ಪುಟಗಳು

03 September 2010

ಭ್ರಷ್ಟಾಚಾರ ಮತ್ತು ನಾವು !!!

ಪ್ರತಿ ಬಾರಿ ನಾವು ಯಾವುದಾರೊಂದು ವಿಷಯದ ಸಾದಕ-ಬಾದಕ ಬಗ್ಗೆ ಚರ್ಚೆ ಮಾಡುವಾಗ ಸಾಮಾನ್ಯವಾಗಿ ಬರುವ ಪದ ಭ್ರಷ್ಟಾಚಾರ.....ಇಂದು ಭ್ರಷ್ಟಾಚಾರ ಎಲ್ಲ ಕಡೆಯಲ್ಲೂ ತುಂಬಿ ತುಳುಕಾಡುತ್ತಿದೆ.....ಭ್ರಷ್ಟಾಚಾರ ಎಂದಾಕ್ಷಣ ನೆನಪಿಗೆ ಬರುವುದು ನಮ್ಮೆಲ್ಲ ನೆಚ್ಚಿನ (?) ಇಂದಿನ ರಾಜಕಾರಣಿಗಳು....ಹೌದು ಸಾಮನ್ಯವಾಗಿ ನಾವೆಲ್ಲ ತಿಳಿದಿರುವುದು ಎಲ್ಲಿ ರಾಜಕಾರಣಿಗಳಿರುತ್ತಾರೋ ಅಲ್ಲಿ ಭ್ರಷ್ಟಾಚಾರ ಇರುತ್ತದೆ, ಅವರೇ ಭ್ರಷ್ಟಾಚಾರವನ್ನು ಬೆಳೆಸುತ್ತಿರುವುದು  ಎಂದು ಅಲ್ಲವೇ ??? ಆದರೆ ನಮ್ಮ ಈ ನಿಲುವನ್ನು ಸ್ವಲ್ಪ ಓರೆ ಹಚ್ಚಿ ನೋಡಿದಾಗ ಭ್ರಷ್ಟಾಚಾರ ಬೆಳೆಸುತ್ತಿರುವುದು  ರಾಜಕೀಯ ವ್ಯಕ್ತಿಗಳಾಗಲಿ ಅಥವಾ ಸರ್ಕಾರೀ ಅಧಿಕಾರಿಗಳಗಲಿ ಅಲ್ಲ, ಬದಲಾಗಿ  ಭ್ರಷ್ಟಾಚಾರವೆಂಬ ಪೆಡಂಭೂತವನ್ನು ಇಲ್ಲಿಯವರೆಗೂ ಸಾಕಿ, ಬೆಳಸಿ, ಭವಿಷ್ಯದಲ್ಲಿಯೂ ಇದನ್ನು ಬೆಳೆಸಿಕೊಂಡು ಹೋಗುವ ಸೂಚನೆ ನೀಡುತ್ತಿರುವುದು ಪ್ರಜೆಗಳೇ, ಅಂದರೆ ನಾವುಗಳೇ....ಇದನ್ನು ಎಲ್ಲರು ಒಪ್ಪಲೇ ಬೇಕಾದ ಮಾತು, ಒಪ್ಪದಿದ್ದರೂ ಇದು ಸತ್ಯವೇ ತಾನೆ??

