ಪುಟಗಳು

29 November 2011

ನಿಸರ್ಗಮಾತೆಗೆ ನಾವೆಷ್ಟು ಆಭಾರಿಯಾಗಿದ್ದೇವೆ???


ಒಂದು ಪ್ರದೇಶದ ಅಭಿವೃದ್ದಿ ಅಲ್ಲಿ ದೊರೆಯುವ ನೈಸರ್ಗಿಕ ಸಂಪತ್ತು ಮತ್ತು ಅದರ ಸರಿಯಾದ ಬಳಕೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ನಾವೆಲ್ಲ ಅರಿತಿದ್ದೇವೆ. ನೈಸರ್ಗಿಕ ಸಂಪತ್ತಿನ ಬಳಕೆಯ ಜೊತೆಗೆ ಪರಿಸರ ಸಂರಕ್ಷಣೆಯ ಹೊಣೆಯು ಕೂಡ ನಮ್ಮದೇ ಆಗಿರುತ್ತದೆ. ನಮ್ಮಲ್ಲಿ ಎಷ್ಟು ಜನರು ಪರಿಸರ ಸಂರಕ್ಷಣೆಯ ಬಗ್ಗೆ ಯೋಚಿಸುತ್ತಾರೆ? ತಮ್ಮ ದಿನ ನಿತ್ಯದ ಜೀವನದ ಜಂಜಾಟದಲ್ಲಿ ಅದೆಷ್ಟು ಜನರು ಇದರ ಬಗ್ಗೆ ತಮ್ಮ ಅಮೂಲ್ಯವಾದ ಸಮಯವನ್ನು ಇದರ ಬಗ್ಗೆ ಯೋಚಿಸಲು ಕಳೆಯುತ್ತಾರೆ? ಎಷ್ಟು ಜನರು ಪರಿಸರ ಸಂರಕ್ಷಣೆಯ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದಾರೆ? ಪ್ರಜಾಪ್ರಭುತ್ವ ವ್ಯವಸ್ಥೆ, ನಮ್ಮ ಹಕ್ಕು-ಬಾಧ್ಯತೆ, ವ್ಯಕ್ತಿ ಸ್ವಾತಂತ್ರ ಮತ್ತು ನಮ್ಮ ಮೂಲಭೂತ ಕರ್ತವ್ಯಗಳ ಬಗ್ಗೆ ಮಾತನಾಡುವ ನಾವು ಪರಿಸರ ಸಂರಕ್ಷಣೆಯನ್ನು ಕೂಡ ನಮ್ಮ ಕರ್ತವ್ಯಗಳಲ್ಲಿ ಒಂದು ಎಂದು ಏಕೆ ಭಾವಿಸುವುದಿಲ್ಲ? ದಿನ ನಿತ್ಯದ ನಾವು ಓಡಾಡುವಾಗ, ವಾಹನಗಳಲ್ಲ್ಲಿ ಪ್ರಯಾಣಿಸುವಾಗ, ಸ್ನೇಹಿತರ ಜೊತೆ ಗುಂಪಿನಲ್ಲಿ ನಿಂತು ಮಾತನಾಡುತ್ತಿರುವಾಗ...ಹೇಗೆ ಅನೇಕ ಸಂಧರ್ಭಗಳಲ್ಲಿ ನಮಗೆ ಅರಿವಿಲ್ಲದಂತೆ ಪರಿಸರ ಮಾಲಿನ್ಯ ಮಾಡುತ್ತಿರುತ್ತೇವೆ. ಕೇವಲ ನಮ್ಮ ಅಗತ್ಯ ಮತ್ತು ಅನುಕೂಲತೆಯ ಬಗ್ಗೆ ಚಿಂತಿಸುವ ನಾವು ಎಂದಾದರೂ ನಮ್ಮಿಂದ ಪ್ರಕೃತಿಯ ಮೇಲಾಗುತ್ತಿರುವ ದಬ್ಬಾಳಿಕೆಯ ಬಗ್ಗೆ ಚಿಂತಿಸಿದ್ದೇವೆಯೇ? ಸರ್ಕಾರ ಪರಿಸರ ಸಂರಕ್ಷಣೆಗಾಗಿ ಅನೇಕ ಕಾರ್ಯಕ್ರಮಗಳು, ಯೋಜನೆಗಳು, ಅನೇಕ ನಿಯಮಗಳನ್ನು ಜಾರಿಗೆ ತಂದಿದ್ದರೂ ಅವುಗಳನ್ನು ಪಾಲಿಸುತ್ತಿದ್ದೆವೆಯೇ? ಜನರೇ ಅವುಗಳನ್ನು ಪಾಲಿಸದೆ ಹೋದಾಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅವುಗಳನ್ನು ಅನುಷ್ಟಾನಕ್ಕೆ ತಂದ ಪ್ರಯೋಜನವಾದರೂ ಏನು? ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದವಿದ್ದರೂ ಎಷ್ಟು ಜನರು ಅದನ್ನು ಪಾಲಿಸುತ್ತಿದ್ದಾರೆ? ಅಸಲಿಗೆ ಪಾಲಿಸದೆ ಇರುವವರಲ್ಲಿ ಹೆಚ್ಚು ಜನರು ವಿದ್ಯಾವಂತರೇ ಆಗಿರುತ್ತಾರೆ ಎಂಬುದು ನೋವಿನ ಸಂಗತಿ. 
ತಮ್ಮ ಮನೆಯ ಒಳಗೆ ಮಾತ್ರ ಕಸ ಇರಬಾರದು, ಮನೆಯ ಹೊಸಲಿನಿಂದ ಹೊರಗೆ ಹೇಗಾದರೂ ಇರಲಿ ಎನ್ನುವ ಮನೋಭಾವುಳ್ಳ ಜನರಿದ್ದಾರೆ. ಇನ್ನು ನಿಸರ್ಗದ ಅಂದವನ್ನು ಸವಿಯಲೆಂದು ಪ್ರವಾಸ ಹೋಗುವ ಮಂದಿ ನಿಸರ್ಗದ ಸೊಬಗನ್ನು ಸವಿಯುವುದರ ಜೊತೆಗೆ ಅಲ್ಲಿನ ಪರಿಸರ ಮಾಲಿನ್ಯಕ್ಕೆ ತಮ್ಮ ಪಾಲನ್ನು ಕೊಟ್ಟು ಬರುತ್ತಾರೆ. ಅನೇಕ ಜನರ ತಿಳುವಳಿಕೆಯೆಂದರೆ ಕೇವಲ ಓಟು ಹಾಕುವುದು ಮಾತ್ರ ನಮ್ಮ ಕರ್ತವ್ಯ ಉಳಿದ ಜವಾಬ್ಧಾರಿ ಸರ್ಕಾರದ್ದು, ಅದರಂತೆಯೇ ಪರಿಸರ ಸಂರಕ್ಷಣೆಯು ಸಹ ಸರ್ಕಾರದ್ದೇ ಕರ್ತವ್ಯವೆಂದು ಭಾವಿಸಿರುವುದು. ಇಂದು ನಾವು ಆಲೋಚಿಸುತ್ತಿರುವ ಮಟ್ಟ ಎಂಥಹದೆಂದರೆ, ನಮ್ಮ ಮನೆಯ ಒಳಗಿನ ಸ್ವಚ್ಚತೆ ಕಾಪಾಡಿಕೊಳ್ಳುವುದು ಮಾತ್ರ ನಮ್ಮ ಜವಾಬ್ಧಾರಿ ಮನೆಯ ಹೊರಗಿನ ಎಲ್ಲಾ ಕಾರ್ಯಗಳನ್ನು ಮಾಡುವುದು ಸರ್ಕಾರಕ್ಕೆ ಸೇರಿದ್ದು ಎಂಬ ಗಟ್ಟಿಯಾದ ಮನೋಭಾವನೆ ಬೆಳೆಸಿಕೊಂಡುಬಿಟ್ಟಿದ್ದೇವೆ. ಹೆಜ್ಜೆ-ಹೆಜ್ಜೆಗೂ ನಿಸರ್ಗ ಮಾತೆಯ ಪಾವಿತ್ರತೆಯನ್ನು ಹಾಳುಮಾಡುತ್ತಿರುವ ನಾವು ಅದರ ಸಂರಕ್ಷಣೆಯ ಹೊಣೆಯನ್ನು ಮಾತ್ರ ಸರ್ಕಾರಕ್ಕೆ ಬಿಟ್ಟಿದ್ದೇವೆ. ವರ್ಷಾನುವರ್ಷದಿಂದ ಬೇರುಬಿಟ್ಟು ಗಟ್ಟಿಯಾಗಿ ನಿಂತಿದ್ದ ಎಷ್ಟೋ ಮರಗಳನ್ನು ಕಡಿದು ಅಲ್ಲಿ ದೊಡ್ಡ-ದೊಡ್ಡ ವಸತಿ ಸಮುಚ್ಚಯಗಳು, ವಿವಿದ ಖಾಸಗಿ ಸಂಸ್ಥೆಗಳು ತಲೆಯೆತ್ತಿವೆ ಇದಕ್ಕೆ ನಾವು ನೀಡಿರುವ ಹೆಸರು "ಅಭಿವೃದ್ದಿ" ಎಂದು. ಇದರಿಂದ ಅನೇಕ ಜನರಿಗೆ ಕೆಲಸವೇನೋ ಸಿಗುತ್ತಿದೆ ಆದರೆ ಪ್ರಕೃತಿಯ ನಾಶದಿಂದಾಗಿ ಇಂದು ನಾವು ಬದುಕುತ್ತಿರುವುದದರು ಹೇಗೆ? ಎಷ್ಟು ಬಗೆಯ ಖಾಯಿಲೆಗಳಿಗೆ ತುತ್ತಾಗಿದ್ದೇವೆ, ಎಷ್ಟು ಒತ್ತಡದ ಬದುಕು ಸಾಗಿಸುತ್ತಿದ್ದೇವೆ? ಸರ್ಕಾರವೆಂದರೆ ನಾವು, ನಾವೆಂದರೆ ಸರ್ಕಾರ ಎಂದು ಹೇಳುವ ನಾವು ರಾಜಕೀಯ ವ್ಯಕ್ತಿಗಳನ್ನು ದೂರುವಾಗ ನಮ್ಮಿಂದಲೇ ಅವರು ಎನ್ನುವ ನಾವು, ನಾವು ವಾಸಿಸುತ್ತಿರುವ ಸುತ್ತ-ಮುತ್ತಲಿನ ಪರಿಸರ ಸಂರಕ್ಷಣೆಯೂ ನಮ್ಮದೆಂದು ಏಕೆ ತಿಳಿಯುವುದಿಲ್ಲ? ನಮ್ಮ ಪೂರ್ವಿಕರು ನೈಸರ್ಗಿಕ ಸಂಪನ್ಮೂಲಗಳ ಮಹತ್ವವನ್ನು ಅರಿತ್ತಿದ್ದರು ಅದರಿಂದಲೇ ನಮಗೆ ಇಂಥಹ ಬದುಕು ಸಿಕ್ಕಿದೆ, ಆದರೆ ಇಂದಿನ ಬಹುಮಂದಿ ಜನರಿಗೆ ಇದರ ಅರಿವೇ ಇಲ್ಲ. ದಿನನಿತ್ಯ ವಾಹನಗಳು ಹೊರಸೂಸುವ ಹೊಗೆ, ಅದರಿಂದಾಗುತ್ತಿರುವ ದುಷ್ಪರಿಣಾಮಗಳು, ಸೇವಿಸಲು ಶುದ್ದ ಗಾಳಿಯೇ ಸಿಗದಂತಾಗುವ ಪರಿಸ್ಥಿತಿ ಬಂದೊದಗುವ ಭೀತಿ, ಅನೇಕ ರೀತಿಯ ರಾಸಾಯನಿಕಗಳ ಬಳಕೆಯಿಂದ ಫಲವತ್ತತೆಯನ್ನು ಕಳೆದುಕೊಳ್ಳುತ್ತಿರುವ ಭೂಮಿ, ಕುಸಿಯುತ್ತಿರುವ ಅಂತರ್ಜಲದ ಮಟ್ಟ, ಜಲಕ್ಷಾಮ ತಲೆದೋರುವ ದಿನಗಳು ಬಹಳ ದೂರವೇನಿಲ್ಲ.
ಒಂದು ಆರೋಗ್ಯಕರ ಸಮಾಜಕ್ಕೆ ಶುದ್ದ ಕುಡಿಯುವ ನೀರಿನ ಅವಶ್ಯಕತೆ ಇದೆ ಆದರೆ ಇಂದು ಶುದ್ದ ಕುಡಿಯುವ ನೀರಿಗಾಗಿ ಹಳ್ಳಿ- ನಗರಗಲ್ಲಿ ಪರದಾಡುವ ಸ್ಥಿತಿ ಇದೆ. ನದಿ, ನಾಲೆ, ಸರೋವರಗಳು ಮಲಿನಗೊಂದು ಪರಿಸರದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿವೆ. ನೀರಿನ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಇನ್ನು ನಾವು ಅರಿಯದೆ ಹೋಗಿದ್ದೇವೆ. ಇನ್ನು ಬಹುತೇಕ ಪ್ರವಾಸಿ ತಾಣಗಳಲ್ಲಿ ಮತ್ತು ದಿನ ನಿತ್ಯ ನಾವು ಓಡಾಡುವ ಸ್ಥಳಗಳಲ್ಲಿ ಕಂಡುಬರುವ ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರಕ್ಕೆ ಮಾರಕವಾಗಿರುವ ಮಹಾರಾಕ್ಷಸ ಇನ್ನಬಹುದು. ಪ್ಲಾಸ್ಟಿಕ್ ತ್ಯಾಜ್ಯಗಳು ಭೂಮಿ  ಸೇರುವುದರಿಂದ ಮಳೆ ನೀರು ಭೂಮಿಯ ಒಳಗೆ ಹೋಗದಂತೆ ತಡೆಯುತ್ತದೆ ಇದರಿಂದಾಗಿ ಅಂತರ್ಜಲದ ಮಟ್ಟ ಕುಸಿಯುತ್ತದೆ, ಸಸ್ಯಗಳು ಆಳವಾಗಿ ಬೇರುಬಿಡಲು ಇವು ಅಡ್ಡಿಯಾಗುತ್ತವೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದಿದ್ದರೂ ಕನಿಷ್ಠ ಪಕ್ಷ ಅದರ ಬಳಕೆಯನ್ನಾದರೂ ಕಡಿಮೆಮಡೋಣ..ಪರಿಸರಸ್ನೇಹಿ ವಸ್ತುಗಳನ್ನು ಬಳಸೋಣ.
ಎಲ್ಲದಕ್ಕೂ ಸರ್ಕಾರವನ್ನು ದೂರುವುದು ಎಷ್ಟು ಸಮಂಜಸ? ಪ್ರತಿ ವ್ಯಕ್ತಿಯಲ್ಲಿ ಇಂದು ನಮ್ಮ ಭೂಮಿ, ನಾವು ಬದುಕುತ್ತಿರುವ ಪರಿಸರ, ಇದರ ಸಂರಕ್ಷಣೆಯ ಹೊಣೆಯಲ್ಲಿ ನಮ್ಮದು ಪಾಲಿದೆ ಇಂಬ ಮನೋಭಾವನೆ ಬೆಳೆಸಿಕೊಳ್ಳಬೇಕು. ನಾವು ಬದುಕುತ್ತಿರುವ ಸುಂದರ ನಾಡನ್ನು ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಬಿಟ್ಟುಹೊಗೋಣ. ಭೂಮಿಯ ಮೇಲೆ ನೆಡೆಯುತ್ತಿರುವ ದೌರ್ಜನ್ಯವನ್ನು ಒಮ್ಮೆ ಯೋಚಿಸಿ ನೋಡಿ. ಈಗಾಗಲೇ ಕಾಡುಗಳ ನಾಶದಿಂದಾಗಿ ಗ್ಲೋಬಲ್ ವಾರ್ಮಿಂಗ್ ಇನ್ನುವ ಭೂತ ಕಣ್ಣ ಮುಂದೆಯೇ ಕುಣಿಯುತ್ತಿದೆ, ಅಕಾಲಿಕ ಮಳೆ, ಬೆಳೆ ನಾಶ, ಸಾರ್ವಜನಿಕ ಜೀವನ ಅಸ್ತ-ವ್ಯಸ್ತ ಮುಂತಾದವುಗಳ ಪರಿಣಾಮ ಎಂಥಹದೆಂದು ಈಗಾಗಲೇ ಅನುಭವಿಸಿದ್ದೇವೆ. ಇನ್ನಾದರೂ ಪರಿಸರ ಸಂರಕ್ಷಣೆಗೆ ಮುಂದಾಗೋಣ. ಈಗ ಹೇಳಿ ನಮಗೆ ಉಸಿರಾಡಲು ಗಾಳಿ, ಕುಡಿಯಲು ನೀರು, ಬದುಕಿಗೊಂದು ನೆಲೆ ನೀಡಿರುವ ನಿಸರ್ಗ ಮಾತೆಗೆ ನಾವು ಎಷ್ಟು ಆಭಾರಿಯಾಗಿದ್ದೇವೆ?? 

25 November 2011

ನಾವು ಮತ್ತು ನಮ್ಮ ಸಾಮಾಜಿಕ ಜವಾಬ್ಧಾರಿ !!!



ಬಹಳ ದಿನಗಳಾಯಿತು ನನ್ನ ಬ್ಲಾಗ್ ಬರೆದು...ಏನಾದ್ರು ಬರೆಯಬೇಕೆನ್ನುವ ಹಂಬಲ ಆದರೆ ಸಮಯದ ಅಭಾವ...ಆಫೀಸ್ ಕೆಲಸ, ಪಿ.ಎಚ್ ಡಿ ಕೆಲಸಗಳ ಮದ್ಯೆ ಬರೆಯಲು ಬಿಡುವೆ ಇಲ್ಲದಂತಾಗಿದೆ, ಆದರೂ ನನ್ನ ಕೆಲ ಗೆಳೆಯರನ್ನು ನೋಡಿದರೆ ಬಹಳ ಆಶ್ಚರ್ಯ ಮತ್ತು ಸಂತೋಷವಾಗುತ್ತದೆ ಕಾರಣ ತಮ್ಮ ಕೆಲಸದ ಒತ್ತಡದಲ್ಲಿಯೂ ಅವರ ಬರವಣಿಗೆಗಳನ್ನು ಓದುವ ಭಾಗ್ಯ ನನಗೆ ಸಿಗುತ್ತಿರುತ್ತದೆ ಎಂದು...
ಅಂದ ಹಾಗೆ ವಿಷಯಕ್ಕೆ ಬರುತ್ತೇನೆ ಪ್ರತಿ ಶನಿವಾರ ನನ್ನ ಪಿ.ಎಚ್.ಡಿ ಗೈಡ್ ನೋಡಲು ಮೈಸೂರಿಗೆ ಹೊಗಿಬರುತ್ತಿರುತ್ತೇನೆ, ಹೆಚ್ಚಾಗಿ ಟ್ರೈನ್ ನಲ್ಲಿಯೇ ಪ್ರಯಾಣಿಸುತ್ತಿರುತ್ತೇನೆ. ಪ್ರತಿ ಬಾರಿ ಇಲ್ಲಿಂದ ಹೊರಡುವಾಗ ಮತ್ತು ಮೈಸೂರಿನಿಂದ ಬರುವ ನಾನು ಯೋಚಿಸುವುದು ಒಂದೇ ವಿಚಾರ...ಅದು ಟ್ರೈನ್ ನ ಸ್ವಚ್ಚತೆ ಬಗ್ಗೆ...ಹೌದು ಮೈಸೂರಿನಿಂದ ಟೈನ್ ಹತ್ತುವಾಗ ಇರುವ ಖುಷಿ ನನಗೆ ಇಳಿಯುವಾಗ ಸಿಗುವುದಿಲ್ಲ...ನಮ್ಮ ಜನರು ತಾವು ತಮ್ಮ ಉಪಯೋಗಕ್ಕಾಗಿ ಬಳಸುವ ಸಾರ್ವಜನಿಕ ವಸ್ತುಗಳನ್ನ ಏಕೆ ಇಷ್ಟು ಉಡಾಫೆತನದಿಂದ ನೋಡುತ್ತಾರೆ ಎಂದು ತಿಳಿದಿಲ್ಲ...ಟ್ರೈನ್ ಹತ್ತುವಾಗ ಅದರ ಸ್ವಚ್ಚತೆ ನೋಡಿದರೆ ನಿಜವಾಗಿಯೂ ಖುಷಿ ಎನಿಸುತ್ತದೆ ಆದರೆ ಆ ಖುಷಿ ಬಹಳ ಸಮಯ ಉಳಿಯುವುದಿಲ್ಲ...