ಪುಟಗಳು

05 October 2010

B B M P ಭಿತ್ತಿ ಚಿತ್ರಗಳು ಮತ್ತು ನಮ್ಮ (ಮರ್ಯಾದಸ್ಥ ?) ಜನರು !!!

ನೆನ್ನೆ ಮತ್ತು ಇಂದು ಯಾವುದೊ ಒಂದು ಕಾರ್ಯನಿಮಿತ್ತ ನಮ್ಮ ನಿರ್ಮಲ ಬೆಂಗಳೂರನ್ನು ಸುತ್ತುವ ಭಾಗ್ಯ ನನಗೆ ಒದಗಿ ಬಂದಿತ್ತು. ಬೆಂಗಳುರಿನಲ್ಲೇ ಹುಟ್ಟಿ ಬೆಳದರೂ ಸರಿಯಾಗಿ ಬೆಂಗಳೂರು ತಿಳಿಯದ ನಾನು  BMTC ಬಸ್ ಹಿಡಿದು ಸಂಚರಿಸುವಾಗ ದಾರಿಯ ಉದ್ದಕ್ಕೂ ಅಕ್ಕ-ಪಕ್ಕ ಗೋಡೆಗಳಲ್ಲಿ ಬಿಡಿಸಿದ್ದ ಚಿತ್ರಗಳನ್ನು ನೋಡಿ ಮನಸ್ಸಿಗೆ ತುಂಬಾ ಸಂತೋಷವಾಗಿ ಒಂದು ಕ್ಷಣ ನಾನು ಬೆಂಗಳೂರಿನಲ್ಲಿ ಇದ್ದೆನೆಯೇ ಎಂಬ ಅನುಮಾನ ಬಂತು...ಅವು ನನ್ನ ಕಣ್ಣಿಗೆ ಕೇವಲ ಚಿತ್ರಗಳಂತೆ ಕಾಣಲಿಲ್ಲ...ಕರ್ನಾಟಕದ ಸಂಸ್ಕೃತಿ, ಕಲೆಯ ಇತಿಹಾಸದ ಗತವೈಭವ ಸಾರುತ್ತಿರುವ ಮಹಾನ್ ವ್ಯಕ್ತಿಗಳಂತೆ ಕಂಡವು...ಏನೆ ಆದರು ನಾನು ಇದುವರೆಗೂ ನೋಡಲು ಸಾಧ್ಯವಾಗದಂಥಹ ಅನೇಕ ಚಿತ್ರಗಳನ್ನು ನಾನು ಕಂಡೆ....ಇಂಥಹ ಕಲಾಕೃತಿಗಳನ್ನು ಭಿತ್ತಿಚಿತ್ರಗಳ ಮೂಲಕ ನೋಡಲು ಅಣುವುಮಾಡಿಕೊಟ್ಟ B B M P ಮತ್ತು ಇವುಗಳನ್ನು ಗೋಡೆಯಮೇಲೆ ಚಿತ್ರಸಿದ ಕಲಾವಿದರಿಗೆ ನನ್ನ ನಮನಗಳು....

ಆದರೆ ನನ್ನ ಈ ಸಂತೋಷ ತುಂಬ ಸಮಯ ಉಳಿಯಲಿಲ್ಲ....ಮುಂದೆ ಸಾಗುತ್ತಾ ನಮ್ಮ ನಾಗರೀಕ ಸಮಾಜದ ಮೇಲೆ ಅದರಲ್ಲೂ ನಮ್ಮ ಬೆಂಗಳೂರಿನ ಜನರ ಬಗ್ಗೆ ಅಸಹ್ಯದ ಭಾವನೆ ಹುಟ್ಟಿತು...B B M Pಯವರು ಗೋಡೆ  ಕಂಡಲ್ಲಿ ನಮ್ಮ ಜನರು ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಮತ್ತು ನಮ್ಮ ನಿರ್ಮಲ ನರಗದ ಸೌಂದರ್ಯವನ್ನು ಹೆಚ್ಚಿಸಲು ಬಿಡಿಸಿದ್ದ  ಇಷ್ಟು ಸುಂದರವಾದ ಭಿತ್ತಿಚಿತ್ರಗಳ ಎದುರಿಗೆ ನಮ್ಮ ಜನರು (ಕೆಲವರು) ನಾಚಿಕೆಯಿಲ್ಲದೆ ಮೂತ್ರ ವಿಸರ್ಜನೆ ಮಾಡುತ್ತಿದ್ದರು....ಇದನ್ನು ನೋಡಿ ಅನಿಸಿದ್ದು ಮೊದಲು ಸಹ ಅಂದರೆ  ಬಿತ್ತಿಚಿತ್ರಗಳನ್ನು ಬಿಡಿಸುವ ಮುಂಚೆಯೂ ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದೆಂಬ ಬರಹ ಕಾಣಿಸುತ್ತಿದ್ದರು ಅದು ನಮಗಲ್ಲ ಕೇವಲ ಮರ್ಯಾದಸ್ಥರಿಗೆಂದು ಅಲ್ಲಿಯೇ ತಮ್ಮ ಕೆಲಸ ಮುಗಿಸಿ ಹೋಗುತ್ತಿದ್ದರು. ಆದರೆ ಭಿತ್ತಿ ಚಿತ್ರಗಳನ್ನು ಬಿಡಿಸಿದ ಮೇಲಾದರೂ ನಮ್ಮ  ಈ ಮರ್ಯಾದಸ್ಥ ಜನರು ನಮ್ಮ ಕಲೆ, ಸಂಸ್ಕೃತಿಗೆ ಬೆಲೆ ನೀಡಿ, ಅವುಗಳನ್ನು ಗೌರವಿಸಿ ಹಾಗೆ ಮಾಡುವುದಿಲ್ಲವೆಂದು ತಿಳಿದ B B M P ಯವರ ನಂಬಿಕೆಯನ್ನು ಸುಳ್ಳು ಮಾಡಿದ್ದರೆ...ಬರೀ ಇದೊಂದೇ ಘನ ಕಾರ್ಯವಲ್ಲ ಅದರ ಜೊತೆಗೆ ಅದೇ ಗೋಡೆಗಳ ಕೆಳಗೆ ಕಸದ ರಾಶಿ ನೋಡಿ ನನಗೆ ಅನ್ನಿಸಿದ್ದು ಕಾನೂನನ್ನು ಪಾಲಿಸುವುದು ಬೇಡ ಕೊನೆಪಕ್ಷ ಆ ಚಿತ್ರಗಳಿಗಾದರು, ಅವುಗಳನ್ನು ಬಿಡಿಸಲು ಕಷ್ಟ ಪಟ್ಟ ಕಲಾವಿದರಿಗದರೂ ಗೌರವ ನೀಡದ ನಮ್ಮ ಜನರ ಹೃದಯ ವೈಶಾಲ್ಯತೆಯನ್ನು ಹೋಗಳಬೇಕಲ್ಲವೇ???

ಸರ್ಕಾರ ಇದಕ್ಕೆಂದೆ ಕಂಡಕಂಡಲ್ಲಿ ನಿರ್ಮಲ ಬೆಂಗಳೂರು ಎಂಬ ಶೀರ್ಷಿಕೆಯಡಿ ಸಾರ್ವಜನಿಕ ಶೌಚಾಲಯಗಳನ್ನೂ ನಿರ್ಮಿಸಿದ್ದರು ಅದನ್ನು ಬಳಸುವ ಬದಲು ಹೀಗೆ ನಗರದ ಸೌಂದರ್ಯ ಹಾಳುಮಾಡುವ, ನಮ್ಮ ಸಂಸ್ಕೃತಿ, ಕಲೆಗೆ ಅಗೌರವ ತೋರಿಸುವ ಜೊತೆಗೆ ಅನಾರೋಗ್ಯ ಹರಡಲು ಕಾರಣವಾಗುವ ಇಂಥಹ ಜನರಿಗೆ ಎಂದು ತಾವು ಮಾಡುತ್ತಿರುವುದು ನಾಚಿಕೆ ಇಲ್ಲದ ಕೆಲಸ ಎಂದು ಅನಿಸುವುದಿಲ್ಲವೇ??? ಜೊತೆಗೆ ಅನೇಕ ಪ್ರವಾಸಿಗರು ಇವುಗಳನ್ನು ನೋಡಿ ನಮ್ಮ ಜನರ ಬಗ್ಗೆ ಅವರಿಗೆ ಮೂಡುವ ಭಾವನೆಗಳೇ ಬೇರೆ ಅಲ್ಲವೇ?? ಇದು ನಮ್ಮ ನಾಡು ಇದರ ಸ್ವಚ್ಚತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಅದಕ್ಕಾಗಿ ಸರ್ಕಾರ ಕಾನೂನು ಮಾಡಿ ಅದನ್ನು ಬಲವಂತವಾಗಿ ನಮ್ಮ ಮೇಲೆ ಹೆರುವ ಅಗತ್ಯವಿರಬಾರದು ಆದರೆ ಅದು ಸಾಧ್ಯವಿಲ್ಲ ಎಲ್ಲಿಯವರಿಗೆ ನಾನು ನಮ್ಮ ಜವಾಬ್ಧಾರಿಯನ್ನು ಅರಿತು ನಡೆದುಕೊಳ್ಳುವ ಹೊರತು ಸರ್ಕಾರವನ್ನು ದೂಷಿಸುವ ನಮ್ಮ ಕಾರ್ಯ ನಿಲ್ಲುವುದಿಲ್ಲ ಅಸಿಲಿಗೆ ಕಾನೂನು ಮಾಡುವುದು ಮಾಡಲಿ ನಾವು ಮುರಿದೆ ತೀರುತ್ತಿವೆ ಎನ್ನುವ  ಇಂಥವರು ಇರುವವರೆಗೂ  ನಮ್ಮ ಸಂಸ್ಕೃತಿ, ಕಲೆ ಉಳಿಯಲು ಸಾಧ್ಯವಾಗದು.....ಜೊತೆಗೆ ಅವುಗಳ ಮೇಲೆ ಗೌರವವು ಬರುವುದಿಲ್ಲ....ಎಲ್ಲೋ ಒಂದು ಕಡೆ ನನಗೆ ಅನಿಸಿದ್ದು  B B M P ಯವರು ಹೀಗೆ ಬಿತ್ತಿಚಿತ್ರಗಳನ್ನು ಬಿಡಿಸಿ ಅವುಗಳ ಮೌಲ್ಯ ಕುಸಿಯಲು ಪರೋಕ್ಷವಾಗಿ ಕಾರಣವಾಗಿದ್ದರೆ ಎಂದು.........

3 comments:

 1. ಸವಿತಾ
  ಸರಕಾರ ಬೈದು ಯಾವ ಪ್ರಯೋಜನವೂ ಇಲ್ಲ
  ನಮ್ಮ ಜನರ ವರ್ತನೆ ಬದಲಾಗಬೇಕು
  ಸ್ವೀಡನ್ನಿನಲ್ಲಿ ರಸ್ತೆಯಲ್ಲಿ ಸಣ್ಣ ಕಸದ ತುಂಡು ಬಿದ್ದರೂ ಜನ ಅದನ್ನು ಎತ್ತಿ ಕಸದ ಬುಟ್ಟಿಗೆ ಹಾಕುತ್ತಾರೆ
  ನಾವು ಕೆಲಸಗಾರರ ಮೇಲೆ ತುಂಬಾ ಅವಲಂಬಿಸಿದ್ದೇವೆ
  ನಮ್ಮ ನೈತಿಕತೆ ಕುಸಿದಿದೆ
  ನಮ್ಮ ನಾಡು ಎಂಬ ಪ್ರೇಮ ಪುಸ್ತಕದ ಬದನೇಕಾಯಿ ಅಷ್ಟೇ
  ನಂಗೂ ಎಷ್ಟೋ ಸಲ ಇಂಥಹ ಬೇಸರದ ಸಂಗತಿಗಳು ಬೆಂಗಳೂರಿಗೆ ಬಂದಾಗ ಗಮನಕ್ಕೆ ಬಂದಿದೆ

  ReplyDelete
 2. ನಿಮ್ಮ ಕಮೆಂಟಿಗೆ ಧನ್ಯವಾದಗಳು....ನೀವು ಹೇಳಿದ್ದು ಅಕ್ಷರಸಹ ಸತ್ಯ...ಒಂದು ಸಣ್ಣ ಕಾಗದದ ಚೂರು ಬಿದ್ದಿದ್ದರು ಅದನ್ನು ಎತ್ತಿ ಹಾಕುತ್ತಾರೆ ವಿದೇಶಿಗರು...ಆದರೆ ನಮ್ಮಲ್ಲಿ ಗೊತ್ತಿಲ್ಲದ ಯಾವುದೇ ಒಬ್ಬ ವ್ಯಕ್ತಿ/ಅನಾಥರು ಅಕಸ್ಮಾತಾಗಿ ರಸ್ತೆಯಲ್ಲಿ ಸತ್ತು ಬಿದ್ದಿದ್ದರು ನಮ್ಮ ಜನರು ತಮ್ಮ ಪಾಡಿಗೆ ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ...ಎಂಥಹ ವಿಪರ್ಯಾಸ ಅಲ್ಲವೇ??

  ReplyDelete
 3. ಇಲ್ಲಿ ಜನಜಾಗೃತಿ ಮುಖ್ಯವಾಗಬೇಕು. ಆದರೆ ಇಲ್ಲಿಗೆ ವಲಸೆ ಬರುವ ಜನರಿಂದ ಹಾಗೂ ಇಲ್ಲಿಯೇ ಹುಟ್ಟಿಬೆಳೆದವರಿಂದಲೂ ಏನೂ ಬದಲಾವಣೆ ಬಯಸಲಾಗದು. ಲಾ ಬ್ರೇಕಿಂಗ್‌ ಇಲ್ಲಿ ಕಾಮನ್‌ ಸಮಸ್ಯೆ. ಚೆಂದ ಕಾಣಲೆಂದು ಚಿತ್ರಗಳನ್ನು ಬಿಡಿಸಿದರೆ, ವಿಕೃತಗೊಳಿಸುವವರು ಇದ್ದೇ ಇರುತ್ತಾರೆ.... ಹೀಗೆ...... ಸಾಗುತ್ತದೆ...

  ReplyDelete