ಇಂದು ನಾವು  ಭ್ರಷ್ಟಾಚಾರವನ್ನು ಸರ್ವಸಮ್ಮತದಿಂದ ಒಪ್ಪಿ, ಅದನ್ನು ಪ್ರಶ್ನಿಸುವ ಅಥವಾ ಅದನ್ನು ವಿರೋಧಿಸುವ ಗೋಜಿಗೆ ಹೋಗದೆ ತಮ್ಮ ಸ್ವಂತ ಕೆಲಸವಾದರೆ ಸಾಕು ಅದಕ್ಕಾಗಿ ಎಷ್ಟು ಹಣವನ್ನದರು ಖರ್ಚು ಮಾಡಲು ಸಿದ್ದವಿದ್ದೇವೆ ಎಂಬ ಮನೋಭಾವನೆ ಬೆಳೆಸಿಕೊಂಡಿದ್ದೇವೆ...... ಭ್ರಷ್ಟಾಚಾರದ ವಿರುದ್ದ ಹೊರಡಲು ಇಂದು ನಮಗೆ ಸಮಯವೇ ಇಲ್ಲವಂತಾಗಿದೆ ಕಾರಣ ನಮಗೆ ನಮ್ಮ ದೇಶದ ಭವಿಷ್ಯದ ಬಗ್ಗೆ ಕಾಳಜಿಯಾಗಲಿ,  ಯಾವುದೇ ಚಿಂತೆಯಾಗಲಿ  ಇಲ್ಲ....ಯಾರು, ಯಾವುದು  ಹೇಗಾದರೂ ಇರಲಿ ನಮ್ಮ ಕೆಲಸ ಆಗಿ ನಾವು ನೆಮ್ಮದಿ ಇಂದ ಜೀವನ ನಡೆಸಿದರೆ ಸಾಕು ಎಂದು ಯೋಚಿಸುವರೆ ಹೆಚ್ಚು.ಅಸಲಿಗೆ ಈ  ಭ್ರಷ್ಟಾಚಾರದ ಬೇರು ಹೊಟ್ಟುವುದು ಎಲ್ಲಿಂದ?? ಈ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಸಿಗುವ ಉತ್ತರ "ಮನೆಯೇ ಮೊದಲ ಪಾಠಶಾಲೆ" ಎಂಬಂತೆ ಇದರ ಹುಟ್ಟಿಗೂ ನಮ್ಮ ಮನೆಗಳೇ ಕಾರಣ, ಇದು ನನ್ನ ವಯುಕ್ತಿಕ ಅಭಿಪ್ರಾಯ....  ಹಿಂದಿಂದ ಕಾಲದ ಲಕ್ಷಿಧಾರಾಮಾತ್ಯ ಎಂಬ ಶಾಸನ ಒಂದರಲ್ಲಿ ತಾಯಿ ತನ್ನ ಮಗುವಿಗೆ ಹೇಳಿಕೊಡುತ್ತಿದ್ದ ಕೆಲವು ಸಾಲುಗಳಿವೆ....."ಕೆರೆಯನ್ನು ಕಟ್ಟಿಸು, ಬಾವಿಯನ್ನು ತೆಗೆಸು, ದೇವಾಲಯ ನಿರ್ಮಿಸು, ನಂಬಿದವರಿಗೆ ನೆರವಾಗು, ದೀನರು ಅನಾಥರನ್ನು ಸಲಹು, ಅಪಾಯದಲ್ಲಿ ಇರುವವರನ್ನು ರಕ್ಹ್ಸಿಸು"  ಎಂದು ಆದರೆ ನಮ್ಮ ಇಂದಿನ modren  ತಾಯಂದಿರು ತಮ್ಮ ಮಕ್ಕಳಿಗೆ ಹೇಳಿಕೊಡುವುದು ಚೆನ್ನಾಗಿ ಓದು, ಒಳ್ಳೆಯ ಕೆಲಸಕ್ಕೆ ಸೇರು, software ಇಂಜಿನಿಯರ್,doctor ಆಗು, ವಿದೇಶಕ್ಕೆ ಹೋಗು, ಚೆನ್ನಾಗಿ ಸಂಪಾದನೆ ಮಾಡಿ ಆಸ್ತಿ ಸಂಪಾದಿಸು, ಯಾರನ್ನು ನಂಬಬೇಡ...... ಎಂದು. ಯಾವುದೇ ಮೌಲ್ಯಾಧಾರಿತ ಗುಣಗಳನ್ನು ಕಲಿಸುವ ಗೋಜಿಗೆ ಅವರು ಹೋಗುವುದಿಲ್ಲ....ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳು ದೇಶಕ್ಕೆ ಒಳ್ಳೆಯ ಪ್ರಜೆಗಳಾಗಳು ಸಾಧ್ಯವೇ??

ಇತ್ತಿಚೆಗೆ ನಮ್ಮ ರಾಜ್ಯಪಾಲರು ಭಾಷಣ ಒಂದರಲ್ಲಿ  ಹೇಳಿದ ಮಾತು ವಿಶ್ವವಿದ್ಯಾಲಯದ VC  ಒಬ್ಬರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಕಳುಹಿಸ ಬೇಕೆಂಬುದಕ್ಕೆ ಅವರು ನೀಡಿದ ಉತ್ತರ "ಹಾಗೆ  ಭ್ರಷ್ಟಾಚಾರದ ಆರೋಪದ ವಿಶ್ವವಿದ್ಯಾಲಯದ VC ಯನ್ನು ಜೈಲಿಗೆ ಕಳುಹಿಸಬೇಕಾದರೆ ನಮ್ಮ ಎಲ್ಲ ವಿಶ್ವವಿದ್ಯಾಲಯದ VC ಜೈಲಿಗೆ ಕಳುಹಿಸಬೇಕಾಗುತ್ತದೆ" ಎಂದು....ಎಲ್ಲಿ ಸ್ವತಃ ನಮ್ಮ ರಾಜ್ಯಪಾಲರೇ ಭ್ರಷ್ಟಾಚಾರಕ್ಕೆ ಉತ್ತೆಜನಕಾರಿಯಾದ ಮಾತುಗಳನ್ನಾಡಿ ಇನ್ನು ಉಳಿದ ಅಧಿಕಾರಿಗಳಿಗೆ ಭ್ರಷ್ಟಾಚಾರವನ್ನು ಮಾಡಲು ಪರೋಕ್ಷವಾಗಿ ಹುರಿದುಂಬಿಸುವ ಕಾರ್ಯ......ಇಲ್ಲಿ ನಾನು ಹೇಳಲು ಬಯಸುವುದೇನೆಂದರೆ "ಎಲ್ಲರು ಭ್ರಷ್ಟರೇ ಆದ್ರೆ ಅಧಿಕಾರ ಇಲ್ಲದವರು ಮಾತ್ರ ಪ್ರಾಮಾಣಿಕವಾಗಿರುತ್ತಾರೆ"....

ಇಂದು ಭ್ರಷ್ಟಾಚಾರ ಎಂಬುದನ್ನು ನಾವು ಗುಂಪುಗಳಲ್ಲಿ ಚರ್ಚಿಸುವ, ಸಮಯ ಕಳೆಯಲು ಮಾತನಾಡುವ ಒಂದು ಚರ್ಚಾ ವಿಷಯವಾಗಿ ಹೋಗಿಬಿಟ್ಟಿದೆ ಹೊರತು ಅದನ್ನು ಪರಿಣಾಮಕಾರಿಯಾಗಿ ವಿರೋಧಿಸುವ ಪ್ರಯತ್ನ ನಮ್ಮದಲ್ಲ ಅದಕ್ಕಾಗಿ ಲೋಕಾಯುಕ್ತ ಸಂಸ್ಥೆ ಇದೆ ಎಂದು ಸುಮ್ಮನೆ ಕೂತಿದ್ದೇವೆ....ಸಾಮಾನ್ಯವಾಗಿ ದಿನ ನಿತ್ಯದ ಜೀವನದಲ್ಲಿ ಇಂಥಹ ಕೆಲವು ಮಾತುಗಳನ್ನು ನಾವು ಕೇಳುತ್ತಿರುತ್ತೇವೆ.....ಅಯ್ಯೋ ಬಿಡಿ ಈಗ ದೊಡ್ದು ಒಂದಿದ್ದರೆ ಸಾಕು ಯಾವ ಕೆಲಸ ಬೇಕಾದರೂ ಚಿಟಿಕೆ ಹೊಡೆಯುವಷ್ಟರಲ್ಲಿ ಆಗುತ್ತದೆ, ಅವಿನಿಗೇನು ತುಂಬ ದುಡ್ಡು ಸಂಪಾದನೆ ಮಾಡಿದ್ದಾನೆ ಬಿಡಿ, ಅಯ್ಯೋ ನಾನು ಆ department ನಲ್ಲಿ ಇರಬೇಕಾಗಿತ್ತು ಚೆನ್ನಾಗಿ ಸಂಪಾದಿಸಬಹುದಿತ್ತು, ಹೀಗೆ  ನಮ್ಮೆಲ್ಲರ ಕೇಂದ್ರ ಬಿಂದು ಒಂದೇ ಅದು ಹಣ....ಅದರ ಸಂಪಾದನೆಗಾಗಿ ಯಾವ ಮಾರ್ಗ ಬೇಕಾದರೂ ಹಿಡಿಯಬಹುದು ಎಂಬ ಮನೋಭಾವನೆ ನಮ್ಮದು....ಇನ್ನು ಸರ್ಕಾರೀ ಕೆಲಸಗಳ ವಿಷಯಕ್ಕೆ ಬಂದರೆ ಎಷ್ಟು ಲಕ್ಷ ಬೇಕಾದರೂ ಕೊಡಲು ಸಿದ್ದವಿದ್ದೇವೆ ದಯವಿಟ್ಟು ಆ ಕೆಲಸ ನಮ್ಮವರಿಗೆ ಕೊಡಿ ಎಂದು ಕೇಳುವ ಜನರಿದ್ದಾರೆ...ಅಷ್ಟು ಲಕ್ಷ ಕೊಟ್ಟಿ ಆ ಕೆಲಸ ಗಿಟ್ಟಿಸಿಕೊಂಡ ಆತ ಕೇವಲ ಅವನಿಗೆ ಬರುವ ಸಂಬಳದಿಂದ ತೃಪ್ತಿ ಹೊಂದುತ್ತನೆಯೇ?? ಇಲ್ಲ ಮತ್ತೆ ಆದೆ ಚಾಳಿ ಲಂಚ ಕೊಡಿ ನಿಮ್ಮ ಕೆಲಸ ಮಾಡಿಕೊಡಲು ರೆಡಿ.....ಇದಕ್ಕೆಲ್ಲ ಯಾರು ಕಾರಣ ವ್ಯವಸ್ಥೆಯೋ? ಇಲ್ಲ ಅದನ್ನು ಪೋಷಿಸುತ್ತಿರುವ ನಾವೋ?? ಸರ್ಕಾರ ಬಡವರಿಗಾಗಿ ನೀಡುವ ಸವಲತ್ತುಗಳನ್ನು ಪಡೆಯಲು ಲಂಚ, ಸರ್ಕಾರೀ ಕೆಲಸಕ್ಕಾಗಿ ಲಂಚ, ಕಾಲೇಜುಗಳಲ್ಲಿ  ಸೀಟ್  ನೀಡಲು ಲಂಚ, ಸರ್ಕಾರೀ ಆಸ್ಪತ್ರೆಗಳಲ್ಲಿ  ಸೌಕರ್ಯ ಪಡೆಯಲು ಲಂಚ, ಹೆಣ್ಣು ಮಕ್ಕಳ ಮದುವೆ ಮಾಡಲು ವರನಿಗೆ ಲಂಚ, ಹೀಗೆ ಭ್ರಷ್ಟಾಚಾರ ಎಂಬುದು ನಮ್ಮ ಮನೆಗಳಿಂದ ಬೆಳೆದು ಇಡೀ ರಾಷ್ಟ್ರ ವನ್ನೇ ಆವರಿಸಿ ಬಿಟ್ಟಿದೆ...ದೇವರ ಅಪ್ಪಣೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು ಎಂಬುದು ಅಂದಿನ ಮಾತು ಆದರೆ ಈಗ ಲಂಚ ನಿಡದೇ ಇದ್ದಾರೆ ಒಂದು ಹುಲ್ಲು ಕಡ್ಡಿಯನ್ನು ಅತ್ತಿಂದ ಇತ್ತ ಹಾಕುವುದಿಲ್ಲ ಎಂಬ ಅಧಿಕಾರಿಗಳು.... ಇಂದು ಸಾಮಾನ್ಯ ಮನುಷ್ಯ ಎಂಥಹ ಸ್ಥಿತಿ ತಲುಪಿದ್ದಾನೆ ಎಂದರೆ ಭ್ರಷ್ಟಾಚಾರ ಎಂಬುದು ಇಲ್ಲ ಕಡೆಯಲ್ಲೂ ಇದೆ ಅದನ್ನು ಒಪ್ಪಿಕೊಳ್ಳದೆ ಬದುಕಲು ಬೇರೆ ದಾರಿಯೇ ಇಲ್ಲ ಎಂದು ಅದನ್ನು ಪೋಷಿಸುವ ದೈರ್ಯ ಮಾಡಿದ್ದಾನೆ, ಯಾವುದನ್ನು ಬದಲಾಯಿಸುವ ಮನಸ್ಸು ಮಾಡದೇ ಇದ್ದ ಹಾಗೆ ಇರಲಿ, ನಾವು, ನಮ್ಮ ಮನೆ ಎಂದು ಎಲ್ಲಿಯವರೆಗೂ ಬದುಕುತ್ತಿವೋ ಅಲ್ಲಿಯವರೆಗೆ ಇಂತಹ ಅನಿಷ್ಟಗಳನ್ನೂ ಹೋಗಲಾಡಿಸುವ ದೈರ್ಯ ಬರುವುದಿಲ್ಲ....  ನಮ್ಮ ರಾಜಕಾರಣಿಗಳೋ ಅವರು ಎಲ್ಲಿದ್ದರು ಸುಖಿ ಜೀವಿಗಳು ಎಲ್ಲಾ ಅಧಿಕಾರಿಗಳು ತೆಗೆದುಕೊಳ್ಳುವ ಲಂಚದಲ್ಲಿ  ಅವರ ಪಾಲು ಇದ್ದೆ ಇರುತ್ತದೆ ಇನ್ನು ಅವರು ಸಾಮಾನ್ಯ ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಜಾತಿ ರಾಜಕೀಯದಲ್ಲಿ ತುಂಬ busy  ಆಗಿರುತ್ತಾರೆ....ಇನ್ನು ಅವರ ಭಾಷಣ ಗಳಲ್ಲಿ ಅವರು ಬಳಸುವ ಪದಗಳೋ ಕೈ ಕತ್ತರಿಸಿ ಎಂದು BJP  ಪಾರ್ಟಿಯಲ್ಲಿ ಹೇಳಿದರೆ ನಾಲಿಗೆ ಕತ್ತರಿಸಿ ಎಂದು ಕಾಂಗ್ರೆಸ್ ಪಾರ್ಟಿ...... ಅಧಿಕಾರದಲ್ಲಿ ಇರುವ ಸರ್ಕಾರದ  ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುತ್ತೆವೆ ಎಂದು ವಿರೋಧ ಪಕ್ಷದವರು ಪಾದಯಾತ್ರೆ ಮಾಡಿದರೆ ವಿರೋಧ ಪಕ್ಷ ಅಧಿಕಾರದಲ್ಲಿ ಇದ್ದಾಗ ಮಾಡಿದ ಭ್ರಷ್ಟಾಚಾರವನ್ನು ಎತ್ತಿ ತೋರಿಸುವ ಸರ್ಕಾರ...ಇನ್ನು ಇಂಥಹ ದೊಂಬರಾಟಗಳನ್ನೂ ನೋಡಿ ಏನು ಪ್ರಶ್ನೆ ಮಾಡದೇ ತಮ್ಮ ಕೆಲಸಗಳಲ್ಲಿ ಮಗ್ನರಾಗುವ ಬುದ್ಧಿವಂತ ಸಮುದಾಯ ಒಂದು ಕಡೆಯಾದರೆ ಸಮಾವೇಶಗಳಿಗೆ  ಹೋದರೆ ಊಟದ ಜೊತೆಗೆ ದಿನಕ್ಕೆ 100 ರೂಪಾಯಿ ಸಿಗುತ್ತದೆ ಅದರ ಜೊತೆಗೆ ರಾಜಕಾರಣಿಗಳು ಆಡುವ ಅತ್ಯಂತ ನಯವಾದ, ಗೌರವದಿಂದ ಕೂಡಿದ(?) ಮಾತುಗಳನ್ನು ಕೇಳಿ ಚಪ್ಪಾಳೆಗಳ ಸುರಿಮಳೆಯೊಂದಿಗೆ  ಫ್ರೀ entertainment  ತೆಗೆದುಕೊಳ್ಳುವ ಸಮುದಾಯ ಇನ್ನೊದು ಕಡೆ.... 

ಮಹಾತ್ಮ ಗಾಂಧೀಜಿ, ನೆಹರು, ಬೋಸ್ ರಂಥಹ ಅನೇಕ ಸ್ವತಂತ್ರ ಹೋರಾಟಗಾರರು ಬ್ರಿಟಿಷರ ವಿರುದ್ದ ಸ್ವತಂತ್ರಕ್ಕಾಗಿ ಹೊರಡದೇ ತಮ್ಮ ಪಾಡಿಗೆ ತಾವು ಇದ್ದಿದ್ದರೆ? Dr B  R ಅಂಬೇಡ್ಕರ್ ಹಿಂದುಳಿದವರ ಏಳಿಗೆಗಾಗಿ ದುಡಿಯದಿದ್ದರೆ?? ಇಂದು ನಮ್ಮ ದೇಶ ಹೀಗೆ ಇರುತ್ತಿತ್ತ??  ಎಲ್ಲಿಯವರೆಗೆ ಒಬ್ಬ ತಾಯಿ ತನ್ನ ಮಗುವಿಗೆ doctor , ಇಂಜಿನಿಯರ್ , ಸರ್ಕಾರೀ ಅಧಿಕಾರಿಯಾಗು ಇಂದು ಹೇಳುವುದನ್ನು ನಿಲ್ಲಿಸಿ, ಮಗು ನಿನೊಬ್ಬ ದೇಶ ಕಾಯುವ ಸೈನಿಕನಾಗು, ದೇಶಕ್ಕೆ ಕೀರ್ತಿ ತರುವ ಒಳ್ಳೆ ಪ್ರಜೆಯಾಗು ಎಂದು ಹೇಳಿ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡಲು ಮುಂದಾಗುತ್ತರೋ ಅಲ್ಲಿಯವರೆಗೂ ದೇಶದ ಭವಿಷ್ಯ ಹೀಗೆ ಭ್ರಷ್ಟಾಚಾರದ ಸುಳಿಗೆ ಸಿಳುಕಿರುತ್ತದೆ. ಭ್ರಷ್ಟಾಚಾರವನ್ನು ವಿರೋಧಿಸದೆ, ಪ್ರಶ್ನಿಸದೆ ನಾವು, ನಮ್ಮದೆಂದು, ಸ್ವಾರ್ಥಿಗಳಂತೆ ವರ್ತಿಸುತ್ತೆವೋ ಅಲ್ಲಿಯವರೆಗೂ ಭ್ರಷ್ಟಾಚಾರ ಕೊನೆಯಾಗಲು ಸಾಧ್ಯವಿಲ್ಲ........                

1 comment: