ಪುಟಗಳು

02 October 2010

ಗಾಂಧಿತಾತ...........ರಾಷ್ಟ್ರಪಿತ....

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ...ಪದಗಳಿಗೆ ನಿಲುಕದ ಅವರ ವ್ಯಕ್ತಿತ್ವ, ಅಹಿಂಸ ತತ್ವದ ಪ್ರತಿಪಾದಕ ಹಾಗು ಪಾಲಕ....  ಗಾಂಧೀಜಿ ಬ್ರಿಟಿಷರೊಡನೆ ಹೋರಾಡಿ ನಮ್ಮನೆಲ್ಲಾ ಸ್ವತಂತ್ರ ದೇಶದ ಪ್ರಜೆಗಳನ್ನಾಗಿ ಮಾಡಿದ್ದರೆ..... ಕೇವಲ ಗಾಂಧೀಜಿ ಮಾತ್ರವಲ್ಲ ಅನೇಖ ಸ್ವತಂತ್ರ ಹೋರಾಟಗಾರರ ಶ್ರಮದ ಪ್ರತಿಪಲವೇ ಇಂದು ನಾವೆಲ್ಲರೂ ಅನುಭವಿಸುತ್ತಿರುವ ಸ್ವತಂತ್ರ....ಇವರಿಗೆಲ್ಲರಿಗೂ ನಮ್ಮ ನಮನಗಳು...

ಗಾಂಧೀಜಿ ಎಂದಾಗ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವ ಚಿತ್ರ...ಶುಭ್ರ ಬಿಳುಪಿನ ಬಿಳಿ ಪಂಚೆ....ಅರ್ದಂಭರ್ದ ಮೈಮುಚ್ಚಿದ ಬಿಳಿ ಶಾಲು....ದುಂಡಗಿನ ಆಕಾರದ ಕನ್ನಡಕ....ಕೈಯಲ್ಲಿ ಒಂದು ಕೋಲು....ಕಾಲಿಗೆ ಚಪ್ಪಲಿ..ಇದು ಅವರ ಚಿತ್ರಣ..... ಇಡೀ ದೇಶ ಹಸಿವು ಬಡತನದಿಂದ ಬಳಲುತ್ತಿರುವ ನಾನು ಮಾತ್ರ ಮೈತುಂಬ ಬಟ್ಟೆ ಧರಿಸಿ ಹೇಗೆ ನಡೆಯಲಿ ಎಂದು ತಮ್ಮ ಉಡುಗೆಯಲ್ಲಿ ಇಡೀ ಭಾರತದ ಚಿತ್ರಣವನ್ನು ಪ್ರತಿಕಿಸಿ ಬಡತನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು......ರಾಷ್ಟ್ರಪಿತ ಗಾಂಧೀಜಿ ಬಯಸಿದ್ದು ಕೇವಲ ಬ್ರಿಟಿಷರಿಂದ ಸ್ವತಂತ್ರ ಮಾತ್ರವಲ್ಲ ಬದಲಿಗೆ ಭಾರತದ ಪ್ರತಿ ಹಳ್ಳಿಗಳು ಸ್ವಯಂ ಪರಿಪೂರ್ಣತೆ, ಸ್ವಾವಲಂಬನೆ  ಸಾಧಿಸುವುದು, ಸ್ತ್ರಿ ಸ್ವತಂತ್ರದ ಜೊತೆಗೆ ಅವಳು ಸ್ವಾವಲಂಬಿಯಾಗಿ ಬದುಕುವುದು, ಪ್ರತಿಯೊಬ್ಬರೂ ಶಿಕ್ಷಣ ಹೊಂದುಬೇಕೆನ್ನುವುದು.....ಅವರು ರೈತ ನಮ್ಮ ದೇಶದ ಬೇನ್ನೆಲುಬೆಂದು ಹೇಳಿದ್ದರು........ಇವೆಲ್ಲ ಅವರು ಕಂಡ ಕನಸುಗಳು....ಈ ಕನಸುಗಳಲ್ಲಿ ಇಷ್ಟು ನನಸಾಗಿವೆ ಇನ್ನು ಎಷ್ಟೋ ಕನಸಾಗಿಯೇ ಉಳಿದಿವೆ....