ಟ್ರೈನ್ ನಲ್ಲಿ ಮಾರಿಕೊಂಡು ಬರುವ ಹೆಚ್ಚು-ಕಡಿಮೆ ಪ್ರತಿಯೊಂದು ತಿಂಡಿ-ತಿನಿಸನ್ನು ಕೊಂಡು ತಿನ್ನುವ ಬಹಳಷ್ಟು ಜನರು ಕಸ ಎಂದು ಎನಿಸಿಕೊಳ್ಳುವ ವಸ್ತುಗಳನ್ನ ತಾವು ಕುಳಿತಲ್ಲೇ ಹಾಕುವುದನ್ನು ನೋಡಬಹುದು...ಕಡಲೆ ಕಾಯಿ ತಿಂದು ಅದರ ಸಿಪ್ಪೆಯನ್ನು ಕಾಲ ಬಳಿಯಲ್ಲಿಯೇ ಹಾಕುವುದಲ್ಲದೆ ಸಿಪ್ಪೆಗಳು ಎದುರಿಗೆ ಕುಳಿತಿರುವ ವ್ಯಕ್ತಿಯ ಪಾದಗಳನ್ನೂ ಸಹ ತೊಳೆಯುತ್ತಿರುತ್ತವೆ...ಇನ್ನು ಮದ್ದೂರ್ ವಡೆ ತಿಂದ ಪೇಪರ್, ಕಾಫಿ-ಟೀ ಕುಡಿದ ಪೇಪರ್ ಕಪ್ ಅನ್ನು ಕಿಟಕಿ ಪಕ್ಕ ಕುಳಿತವರು ಹೊರಗೆ ಹಾಕಿದರೆ ಕೆಲವರು ಏಳಲು ಕಷ್ಟ ಎನ್ನುವ ಮಟ್ಟಿಗೆ ಅದನ್ನು ಅಲ್ಲಿಯೇ ಹಾಕಿ ಬಿಡುತ್ತಾರೆ...
ಇದು ಕೆಳಗೆ ಕುಳಿತವರ ಕಥೆಯಾದರೆ ಇನ್ನು ಮೇಲೆ ಅಂದರೆ ಅಪ್ಪರ್ ಬರ್ತ ನಲ್ಲಿ ಕುಳಿತುಕೊಳ್ಳುವವರ ಕಥೆ ಕೇಳಿ..ಪಾಪ ಮೇಲೆ ಹತ್ತಿ ಕುಳಿತುಕೊಳ್ಳುವ ಕೆಲವವು ಮಹಾಶಯರಿಗೆ ತಮ್ಮ ಚಪ್ಪಲಿ-ಶೂಗಳದ್ದೇ ಚಿಂತೆ ಎಲ್ಲಿ ಕೆಳಗೆ ಬಿಟ್ಟರೆ ಯಾರದ್ರು ಕದ್ದು ಬಿಡುತ್ತಾರೋ ಎಂಬ ಭಯ ಅದಕ್ಕರಾಗಿ ಇವರು ಮೇಲೆ ಹತ್ತುವಾಗ ಚಪ್ಪಲಿ ಶೂ ಹಾಕಿ ಕೊಂಡಿಯೇ ಹತ್ತುವುದು...ಕೆಲವರು ಹತ್ತಿ ಅವಗಳನ್ನು ಬಿಚ್ಚಿ ಕಾಲುಗಳ ಹತ್ತಿರ ಇಟ್ಟುಕೊಂಡರೆ ಇನ್ನು ಕೆಲವರು ಬಿಚ್ಚದೆ ಹಾಕಿಕೊಂಡಿಯೇ ಮಲಗುತ್ತಾರೆ...ಓಡಾಡುವ ಜನರು ತಮ್ಮ ಚಪ್ಪಲಿ-ಶೂ ಕಾಲುಗಳ ದರ್ಶನ ಮಾಡಿ ಕೊಳ್ಳಲಿ ಎಂದು...ನಾವು ಇಳಿದ ಮೇಲೆ ಬೇರೊಬ್ಬರು ಇಲ್ಲಿ ಕುಳಿತುಕೊಳ್ಳಲೋ  ಇಲ್ಲ ಮಲಗಲೋ ಈ ಸೀಟ್ ಅನ್ನು ಉಪಯೋಗಿಸುತ್ತಾರೆ ಎಂಬ ಜ್ಞಾನವೇ ಇರುವುದಿಲ್ಲ.. ಇನ್ನು ಮಲಗುವ ಪರಿ ಕಾಲು ಹಾಕುವ ಜಾಗದಲ್ಲಿ ತಲೆ, ತಲೆ ಇಡುವ ಜಗದಲ್ಲಿ ಕಾಲು ಇಟ್ಟು ಮಲಗುತ್ತಾರೆ. ಪಾಪ ಇನ್ನ್ಯಾರೋ ಬಂದು ತಲೆ ಇಡುವ ಜಾಗದಲ್ಲಿ ತಲೆಯನ್ನೇ ಇಟ್ಟು ಮಲಗಿಕೊಂಡರೆ ಅಷ್ಟೇ ಇದಕ್ಕೂ ಮೊದಲು ಅಲ್ಲಿ ಕಾಲು ಇಟ್ಟು ಮಲಗಿದ್ದವನ ಪಾದದ ದೂಳಿನ ಸ್ಪರ್ಶ....ಇನ್ನು ಆಶ್ಚರ್ಯದ ವಿಚಾರ ಎಂದ ಹೆಚ್ಚು ಜನ ಇಂತಹವರಲ್ಲಿ ವಿದ್ಯಾವಂತರೇ ಆಗಿದ್ದಾರೆ...ಇದೆಲ್ಲ ದರ್ಶನದ ಅಜೋತೆಗೆ ಇಳಿಯಲು ಬಂದಾಗ ನಿಮಗೆ ನೀವು ಮೊದಲು ನೋಡಿದ ಸ್ವಚ್ಚವಾದ  ಟ್ರೈನ್ ತಿಪ್ಪೆ ಗುಂಡಿಯಂತೆ ಕಾಣುತ್ತಿರುತ್ತದೆ.
ಇದೆಷ್ಟು ಟ್ರೈನ್ ಕಥೆಯಾದರೆ ಇನ್ನು ನಮ್ಮ ಬೃಹತ್ ಬೆಂಗಳೂರಿನ ಕಥೆಯು ಅಷ್ಟೇ...ಅನೇಕ ಬಾರಿ  ಬಿ ಎಮ್ ಟಿ ಸಿ ಬಸ್ ನಲ್ಲಿ  ಪ್ರಯಾಣಿಸುವಾಗ ನಾನು ಇಂತಹ ದೃಶ್ಯಗಳನ್ನು ಕಂಡಿದ್ದೇನೆ...ಮಹಿಳೆಯರು ಬಸ್ಸಿನಲ್ಲಿಯೇ ತಾವು ಅಂದಿನ ಅಡಿಗೆಗೆಂದು  ಖರೀದಿಸಿದ ತರಕಾರಿ, ಸೊಪ್ಪನ್ನು ಸ್ವಚ್ಚಗೊಳಿಸುತ್ತ ಕೋರುವುದು...ಮೊನ್ನೆ ಕೂಡ ಇಂತಹದ್ದೇ ದೃಶ್ಯ...ಮಹಿಳೆಯೊಬ್ಬಳು ತಾನು ಕೊಂಡಿದ್ದ ಸೊಪ್ಪನ್ನು ಬಸ್ಸಿನಲ್ಲಿಯೇ ಸ್ವಚ್ಚ ಮಾಡುತ್ತಾ ಕುಳಿತಿದ್ದರು...ನಾನು ಎದುರಿಗೆ ನಿಂತಿದ್ದ ಕಾರಣ ಅವರು ನನ್ನನು ನಾನು ಅವರನ್ನು ನೋಡುತ್ತಿದ್ದೆವು, ಆಕೆ ಸೊಪ್ಪನ್ನು ಬಿಡಿಸಿ ಚೆನ್ನಾಗಿರುವುದನ್ನು ಕವರ್ ಗೆ ಹಾಕಿ ಕೊಳ್ಳುತ್ತಾ ಚೆನ್ನಗಿಲ್ಲದನ್ನು ಒಮ್ಮೆ ಕೆಳಗೆ ಮತ್ತೆಮ್ಮೋ ಕಿಟಕಿಯಿಂದ ಆಚೆಗೆ ಹಾಕುತ್ತಿದ್ದಳು....ಇದನ್ನು ನೋಡುತ್ತಾ ನಿಂತಿದ್ದ ನಂಗೆ ಕೋಪ ಬರುತ್ತಿರುವುದನ್ನು ಗಮನಿಸಿದ ಅಆಕೆ ತನ್ನೆ ಕೆಲಸವನ್ನೂ ಮುದುವರೆಸುತ್ತಿದ್ದಳು...ಆಕೆ ಹಾಕುತ್ತಿದ್ದ ಕಸ ಕಿಟಕಿಯಿಂದ ಹೊರಗೆ ಯಾವುದೊ ಒಬ್ಬ ವಾಹನ ಸವಾರನ ಮೇಲೆ ಬಿಳುತ್ತಿರಬಹುದೆಂಬ ಪರಿವೆ ಇಲ್ಲವೇ?? ನಾನು ಒಪ್ಪುತ್ತೇನೆ ಮನೆ ಹೊರಗು-ಒಳಗೂ ದುಡಿಯುವ ಮಹಿಳೆಗೆ ಇರುವ ಕಷ್ಟ ಮತ್ತು ಸಮಯದ ಅಭಾವವಿದೆ ಎಂದು....ನಾನು ಕೇಳುವ ಪ್ರಶ್ನೆ ಬಸ್ ವ್ಯವಸ್ಥೆಯಿಲ್ಲದ್ದರೆ ಸರ್ಕಾರವನ್ನು ದೂರುವ ನಾನು ನಮಗೆಂದೇ ಇರುವ ಬಸ್, ಟ್ರೈನ್ ಸಾರ್ವಜನಿಕ ಸ್ವತ್ತುಗಲ್ಲನ್ನು ನಾವು ನೋಡಿಕೊಳ್ಳುವ ರೀತಿ ಇದೇನಾ? ಪ್ರತಿಯೊಂದಕ್ಕೂ ಸರ್ಕಾರವನ್ನು ದೂರುವ, ಬೈಯ್ಯುವ ನಾವು...ನಮ್ಮ ತಪ್ಪನ್ನು ತಿದ್ದಿಕೊಳ್ಳುವುದು ಯಾವಾಗ?? ಇದಕ್ಕೆನಾದ್ರು ಒಂದು ಇಲಾಖೆಯನ್ನು ನೇಮಿಸಬೇಕೆ??ಸಾಮಾಜಿಕ ಜವಾಭ್ದಾರಿ ಎಂಬುದನ್ನು ಬಲವಂತವಾಗಿ ನಮ್ಮಲ್ಲಿ  ತುಂಬಬೇಕೇ? ಎಲ್ಲ ಎಚ್ಚರಿಸಬೇಕೆ?? ಟ್ರೈನ್ ನಲ್ಲಿಯೇ ತಿಂದು ಅಲ್ಲಿಯೇ ಹಾಕುವ ಜನರು...ಬಸ್ಸಿನಲ್ಲಿಯೇ ಕಸ ಹಾಕುವ ಜನರು ತಮ್ಮ  ಮನೆಗಳಲ್ಲಿಯೂ ಹೇಗೆ ನೆದೆದುಕೊಲ್ಲುತ್ತರೆಯೇ ??
ಒಮ್ಮೆ ಯೋಚಿಸಿ ಎಲ್ಲದಕ್ಕೂ ನಾವು ಸರ್ಕಾರರವನ್ನು ದೂರುತ್ತೇವೆ.....ನಮಗೆ ಸೌಲಭ್ಯ ನೀಡಿಲ್ಲ ..ಅದಿಲ್ಲ ಇದಿಲ್ಲ ಎಂದು ಆದರೆ ಇರುವ ಸವಲತ್ತುಗಳನ್ನೂ ಎಷ್ಟರ ಮಟ್ಟಿಗೆ ಜೋಪನಮಾಡಿದ್ದೇವೆ...ಇಲ್ಲ ಅವುಗಳ ರಕ್ಷಣೆ ನಮ್ಮ ಹೊಣೆ ಎಂದು ಎಂದಾದರೂ ನೆದಡಿದುಕೊಂದಿದ್ದೆವೆಯೇ...??