೆಂಬುದು ನನ್ನ ವಾದ.....ಇನ್ನು mentor ಗಳೆಂಬ ನಟಿಮಣಿಯರು.... ಅವರುಗಳು ಹಾಕುವ ಬಟ್ಟೆಗಳು...ಆ ಮುಗ್ದ ಹುಡುಗರೊಂದಿಗೆ ನಡೆದುಕೊಳ್ಳುವ ರೀತಿ....ಇವೆಲ್ಲವುಗಳನ್ನು ನೋಡಿದಾಗ ಬೆಂಗಳೂರಿನಲ್ಲಿ ಇಂಗ್ಲಿಷ್ ಕಾನ್ವೆಂಟ್ ಗಳಲ್ಲಿ ಓದಿ....ಡಿಗ್ರಿ ಪಡಿದಿರುವ....ನಾಗರಿಕತೆ ತಿಳಿದಿರುವರಂತೆ ಬೀಗುವ ಇವರುಗಳಿಗಿಂತ ನಾಗರೀಕ ಸಮಾಜದಿಂದ ಬಹುದೂರ ಇದ್ದು ನಾಗರಿಕತೆ ಎಂಬುದೆನೆಂದು ತಿಳಿಯದೆ ಇದ್ದರು ಅವರುಗಳು ಹುಡಿಗಿಯರೊಂದಿಗೆ ನಡೆದುಕೊಳ್ಳುವ ರೀತಿಯೇ ಎಷ್ಟೋ ಮೇಲೂ ಎನಿಸುತ್ತದೆ.....
ಇನ್ನು ಇವರಿಗೆ "ಟಾಸ್ಕ್" ಎನ್ನುವ ಹೆಸರಿನಲ್ಲಿ ಕೊಡುವ ಹಿಂಸೆ ನೋಡುವ ವಿಕ್ಷಕರಿಗೆ (ಕೆಲವರಿಗೆ ಮಾತ್ರ) ಮನರಂಜನೆ ಎನಿಸಿದರೂ ನಿಜವಾಗಿಯೂ ಇಷ್ಟು ಕ್ರೂರವಾಗಿ ನಡೆಸಿಕೊಳ್ಳುವುದೇ ಮನರಂಜನೆಯೇ?? ಎಂಬುದೊಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ.....ಅಸಲಿಗೆ ಇವರಿಗೆ ನೀಡುವ ಟಾಸ್ಕ್ ಗಳನ್ನೂ ನೋಡಿ....MG Road , Bridage Road , Mall ಗಳಿಗೆ ಬರುವ ಅದರಲ್ಲೂ ಹುಡುಗಿಯರ mobile ನಂಬರ್ ತೆಗೆದುಕೊಳ್ಳುವುದು......ತಮ್ಮ mentor ಎಂದು ಕರೆಸಿಕೊಳ್ಳುವ ನಟಿಮಣಿಯರನ್ನು ಎತ್ತಿಕೊಂಡು ಕೆಸರಿನಲ್ಲಿ ಓಡುವುದು.....ಅದನ್ನು ಮಾಡದೇ ಸೋತಾಗ elimination ಮಾಡುವುದು..... ಅಲ್ಲಾ ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಯಾರನ್ನಾದರೂ ಹೆಸರು ಕೇಳಿದರೆ ಹೇಳುವುದೇ ಕಷ್ಟ ಅಂತಹದರಲ್ಲಿ ಪಾಪ ಬೆಂಗಳೂರು ಎಂದರೆ ಏನು ಅಂತ ತಿಳಿಯದೆ ಇರುವ ನೋಡಲು ಕಾಡು ಮನುಷ್ಯರಂತೆ ಒರಟಾಗಿ ಕಾಣುವ ಇವರಿಗೆ ಅದು ನಮ್ಮ ಬೆಂಗಳೂರಿನ ಹುಡುಗಿಯರು ತಮ್ಮ ಮೊಬೈಲ್ ನಂಬರ್ ಕೊಡುವರೇ???....... ಇದರ ಮಧ್ಯೆ ಈ task ಗಳನ್ನೂ ಮಾಡಲು ವಿಫಲರಾದ ಹುಡುಗರಿಗೆ ನಟಿಮಣಿಯರಿಂದ ಸಿಗುವ ಬೈಗುಳ....ಹೊಡೆತ...ಅಣಕಿಸಿ ಮಾತನಾಡುವ ಶೈಲಿ...ಇವೆಲ್ಲವನ್ನು ನೋಡಿದಾಗ ನಿಜವಾಗಿಯೂ ಇಂಥಹ ರಿಯಾಲಿಟಿ ಷೋ ಗಳ ಅಗತ್ಯವೆನಾದರೂ ನಮಗೆ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ.... ಮೊನ್ನೆ ನಾನು ನೋಡಿದ episode ಒಂದರಲ್ಲಿ ಇದ್ದ ಟಾಸ್ಕ್ ನೋಡಿ ನಾನು ನಿಜಕ್ಕೂ ದಂಗಾದೆ!!! ಅದು ಕುಸ್ತಿ ಆಡುವುದು.... ಅದು ಕೇವಲ ಹುಡುಗರಿಗೆ ಮಾತ್ರ ಅಲ್ಲಾ ನಟಿಮಣಿಯರಿಗೂ ಸಹ...... ಕುಸ್ತಿ ಆಡುವುದು ಮೊದಲಿಂದಲೂ ನಮ್ಮ ದೇಶದಲ್ಲಿ ಕಾಣುವ ಆಟ...ಆದರೆ ಹುಡುಗಿಯರು ತುಂಡು ಬಟ್ಟೆ ತೊಟ್ಟು WWE ಆಡುವುದೆಂದರೆ??? ಇಂಥಹ ಪಾಶ್ಚಾತ್ಯ ಶೈಲಿಯ ಆಟಗಳನ್ನು ಆಡಿಸುವ ಅಗತ್ಯವೆನಾದರೂ ಇದೆಯೇ??? ನಮ್ಮ ದೇಶದ ಹೆಣ್ಣಿಗೆ ಒಂದು ಪವಿತ್ರವಾದ ಗೌರವ, ಸ್ಥಾನ ನೀಡಿರುವ ನಾವುಗಳು ಈ ರೀತಿ ತುಂಡು ಉಡುಪು ತೊಟ್ಟು ಜಗಳವಾಡುವುದನ್ನು ನೋಡಿ ಖುಷಿ ಪಡುವುದೇ ಮನರಂಜನೆಯೇ?? ಇದನ್ನೇ ನಾವು ಮನರಂಜನೆ ಎನ್ನುವುದಾದರೆ ನಮ್ಮ ನಮ್ಮ ನೈತಿಕ ಮೌಲ್ಯದ ಅದಃಪತನ ಅಲ್ಲವೆ???
ಕೊನೆಯದಾಗಿ ನಾನು ನಿಮ್ಮ ಮುಂದೆ ಇಡುವ ಪ್ರಶ್ನೆ...... ಕಾಡಿನಿಂದ ಕರೆತಂದ ಆ ಹುಡುಗರನ್ನು ಜವಾಬ್ಧಾರಿಯುತ ನಾಗರಿಕನನ್ನಾಗಿ ಮಾಡುವ ಕಾರ್ಯ ಮರೆತು ಕೇವಲ ತಮ್ಮ ಚಾನೆಲ್ ಪ್ರಚಾರಕ್ಕೆ.....ಜಾಹಿರಾತಿನಿಂದ ಬರುವ ದುಡ್ಡಿಗೆ......ಈ ರೀತಿ ನಡೆಸಿಕೊಳ್ಳುವ ಇಂತಹ ಷೋ ಗಳು ನಿಜವಾಗಿಯೂ ನಮಗೆ ಅಗತ್ಯವಿದೆಯೇ??? ಇದೊಂದೇ ಷೋ ಅಲ್ಲಾ ಬಹುತೇಕ ಕನ್ನಡ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ಇಲ್ಲ ಡಾನ್ಸ್ ರಿಯಾಲಿಟಿ ಷೋ ಗಳು ಸಹ ಇದನ್ನೇ ಮಾಡುತ್ತಿವೆ....ಕೇವಲ ಒಂದು - ಎರಡು ಚಿತ್ರಗಳಲ್ಲಿ ನಟಿಸಿದ ಮಾತ್ರಕ್ಕೆ ಅವರನ್ನು chief judge ಎಂದು ಕೂರಿಸುವ.....ಡಾನ್ಸ್ ನ ಗಂಧವೇ ತಿಳಿಯದ ಅವರು ಕಷ್ಟ ಪಟ್ಟು ಡಾನ್ಸ್ ಕಲಿತು ಅವರ ಮುಂದೆ ಡಾನ್ಸ್ ಮಾಡುವ ಸ್ಪರ್ಧಿಗಳಿಗೆ ನೀಡುವ ಪ್ರತಿಕ್ರಿಯೆಯನ್ನು ಆ ದೇವರೇ ಅಲ್ಲಲ್ಲ ಆ ಷೋ ನ ಆಯೋಜಕರೆ ಮೆಚ್ಚಬೇಕು......
ನಿಮ್ಮ ಬ್ಲಾಗ್ ಅದ್ಬುತವಾಗಿದೆ, ಆದರೇ, ಸಾಮಾಜಶಾಶ್ತ್ರಜ್ನೆ ಎನಿಸಿಕೊಂಡಿರುವ ನೀವುಗಳೇ ಇಷ್ಟು ತಡವಾಗಿ, ಕೇವಲ ಬ್ಲಾಗಿನಲ್ಲಿ ಕೆಂಡಕಾರಿದರೇ? ಇದರ ಬಗ್ಗೆ ಯಾವುದೇ ದೈನಿಕ ದಲ್ಲಿ ಬಂದಿಲ್ಲ, ಟಿವಿಗಳಲ್ಲಿಯೂ ಇಲ್ಲ. ಸಮಾಜಶಾಶ್ತ್ರ, ಮಾನವ ಹಕ್ಕುಗಳು, ನೀತಿ ನಿಯತ್ತು ಎಂದು ಬರಿ ಪುಸ್ತಕದಲ್ಲಿ, ನಿಮ್ಮ ಸಂಶೋಧನ ರಿಪೋರ್ಟ್ ಗಳಿಗೆ ಸೇರಿಸಿ ಐಸೆಕ್ ನ ಬೀರುವಿನಲ್ಲಿಟ್ಟರೇ ಸಾಕೆ? ಇದರ ವಿರುದ್ದ ಅಥವಾ ಇಂಥಹ ಕಾರ್ಯಕ್ರಮಗಳ ವಿರುದ್ದ ಸರಿಯಾದ ಕ್ರಮ ಜರುಗಿಸಲು ಬೇಕಾದ್ದನ್ನು ಮಾಡಿ.
ReplyDelete