ಅವರ ಕನಸಿನಂತೆ ನಮ್ಮ ಹಳ್ಳಿಗಳು ಸ್ವತಂತ್ರ ಬಂದು ಇಷ್ಟು ವರ್ಷವಾದರೂ ಸ್ವಯಂ ಪರಿಪೂರ್ಣತೆ, ಸ್ವಾವಲಂಬನೆಯನ್ನು ಸಾದಿಸುವಲ್ಲಿ ವಿಫಲವಾಗಿದೆ...ಇಂದು ಕೂಡ ಹಳ್ಳಿಗಳು ಸರ್ಕಾರದ ಸಹಾಯಹಸ್ತ ಬಯಸುತ್ತಿವೆ...ಅದು ತಪ್ಪು ಕೂಡ ಅಲ್ಲಾ....ಕಾರಣ ನಮ್ಮ ಪ್ರಜಾಪ್ರಭುತ್ವ ದೇಶದ ಮಹಾದೊರೆಗಳು (ರಾಜಕೀಯ ವ್ಯಕ್ತಿಗಳು)  ಅವುಗಳನ್ನು ಮುಂದುವರೆಯಲು ಬಿಡುವುದು ಇಲ್ಲ ಅಲ್ಲವೇ?? ಇನ್ನು ಸ್ತ್ರಿ ಸ್ವತಂತ್ರ.........ಗಾಂಧಿ ಎಂದು ಒಂಟಿಯಾಗಿ ಹೆಣ್ಣು ಮಧ್ಯ ರಾತ್ರಿ ಓಡಾಡುತ್ತಲೋ ಅಂದು ನಮಗೆ ನಿಜವಾದ ಸ್ವತಂತ್ರ ಎಂದರು....ಆದರೆ ಅದು ಇಂದು ಸ್ವಲ್ಪ ಮಟ್ಟಿಗೆ ಸಾಕರವಗಿದ್ದರು ಬಹಳಷ್ಟು ಹೆಣ್ಣು ಮಕ್ಕಳು ಇದನ್ನು ದುರುಪಯೋಗ ಪಡಿಸಿಕೊಂದಿರುವುದೇ ಹೆಚ್ಚು ಎನ್ನುವುದು ವಾಸ್ತವ......ಇಂದು ಶಿಕ್ಷಣ ಕ್ಷೇತ್ರದಲ್ಲಂತೂ ಕ್ರಾಂತಿಯನ್ನೇ ಮಾಡಿಬಿಟ್ಟಿದ್ದೇವೆ....ಆದರೂ ಇಂದಿನ ಶಿಕ್ಷಣ ಬಹಳ ದುಬಾರಿಯೇ ಸರಿ.......

ಇನ್ನು ನಮ್ಮ  ರಾಜಕೀಯ ವ್ಯಕ್ತಿಗಳು ಎಷ್ಟರ ಮಟ್ಟಿಗೆ ಇವರ ತತ್ವ, ಆದರ್ಶಗಳನ್ನು ಪಾಲಿಸುತ್ತಾರೆ ??? ಹೌದೌದು ನಮ್ಮ ರಾಜಕೀಯ ವ್ಯಕ್ತಿಗಳು ಹಿಂಸೆಯನ್ನು ಕನಸಿನಲ್ಲಿಯೂ ಕಂಡವರಲ್ಲ ಬದಲಿಗೆ ನಿಜವಾಗಿ ಹಿಂಸೆಯನ್ನು ಮಾಡುತ್ತ ಅಧಿಕಾರಕ್ಕಾಗಿ ದೊಡ್ಡ  (ಸ್ವ)ತಂತ್ರ ಹೋರಾಟವನ್ನೇ ಮಾಡಿಬಿಡುತ್ತಾರೆ....ಗಾಂಧೀಜಿಯಾ ಬಗ್ಗೆ ಬರೆಯುವಾಗ ರಾಜಕೀಯ ವ್ಯಕ್ತಿಗಳ ಬಗ್ಗೆ ಬರೆಯುವುದು ಗಾಂಧೀಜಿಗೆ ಮಾಡುವ ಅವಮಾನವೆನಿಸಿದರು ಅದನ್ನು ಬರೆಯಲೇ ಬೇಕೆಂದು ನನ್ನ ಕೈಬೆರಳುಗಳು ಹಾತೊರೆಯುತ್ತವೆ....ದೇಶದ ಪ್ರತಿಯೊಬ್ಬ ಪ್ರಜೆಯು ಮೂಲಭೂತ ಹಕ್ಕು ದೊರೆಯಬೇಕು...ಆದರೆ ಎಲ್ಲಿ ದೊರೆಯುತ್ತಿದೆ...ಬೆಳೆ ಬೆಳೆದು ಇಡೀ ದೇಶಕ್ಕೆ ಅನ್ನ ನೆಡುತ್ತಿದ್ದ ರೈತ ಇಂದು ಬೆಳೆ ಬೆಳೆಯಲಾಗದೆ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ....ಅವರ ಕುಟುಂಬಕ್ಕೆ ಪರಿಹಾರ ಘೋಷಿಸಿದರು ಅದು ಕೇವಲ ಘೋಷಣೆಯಷ್ಟೇ ಹಣ ಅವರ ಕೈಸೇರುವಷ್ಟರಲ್ಲಿ ಹರಿದು ನೂರಾರು ದಿಕ್ಕು ಸೇರಿ ಕೊನೆಗೆ ಅವರಿಗೆ ಸಿಗುವುದು ಕೇವಲ ಒಂದು ದಿನದ ಅಥವಾ ಒಂದು ವಾರದ ಜೀವನ ಸಾಗಿಸಲು ಅಷ್ಟೆ.....ಇಂಥಹ ಅದೆಷ್ಟೋ ಕಷ್ಟದ ಪರಿಸ್ಥಿಯಲ್ಲಿ ಇಂದು ನಮ್ಮ ದೇಶದ ಜನರಿದ್ದಾರೆ ಆದರೆ ನಮ್ಮ ರಾಜಕೀಯ ವ್ಯಕ್ತಿಗಳು ಇದರ ಪರಿವೆ ಇಲ್ಲದೆ ತಮ್ಮ ಕುರ್ಚಿ, ಅಧಿಕಾರಕ್ಕೆ ಗುದ್ದಾಡುತ್ತಾ.... ಚುನಾವಣೆ ಬಂದಾಗ ಮಾತ್ರ ಆಶ್ವಾಸನೆ ಇತ್ತು ಚುನಾವಣೆ ಮುಗಿದ ಬಳಿಕ ತಿರುಗಿಯೂ ನೋಡುವುದಿಲ್ಲ......ಅದರಲ್ಲೂ ಈಗಂತು ನಮ್ಮ ರಾಜಕೀಯ ವ್ಯಕ್ತಿಗಳಿಗೆ ಹಗರಣ ಗಳೆಂದರೆ ನೀರು  ಕುಡಿದಷ್ಟು ಸುಲಭವಾಗಿ ಬಿಟ್ಟಿದೆ .... ಗಾಂಧಿ ಹೇಳಿದ್ದು ಹಳ್ಳಿ ಜನರು ಸ್ವಾವಲಂಬಿಗಳಾಗಬೇಕು ಇಂದು ಆದರೆ ನಮ್ಮ ಜನರು ಅಷ್ಟೆ ಚುನಾವಣೆಯ ವೇಳೆ ನೀಡುವ ನೋಟು, ಬಟ್ಟೆ, ಹೆಂಡಕ್ಕಾಗಿ ತಮ್ಮ ತನವನ್ನೇ ಮಾರಿಕೊಳ್ಳುತ್ತ ದಾಸರಾಗಿ ಬಿಟ್ಟಿದ್ದಾರೆ...

ಅದೆಷ್ಟೋ ಇಂಥಹ ಗಾಂಧಿ ಜಯಂತಿಗಳು, ಸ್ವತಂತ್ರ ದಿನಾಚರಣೆಗಳು, ಬರಬಹುದು ಹೋಗಬಹುದು.....ಕೊನೆಗೆ ಉಳಿಯುವ ಪ್ರಶ್ನೆ.....ನಮಗೆ ಸ್ವತಂತ್ರ ತಂದು ಕೊಡಲು ಹೋರಾಡಿ ಮಾಡಿದ ಜೀವಗಳಿಗೆ ನಾವು ನೀಡುತ್ತಿರುವ ಗೌರವಗಳೆನಾದರೂ ಏನು ?? ಎಷ್ಟರ ಮಟ್ಟಿಗೆ ನಾವು  ಸ್ವತಂತ್ರವನ್ನು ನಮ್ಮ ದೇಶದ ಏಳಿಗೆಗಾಗಿ ಬಳಸಿಕೊಳ್ಳುತ್ತಿದ್ದೇವೆ ?? ಅಸಲಿಗೆ ಸ್ವತಂತ್ರ ಎಂಬ ಪದದ ಅರ್ಥವನ್ನು ನಾವು ತಿಳಿದಿರುವುದದರೂ ಹೇಗೆ ??
ನಿಜವಾದ ಸ್ವಾತಂತ್ರದ ಅರ್ಥ ಮತ್ತು ಅದರ ಸುದುಪಯೋಗದ ವಿನಃ ಇಂಥಹ ಅದೆಷ್ಟೋ ಗಾಂಧಿ ಜಯಂತಿಗಳು, ಸ್ವತಂತ್ರ ದಿನಾಚರಣೆಗಳು ಬಂದರು ಅವು ಕೇವಲ ಹೆಸರಿಗಷ್ಟೇ ಆಚರಣೆಗಳಗಿರುತ್ತವೆಯೇ  ಹೊರತು ನಿಜವಾಗಿ ಮಾನವನ ಮತ್ತು  ದೇಶದ ಅಭಿವೃಧಿ ಸಾಧ್ಯವಿಲ್ಲ ಎಂಬುದು ನನ್ನ ವಯುಕ್ತಿಕ ಅಭಿಪ್ರಾಯ.....     

           

                 

1 comment: