ಪುಟಗಳು

24 August 2010

ಅರ್ಥವಿಲ್ಲದ ಸಮ್ಮೇಳನಗಳ ಅಗತ್ಯ ಮತ್ತು ಅನಿವಾರ್ಯತೆ!!!

ಇಂದು ನಾನು ಬರೆಯುತ್ತಿರುವುದು ಪ್ರತಿ ವರ್ಷ ಕರ್ನಾಟಕ ಸಮಾಜಶಾಸ್ತ್ರ ಸಂಘ ನೆಡುಸುವ  ಸಮಾಜಶಾಸ್ತ್ರ ಸಮ್ಮೇಳನದ ಬಗ್ಗೆ....ಇಂದಿನ ವಿಧ್ಯಾರ್ಥಿಗಳಲ್ಲಿ ಕ್ಷಿಣಿಸುತ್ತಿರುವ  ಸಮಾಜಶಾಸ್ತ್ರದ ಬಗೆಗಿನ ಆಸಕ್ತಿಯನ್ನು, ಸಮಾಜಶಾಸ್ತ್ರದ ವಿಧ್ಯಾರ್ಥಿಗಳಿಗೆ ಸರ್ಕಾರೀ ಕ್ಷೇತ್ರದಲ್ಲಿ ಆಗುತ್ತಿರುವ ಅನ್ಯಾಯವನ್ನು ಹೋಗಲಾಡಿಸಲು, ಕ್ಷಿಣಿಸುತ್ತಿರುವ  ಸಮಜಶಾಸ್ತ್ರಿಯ ಅಧ್ಯಯನಗಳಿಗೆ ಉತ್ತೇಜನ ನೀಡಲು ಅದೆಲ್ಲಕಿಂಥಲು ಅತಿ ಮುಖ್ಯವಾಗಿ ಯುವ ಸಂಶೋದನಾಕಾರರನ್ನು  ಉತ್ತೇಜಿಸಿ,  ಸಂಶೋದನ ಕ್ಷೇತ್ರದಲ್ಲಿ ಅವರ ಜ್ಞಾನ ಪ್ರದರ್ಶನಕ್ಕೆ ಒಂದು ಉತ್ತಮ ವೇದಿಕೆ ಕಲ್ಪಿಸಿ ಕೊಡುವುದು ಈ ಕರ್ನಾಟಕ ಸಮಾಜಶಾಸ್ತ್ರ ಸಂಘ ನಡೆಸುವ ಸಮ್ಮೇಳನದ ಉದ್ದೇಶ....ಈ ಸಮ್ಮೇಳನದಲ್ಲಿ ವಿವಿದ ರೀತಿಯ ವಸ್ತು ವಿಷಯಕ್ಕೆ ಸಂಬಂದಿಸಿದಂತೆ ಪ್ರಬಂಧ ಮಂಡನೆಗೆ ಅವಕಾಶವನ್ನು ನೀಡಲಾಗುತ್ತದೆ.ಇದಕ್ಕಾಗಿ ರಾಜ್ಯದ ಅನೇಕ ಸ್ಥಳಗಳಿಂದ ವಿದ್ಯಾರ್ಥಿಗಳು, ಯುವ ಸಂಶೋದಕರು ಬಂದಿದ್ದರು. ಮೊದಲನೇ ಬಾರಿಗೆ ನಾನು ಕೂಡ ನನ್ನ ಪ್ರಭಂದ ಮಂಡನೆಗೆಂದು ಹೋಗಿದ್ದೆ...ಆಗ ಅಲ್ಲಿ ನಡೆದ ಕೆಲವು ಸಿಹಿ-ಕಹಿ (ಹೆಚ್ಚಾಗಿ ಕಹಿ ಘಟನೆಗಳ) ಬಗ್ಗೆ ನಮ್ಮೊಡನೆ ಹಂಚಿಕೊಳ್ಳಲು ಈ ಒಂದು ಸಣ್ಣ ಲೇಖನ 

ಈ ಬಾರಿಯ 9 ನೇ ಸಮಾಜಶಾಸ್ತ್ರ ಸಮ್ಮೇಳನ ನೆಡದದ್ದು  ಜುಲೈ ೩-೫ ರ ವರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ. ಈ  ಕನ್ನಡ ವಿಶ್ವವಿದ್ಯಾಲಯದಲ್ಲಿ ನೆಡದ ಸಮ್ಮೇಳನದಲ್ಲಿ  ಭಾಗವಹಿಸಲು ನಾನು ಮತ್ತು ನನ್ನ ಸ್ನೇಹಿತೆಯರೆಂದು ಕರೆಹಿಸಿಕೊಳ್ಳುವ ಗುಂಪೊಂದು ಅನೇಕ ಕನಸುಗಳನ್ನು ಕಟ್ಟಿಕೊಂಡು ಹೊರಟೆವು. ಮೊದಲ ಬಾರಿಗೆ ನಾನು ಒಂಟಿಯಾಗಿ ದೂರದ ಊರಿಗೆ ಹೋಗುವಾಗ ಒಂದು ರೀತಿಯ ಭಯ ನನ್ನನ್ನು ಕಾಡತೊಡಗಿತು. ನಾನು ಜುಲೈ ೨ರಂದು ಒಬ್ಬಳೇ ಬೆಂಗಳೂರಿನಿಂದ ಹೊಸಪೇಟೆಗೆ ಪ್ರಯಾಣ ಆರಂಭಿಸಿದೆ. ಇನ್ನು ಉಳಿದ ನನ್ನ ಸ್ನೇಹಿತೆಯರು ರೈಲಿನಲ್ಲಿ ಬಂದು ನನ್ನನ್ನು ಸೇರುವುದಾಗಿ ತಿಳಿಸಿದರು.... ಮೊದಲೇ ಗೊತ್ತಿಲ್ಲದ ಸ್ಥಳ ಬೆಳೆಗ್ಗಿನ ಜಾವ ಸುಮಾರು ೫.೧೦ ಕ್ಕೆ ನಾನು ಪ್ರಯಾಣಿಸುತ್ತಿದ್ದ ವೋಲ್ವೋ ಬಸ್  ಹೊಸಪೇಟೆ ಬಸ್ ನಿಲ್ದಾಣಕ್ಕೆ ಬಂದು ಸೇರಿತು...ಬಸ್ಸಿನಿಂದ ಕೆಳಗಿಳಿದ ಕೂಡಲೇ ನನಗೆ ವಸತಿ ವ್ಯವಸ್ಥೆ ಕಲ್ಪಿಸಿರುವುದು ಹೋಟೆಲ್ ಸಿದ್ಧಾರ್ಥ ಎಂದು ಮೊದಲೇ ಮೊಬೈಲ್ ಗೆ ಸಂದೇಶ ಬಂದಿದ್ದರಿಂದ ಅಲ್ಲಿಯೇ ಇದ್ದ ಆಟೋ ನಿಲ್ದಾಣದ ಬಳಿ ಹೋಗಿ ಡ್ರೈವರ್ ಒಬ್ಬರನ್ನ ಇಲ್ಲಿಂದ ಸಿದ್ಧಾರ್ಥ ಹೋಟೆಲ್ ಗೆ ಎಷ್ಟು ದೂರ ಆಗುತ್ತದೆ ಎಂದು ಕೇಳಿದಾಗ ಆತ ಇಲ್ಲಿಂದ ೧೫-೨೦ ನಿಮಿಷ ಆಗುತ್ತದೆ ಅಂದಾಗ ಅಷ್ಟು  ಹೊತ್ತಿನಲ್ಲಿ ಒಬ್ಬಳೇ ನೆಡೆದು ಹೋಗುವುದಕಿಂತ ಆಟೋ ನಲ್ಲಿ ಪ್ರಯಾಣ ಮಾಡೋಣ ಎಂದುಕೊಂಡೆ. ಕಾರಣ ನಮ್ಮ ದೇಶದಲ್ಲಿ ಇನ್ನು ಒಬ್ಬ ಹುಡುಗಿ ಒಂಟಿಯಾಗಿ, ನಿರ್ಭಯದಿಂದ ಒಬ್ಬಳೇ ಓಡಾಡುವ ಪರಿಸ್ಥಿತಿ ಇನ್ನು ನಿರ್ಮಾಣವಾಗಿಲ್ಲ ಎಂಬ ಭಾವನೆ ನನ್ನದು. (M G Road , Bridage Road etc  ಶ್ರೀಮಂತ ಮತ್ತು ಮುಂದುವರಿದ ಸ್ಥಳಗಳನ್ನು ಹೊರತು ಪಡಿಸಿ) ಸರಿ ಎಂದು ಆಟೋ ಹತ್ತಿ ಕುಳಿತ ಕೇವಲ ೩-೫ ನಿಮಿಷಗಳಲ್ಲಿ ಆಟೋ ನಾನು ಇಳಿಯಬೇಕಿದ್ದ ಸ್ಥಳ ಅಂದರೆ ಹೋಟೆಲ್ ಸಿದ್ಧಾರ್ಥ ಮುಂದೆ ಬಂದು ನಿಂತಿತು... ಜೊತೆಗೆ ಡ್ರೈವರ್ ಕೇಳಿದ್ದು ಬರೋಬ್ಬರಿ ೪೦ ರೂಪಾಯಿ.... ಸರಿ ಬೆಳಗಿನ ಜಾವ ಜೊತೆಗೆ ನಾನೆ ಮೊದಲನೇ ಪ್ರಯಾನಿಕಳಗಿದ್ದರಿಂದ ಮತ್ತು ನನ್ನ ಪ್ರಯಾಣದ ಆಯಾಸದಿಂದ ದಣಿದಿದ್ದ ನಾನು ಏನು ಮಾತನಾಡದೆ ಅವನು ಕೇಳಿದಷ್ಟು ನೀಡಿ ಹೋಟೆಲ್ ಒಳ ಹೋಗಿ ಇನ್ನು ನಿದ್ದೆಯಲ್ಲಿ ಕನಸು ಕಾಣುತ್ತಿದ್ದ ರೂಂ ಬಾಯ್ ನನ್ನು ಎಬ್ಬಿಸಿ ನನ್ನ ರೂಂ ಕೀ ತೆಗೆದುಕೊಂಡು ಒಳ ಹೋದೆ.....ಸ್ವಲ್ಪ ಹೊತ್ತು ನಾನು ಕೂಡ ನಿದ್ದೆಗೆ ಮೊರೆ ಹೋಗೋಣವೆಂದುಕೊಂದಾಗ ತಕ್ಷಣ ಇಂದೇ ನನ್ನ ಲೇಖನ ಮಂಡಿಸಬೇಕ್ಕಿದ್ದರಿಂದ ಸ್ವಲ್ಪ ತಯಾರಿ ನಡೆಸೋಣ ಇಂದು ಎದ್ದು ಕುಳಿತು...ಮತ್ತೆ ಮತ್ತೆ ಓದಿದನ್ನೇ ಓದಿ, ನನ್ನ ಪ್ರಭಂದ ಮಂಡನೆಯ ಬಳಿಕ ಯಾವ ಯಾವ ಪ್ರಶ್ನೆಗಳ ಸುರಿಮಳೆ ಸುರಿಯಬಹುದೆಂದು, ಆ ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ನೀಡಬೇಕೆಂದು ಯೋಚಿಸತೊಡಗಿದೆ.

ಸುಮಾರಿ ೭.೩೦ ನಿಮಿಷ ಮೈಸೂರಿನಿಂದ ಬಂದಿದ್ದ ನನ್ನ ಗೆಳತಿಯರು ಸಹ ನಾನು ಇದ್ದ ಹೋಟೆಲ್ನಲ್ಲೇ ಉಳಿದುಕೊಂಡಿದ್ದಾರೆ ಎಂಬ ಸುದ್ಧಿ ತಿಳಿದು ಅವರನ್ನು ಸಂಪರ್ಕಿಸಿ ಮಾತನಾಡಿ ನಾನು ಕೂಡ ಇಲ್ಲೇ ಇರುವುದಾಗಿ ಹೇಳಿದೆ ಅವರು ನಾವೆಲ್ಲರೂ ರೆಡಿ ಆಗಿ ಬರುತ್ತೇವೆ ಒಟ್ಟಿಗೆ ಸಮ್ಮೇಳನ ನೆದೆಯುತ್ತಿರುವಲ್ಲಿಗೆ ಹೋಗೋಣ ಎಂದು ಮಾತನಾಡಿಕೊಂಡೆವು.....ಸರಿ ಎಂದು ಎಲ್ಲ ತಯಾರಿ ನಡೆಸಿ ಕೂತೆ.....೧೦.೩೦ ಆದರೂ ಒಬ್ಬ ಸ್ನೇಹಿತೆಯೂ ಪತ್ತೆಯಿಲ್ಲ....ಫೋನ್ ಮಾಡಿ ಮಾಡಿ ಲೈನ್ ಸಿಗದೇ ಸಾಕಾಗಿ ಕೊನೆಗೂ ಲೈನ್ ಸಿಕ್ಕಿ ಇಲ್ಲಿದ್ದಿರೆ ??ಎಂದು ಇಂದು ಕೇಳಿದಾಗ ನನ್ನ ಸೊ ಕಾಲ್ಡ್  ಗೆಳತಿಯರು ಹೇಳಿದ ಉತ್ತರ..... ನಿನ್ ಎಲ್ಲಿದಿಯೇ?? ನಾವು University  ನಲ್ಲಿ ಇದ್ದೇವೆ ನಿನ್ ಕಾಣ್ತಿಲ್ಲ ಅಂತ..... ಅದನ್ನ  ಕೇಳಿದ ಕೂಡಲೇ ಮೊದಲೇ ಸಣ್ಣ ಪುಟ್ಟದಕ್ಕೆಲ್ಲ ಬೇಗ ಕೋಪ ಬಾರೋ ನಂಗೆ....ನನ್ನ ಬಗ್ಗೆ ನನಗೆ ಅನ್ನಿಸಿದ್ದು ಛೆ! ನಾನು ಯಾಕೆ ಹೀಗೆ ಬೇರೆಯವರ ಮೇಲೆ ಪದೇ ಪದೇ ಅವಲಂಬಿತಳಗುತ್ತಿನಿ  ಅಂತ??? ಸರಿ ಎಂದು ಹೋಟೆಲ್ ನಿಂದ ಹೊರಟು ಬಸ್ ನಿಲ್ದಾಣಕ್ಕೆ ಮತ್ತೆ ಆಟೋನಲ್ಲೇ ಹೋದಾಗ ನಾನು ಕೊಟ್ಟ ಬಾಡಿಗೆ ಎಷ್ಟು ಗೊತ್ತೇ ??? ಕೇವಲ ೧೦ ರೂ. ಎಲ್ಲಿ ೪೦ ರೂ ಎಲ್ಲಿ ೧೦ ರೂ.??? ಮನಸ್ಸಿನಲ್ಲಿಯೇ ಎಲ್ಲರನ್ನು ಬೈಯುತ್ತ ವಿಶ್ವವಿದ್ಯಾನಿಲಯಕ್ಕೆ ಹೋಗುವ ಬಸ್ ಹತ್ತಿ ಸುಮಾರು ೧೧.೪೫ ಕ್ಕೆ ತಲುಪಿದೆ.....

ಸಮ್ಮೇಳನದಲ್ಲಿ ಬಾಗವಹಿಸಲು ಬಂದ್ದಿದ್ದವನ್ನು ನೋಡಿ ಒಂದು ಕ್ಷಣ ಬೆರಗಾದೆ...ರಾಜ್ಯದ ಅನೇಕ ಸ್ಥಳಗಳಿಂದ ಸುಮಾರು ೬೦೦-೭೦೦  ವಿದ್ಯಾರ್ಥಿಗಳು, ಯುವ ಸಂಶೋದಕರು, ಉಪನ್ಯಾಸಕರು, ಮುಂತಾದವರು ಬಂದಿದ್ದರು. ಅಲ್ಲಿ ಸೇರಿದ್ದವರೆನೆಲ್ಲ ನೋಡಿ ಒಂದು ನಿಮಿಷ ಅರೆ! ನಮ್ಮ ಸಮಾಜಶಾಸ್ತ್ರ ಎಲ್ಲೂ ಕಳೆದು  ಹೋಗಿಲ್ಲ ಇನ್ನು ಇವೆರಲ್ಲಲ್ಲಿ ಅದು ಜೀವಂತವಾಗಿದೆ ಉಸಿರಾಡುತ್ತಿದೆ ಎಂದು. ಸರಿ ಅಷ್ಟೊತ್ತಿಗಾಗಲೇ ಕಾರ್ಯಕ್ರಮ ಶುರುವಾಗಿತ್ತು...ಎಲ್ಲರು ಅವರವರ ಚರ್ಚೆಯಲ್ಲಿ ಮಗ್ನರಾಗಿದ್ದರು....

ಸಮಾಜಶಾಸ್ತ್ರ ಎಷ್ಟು ಆಕರ್ಷಕವಾದ ಹೆಸರು...ಹೆಸರೇ ಸೂಚಿಸುವಂತೆ ನಾವು ಸಮಾಜವನ್ನೇ ಅಧ್ಯಯನ ವಸ್ತುವನ್ನಗಿಸಿಕೊದು.....ಅದರ ನಿರಂತರ ಬದಲಾವಣೆ, ಅದರ ಪರಿಣಾಮ, ಪ್ರಭಾವ, ಮುಂತಾದ....ಒಟ್ಟಾರೆ ನಮ್ಮ ಸಮಾಜದೊಳಗೆ ಬರುವ ಅತಿ ಸೂಕ್ಷ್ಮ ಸುಲಭ ವಸ್ತು ವಿಷಯದಿಂದ ಹಿಡಿದು ಅತಿ ಕಠಿಣ ವಸ್ತು ವಿಷಯದವರೆಗೆ ಇದರ ಸಮಾಜ ಒಂದು ಸಮಷ್ಟಿ ಯಂತೆ ಇದು ಅದ್ಯಯನಿಸುತ್ತದೆ. ಇಲ್ಲಿ ನಾನು ಸಮಾಜಶಾಸ್ತ್ರದ ಬಗ್ಗೆ ಏಕೆ ಹೇಳುತ್ತಿದನೆ ಎಂದರೆ....ಈ ವಿಷಯದಲ್ಲಿ ಪದವಿ ಡಾಕ್ಟ್ ರೇಟ್   ಪಡೆದು ಸಮ್ಮೇಳನದ ಕಾರ್ಯದರ್ಶಿಯಾಗಿ ಆಯ್ಕೆಯಾಗಿ, ಇಡೀ ಸಮ್ಮೇಳನ ಮುನ್ನೆಡೆಸುವ ಜವಾಬ್ಧಾರಿಯನ್ನು ಹೊತ್ತಿರುವ ಒಬ್ಬ ವ್ಯಕ್ತಿಯ ಬಗೆಗೆ ಹೇಳಲು ಹೊರಟ್ಟಿದ್ದೇನೆ... ಆತನ ಹೆಸರು ಇಲ್ಲಿ ಸೂಚಿಸುವುದು ಇಲ್ಲಿ ಸಮಂಜಸವಲ್ಲ ಎನ್ನುವುದು ನನ್ನ ಭಾವನೆ......ಸಮಾಜಶಾಸ್ತ್ರ ವನ್ನು ಅದ್ಯಯನ ಮಾಡಿರುವವರು ಸಮಾಜದ ಇತರ ಜನರೊಡನೆ ಅದರಲ್ಲೂ ನಮಂಥಹ ಯುವ ಪ್ರತಿಭೆಗಳಿಗೆ ನೀಡುವ ಮಾರ್ಗದರ್ಶನ ಅತ್ಯಂತ ಪ್ರಮುಖವಾದುದು...ಆದರೆ ಇಂಥಹ ಇವರನ್ನು ನೋಡಿ ಒಬ್ಬ ವ್ಯಕ್ತಿಯನ್ನು ಹೇಗೆ ಇಲ್ಲಿನ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯ ಹೇಗೆ ಸಹಿಸಿಕೊಳ್ಳುತ್ತಿದೆ ಎಂಬುದು ನನ್ನ ಪ್ರಶ್ನೆ???? ಆತ ಅಲ್ಲಿನ ವಿದ್ಯಾರ್ಥಿಗಳು ಜೊತೆ ಹೋಗಲಿ ನನಂತಹ ನೂರಾರು ಹೊರಗಿನಿದ ಬಂದ ವಿದ್ಯಾರ್ಥಿಗಳನ್ನೂ ಏಕವಚನದಲ್ಲಿ ಸಂಬೋಧಿಸಿ ಕರೆಯುತ್ತಿದ್ದ ರೀತಿ....ತಾನೆ ಏಕ ಚಕ್ರಾದಿಪಥಿಯಂತೆ ವರ್ತಿಸುತ್ತಿದ್ದ ರೀತಿ....ನನ್ನನು ಸಿಟ್ಟಿಗೆಲಿಸುತ್ತಿದ್ದರು ಏನು ಮಾಡಲಾಗದೆ ಸುಮ್ಮನೆ ನನ್ನ ಪಾಡಿಗೆ ನಾನು ಇರುವಂತೆ ಮಾಡಿತು....

ಇನ್ನು ಪ್ರಭಂದ ಮಂಡನೆಯ ಸಮಯ ಬಂದೆ ಬಿಟ್ಟಿತು, ಅದರ ಜೊತೆಗೆ session I ರಲ್ಲಿ   Abstract Book  ನಲ್ಲಿ ನನ್ನದೇ ಮೊದಲೆನೆಯ ಹೆಸರು ಇದ್ದಿದ್ದು ಇನ್ನು ನನ್ನನು ಭಯ ಪಡುವಂತೆ ಮಾಡಿತು....ಸರಿ ನನ್ನ ಪ್ರಭಂದ ಮಂಡನೆಗೆ ತಯಾರಾಗಿದ್ದ ನನಗೆ ಅಲ್ಲಿ ತಿಳಿದಿದ್ದು Session  III ರಿಂದ ಶುರುವಾಗುತ್ತದೆ ಎಂದು...ಸ್ವಲ್ಪವು ವ್ಯವಸ್ಥಿತವಿಲ್ಲದ ರೀತಿಯಲ್ಲಿ ಎಲ್ಲರು ಬಂದು ತಮ್ಮ ತಮ್ಮ ಪ್ರಭಂದ ಮಂಡಿಸಿ ಹೋಗುತ್ತಿದ್ದರು ಅಂದ  ಹಾಗೆ ಅವರಿಗೆ ನೀಡಿದ ಸಮಯ ೧೫-೨೦ ನಿಮಿಷ.... session  III  ಮತ್ತು session  II ಮುಗಿಯುವಷ್ಟರಲ್ಲಿ ಅಂದಿನ session ಗಳನ್ನೂ ಮುಗಿಸಲು ಇನ್ನು ೨೦ ನಿಮಿಷ ಬಾಕಿ ಇದ್ದಿದರಿಂದ session  I ರ ಮೊದಲನೆಯ ಪ್ರಭಂದ ಮಂಡಿಸಲು ಇಷ್ಟವಿದ್ದರೆ ಮಂದಿಸಬಹುದಾಗಿ ಹೇಳಿದರು ಆದರೆ ಬೆಳಗಿನ್ನಿಂದ ಅನೇಕ ಕಹಿ ಘಟನೆಗಳನ್ನೂ ನೋಡಿದ್ದ ನನಗೆ ಅಂದು ನನ್ನ ಪ್ರಭಂದ ಮಂಡಿಸಲು ಆಗದ ಕಾರಣ ನಾಳೆ ಮಾಡುವುದಾಗಿ ಹೇಳಿದೆ....ಅದು ನನ್ನ ದೊಡ್ಡ ತಪ್ಪು ಎಂದು ತಿಳಿದಿದ್ದು ಆ ಸಮಯ ಕಳೆದು ಹೋದ ಮೇಲೆ....  

ಮಾರನೆಯ ದಿನ ಬೇಗನೆ ಎದ್ದು ಮತ್ತೆ ಹಿಂದಿನ ದಿನದಂಥಯೇ ತಯಾರಿಯಾಗಿ ಗೆಳತಿಯರೊಡನೆ ಹೊರಟೆವು...ಬೆಳಗ್ಗೆ ಅತಿಥಿಗಳಿಂದ ವಿಶೇಷ ಭಾಷಣವಿತ್ತು ಅದೆಂಥಹ ವಿಶೇಷ ಭಾಷಣವೆಂದರೆ ಅವರಿಗೆ ಮಾತನಾಡಲು ನೀಡಿದ್ದು ೩೦ ನಿಮಿಷ ಆದರೆ ವಿಶೇಷ ಆಹ್ವಾನಿತರೂ, ಸಮಾಜದಲ್ಲಿ, ಅದರಲ್ಲೂ ಸಮಾಜಶಾಸ್ತ್ರದ ಅಧ್ಯಯನದ ಕ್ಷೇತ್ರದಲ್ಲಿ ದೊಡ್ಡ ಹೆಸರು ಪಡೆದ ಅವರು ತೆಗೆದುಕೊಂಡದ್ದು ಬರೋಬ್ಬರಿ ಒಂದು ಗಂಟೆ  ಐವತ್ತು ನಿಮಿಷಗಳು....ಅವರು ಹೇಳಿದ್ದನ್ನು ಕೇಳಿ ಕೇಳಿ ನಿದ್ದೆಗೆ ಜಾರಿದ್ದ ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡಿದ್ದೂ  Dr V  P Niranjanaradhya  ಅವರ ಪರಿಣಾಮಕಾರಿಯಾದ ಭಾಷಣ...ಅದನ್ನು ಕೇಳಿ, ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲ ನನಗೆ ವಯುಕ್ತಿಕವಾಗಿ ಅನಿಸಿದ್ದು ಅಯ್ಯೋ! ಇವರಿಗೆ ಯಾಕೆ ಅಸ್ತು ಸಮಯ ನಿಡಬಾರದಗಿತ್ತು ಎಂದು................

ಅದಾದ ನಂತರ ಪ್ರಭಂದ ಮಂಡನೆಯ ಸಮಯ ಬಂದೆ ಬಿಟ್ಟಿತು .....ನಾನೇ ಮೊದಲನೆಯವಳು ಎಂದು ಕಾದು ಕುಳಿತ್ತಿದ್ದವಳಿಗೆ ಕಾರಣಾಂತರ ಗಳಿಂದಾಗಿ ಬೇರೆ ನಾಲ್ಕು ವಿದ್ಯಾರ್ಥಿಗಳ  ಎದುರಾಗಿದ್ದು ಪ್ರಭಂದ ಮಂಡನೆಯಯಾ ವರೆಗೆ ಕಾಯಬೇಕಾಯಿತು....ಅಬ್ಬ! ಕೊನೆಗೂ ನನ್ನ ಸರಧಿ ಬಂತು.....ಈಗ ನನ್ನ ಜಾಣ್ಮೆಯನ್ನು, ಸಂಶೋದನ  ಸಾಮರ್ಥ್ಯವನ್ನು ತೋರಿಸುತ್ತೇನೆಂದು ಬಿಗುತ್ತಿದ್ದ ನನಗೆ ಬರಸಿಡಿಲು ಬಡಿದಂತೆ Chairperson ಮಾಡಿದ ಘೋಷಣೆ ನನ್ನನು ತಬ್ಬಿಬ್ಬು ಮಾಡಿತು....ಪ್ರಭಂದ ಮಂಡನೆಯ ಅವರಾರು ನೀಡಿದ ಸಮಯ ಎಷ್ಟು ಗೊತ್ತೇ ಕೇವಲ 3 ನಿಮಿಷ.....ಅರೆ ಇದೇನಿದು ಕೇವಲ 3 ನಿಮಿಷಗಳಲ್ಲಿ ಹೇಗೆ ಮಂಡಿಸುವುದು ಹೇಗೆ?? ನಾವೇನು ಅಲ್ಲಿಂದ ಹಾಡು ಹೇಳಲು ಬಂದಿದ್ದೇವ??? ಅಲ್ಲ  3 ನಿಮಿಷದಲ್ಲಿ ಒಂದು ಕಥೆ ಹೇಳಲು ಸಾಧ್ಯವಾಗುವುದಿಲ್ಲ ಅಂಥದರಲ್ಲಿ ಒಂದು ಸಂಶೋದನ ಪ್ರಭಂದವನ್ನು ಹೇಗೆ ಮಂಡಿಸುವುದು....ಎಷ್ಟೋ ಕನಸು ಹೊತ್ತು, ಅನೇಕ ತಿಂಗಳುಗಳಿಂದ ಅದಕ್ಕಾಗಿ ಪಟ್ಟ ಶ್ರಮವೆಲ್ಲ ವ್ಯರ್ಥವಾಗಿ ಹೋಯಿತು...

ಇನ್ನು ಅಲ್ಲಿನ ಊಟದ ವ್ಯವಸ್ಥೆ ಹೇಳತೀರದು....ದೊಂಬಿಯಂತೆ ನುಗ್ಗುತ್ತಿದ್ದ ಜನರು.... ಎಲ್ಲೆಂದರಲ್ಲಿ ತಿಂದ ತಟ್ಟೆ, ಕುಡಿದ ನೀರಿನ ಗ್ಲಾಸ್ ಎಸೆದು ಹೋಗುವುದು ಇದನ್ನು ನೋಡಿ ಇವರೆಲ್ಲರೂ ನಮ್ಮ ಸಮಾಜವನ್ನು ಅಭಿವೃದ್ದಿಯತ್ತ ಸಾಗಿಸುತ್ತಿರುವ ವಿದ್ಯಾವಂತರ ಸಮೂಹವೇ ಎನಿಸುತ್ತಿತ್ತು.  ಇದರ ಜೊತೆಗೆ ಮನವಿಯತೆಯೇ ಮರೆತಂತೆ ಅಲ್ಲಿನ ಕೆಲಸಗಾರ ಮೇಲೆ ತನ್ನ ಶೌರ್ಯ, ಪ್ರತಾಪವನ್ನು ತೋರಿಸುತ್ತಿದ್ದ ಸಮ್ಮೇಳನದ ಕಾರ್ಯದರ್ಶಿ.

ಇನ್ನು ಸಂಜೆ ೬.೩೦ ರ ವೇಳೆಗೆ  ಕರ್ನಾಟಕ ಸಮಾಜಶಾಸ್ತ್ರ ಸಂಘದ ಸಾಮಾನ್ಯ ಸಭೆ ಇತ್ತು ನನ್ನು ಕೂಡ ಅದರ ಸದಸ್ಯೆ ಆಗಿದ್ದರಿಂದ ಆ ಸಭೆಯಲ್ಲಿ ಭಾಗವಿಹಿಸಬೇಕಾದ ಅಗತ್ಯ ಜೊತೆಗೆ ಅನಿವಾರ್ಯವೂ ಬಂತು.....ಅಲ್ಲಿ ನೆಡೆಯುತ್ತಿದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾದ ವಿಷಯ ಮುಂದಿನ ಸಮ್ಮೇಳನ ಎಲ್ಲಿ ನಡೆಸಬೇಕೆಂಬುದು....ಆ ಸಭೆಯನ್ನು ನೋಡಿ ನಂಗೆ ಅನಿಸಿದ್ದು ನಮ್ಮ ರಾಜಕೀಯ ವ್ಯಕ್ತಿಗಳಿಗಿಂತ ಇವರೇನು ಕಮ್ಮಿ......ಅಲ್ಲಿ ನೆರೆದಿದ್ದ ಸದಸ್ಯರುಗಳು ನಡೆದುಕೊಂಡ ರೀತಿ ಅವರೆಲ್ಲರೂ ನಾಗರಿಕತೆಯನ್ನು ಮರೆತಂತೆ ಇತ್ತು...

ಇನ್ನು ನಮಗೆ ಸಮ್ಮೇಳನದ Invitation ನಲ್ಲಿ ಒಬ್ಬ ವಿದ್ಯಾರ್ಥಿ ಕೇವಲ 2 ಪ್ರಭಂದಗಳನ್ನು ಮಾತ್ರ ಕಳುಹಿಸಲು ಅವಕಾಶ ಎಂದು ತಿಳಿಸಿದ್ದರು ಆದರೆ ಸಮ್ಮೇಳನದ ವತಿಯಿಂದ ನೀಡಿದ Abstract Book  ನಲ್ಲಿ ನಾನು ಕಂಡದ್ದು ಒಬ್ಬ 8  ಪ್ರಭಂದಗಳನ್ನು, ಇನ್ನೊಬ್ಬರು 6 ಹೀಗೆ....ಇಲ್ಲಿ ಇಸ್ಟೊಂದು ಪ್ರಬಂಧ ಗಳನ್ನೂ ಕಳುಹಿಸಿರುವರೆಲ್ಲರು ಸಮ್ಮೇಳನದ ಕಾರ್ಯದರ್ಶಿಯ ಆಪ್ತರು, ಸ್ನೇಹಿತರೆ ಆಗಿದ್ದರು.....ಜೊತೆಗೆ ಯಾರು ಯಾರು ಪ್ರಭಂದ ಗಳನ್ನೂ ಕಳುಹಿಸುವರೋ ಅವರೆಲ್ಲರಿಗೂ ತಮ್ಮ ಪ್ರಭಂದ ಮಂಡಿಸುವ ಅವಕಾಶ...ಪ್ರಭಂದಗಳ ಗುಣಮಟ್ಟವನ್ನು ಕೇಳುವವರೇ ಇಲ್ಲ.....   

ಅಂತು ಇಂತೂ ನಾವು  ಸಮ್ಮೇಳನಕ್ಕೆ ತೆರೆ ಎಳೆಯುವ  ಕೊನೆಯದಿನ  ಬಂದೆ ಬಿಟ್ಟಿತು.ಎಲ್ಲ ಕಾರ್ಯಕ್ರಮಗಳಲ್ಲೂ ನಡೆಯುವಂತೆ ಒಂದು ಔಪಚಾರಿಕ ಸಮಾರಂಭ, ಅಲ್ಲಿ ಮುಖ್ಯ ಅಥಿತಿಗಳಿಂದ ಒಂದು ಭಾಷಣ, ಸಮಾರಂಭ ಯಶಸ್ವಿಯಾಗದಿದ್ದರು ಮಾತು ಮಾತಿಗೂ "ಈ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ನಿಮ್ಮೆಲ್ಲರಿಗೂ" ಎಂಬ ವಾಕ್ಯ ಅಲ್ಲಿ ನೆರೆದಿದ್ದ ನನ್ನಂತಹ ನೂರಾರು ಯುವ ಸಂಶೋದಕರಲ್ಲಿ ನಗು ಜೊತೆಗೆ ಅಲ್ಲಿನ ವ್ಯವಸ್ಥೆಯ ಬಗ್ಗೆ, ಸಮ್ಮೇಳನದ ಬಗ್ಗೆ ಒಂದು ರೀತಿಯ ಅಸಮದಾನ ಪಡುವಂತಿತ್ತು.  

ಎಲ್ಲಿ ನಾನು ನಿಮ್ಮ ಮುಂದೆ ಇಡುತ್ತಿರುವ ಪ್ರಶ್ನೆಗಳು:

ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ಸಮ್ಮೇಳನಗಳನ್ನೂ ನಡೆಸುವ ಉದ್ದೇಶಗಳಾದರೂ ಏನು ? ಕೇವಲ ಔಪಚಾರಿಕವಾಗಿ ಸಮ್ಮೇಳನಗಳನ್ನೂ ಮಾಡಿ ಆಗುವ ಅನುಕೂಲಗಳಾದರೂ ಏನು? ಯುವ ಸಂಶೋದನಾಕಾರರನ್ನು ಉತ್ತೆಜಿಸುವಲ್ಲಿ ಇಂತಹ ಸಮ್ಮೇಳನಗಳು ಎಷ್ಟರಮಟ್ಟಿಗೆ ಸಫಲವಗುತ್ತಿವೆ? ಸಮ್ಮೇಳನಕ್ಕೆ ಬಂದ ವಿದ್ಯಾರ್ಥಿಗಳು  ಇಂತಹ ಸಮ್ಮೇಳನಗಳಿಂದ ಪಡೆದುಕೊಂಡು ಹೋಗುತ್ತಿರುವುದೇನು? ಕೊನೆಯದಾಗಿ ಇಂತಹ ಸಮ್ಮೇಳನಗಳು ಸಮಾಜಶಾಸ್ತ್ರಕ್ಕೆ ಅದರ  ಬೆಳವಣಿಗೆಗಾಗಿ ಮಾಡುತ್ತಿರುವುದು ಏನು?

ಕೇವಲ ಸಮಾಜಶಾಸ್ತ್ರ ವಿಷಯ ಒಂದೇ ಅಲ್ಲ ಎಲ್ಲ ವಿಷಯಕ್ಕೆ ಸಂಬದಿಸಿದ ಇಂತಹ ಎಷ್ಟೋ ಸಮ್ಮೇಳನಗಳು ನಮ್ಮಲ್ಲಿ ನಡೆಯುತ್ತಿರುತ್ತವೆ, ಇಂತಹ ಸಮ್ಮೇಳನಗಳನ್ನು ಆಯೋಜಿಸುವ ಸಂಘಗಳು, ವಿಶ್ವವಿದ್ಯಾಲಯಗಳು ತಮ್ಮ ಜವಾಬ್ಧಾರಿಯನ್ನು ಅರಿತು ಅಲ್ಲಿಗೆ ಬರುವ ಅನೇಕ ವಿಧ್ಯಾರ್ಥಿಗಳ ಜ್ಞಾನವೃದ್ಧಿಗೆ ನೆರವಾಗುವನ್ತಿರಬೇಕು. ಇಲ್ಲವಾದರೆ ಇಂತಹ  ಸಮ್ಮೇಳನಗಳ ಅಗತ್ಯವಾದರೂ ಏನಿದೆ????

ಇನ್ನು ಸಮ್ಮೇಳನ ಮುಗಿಸಿ  return ticket ಬುಕ್ ಮಾಡದೇ ಇದ್ದ ನನ್ನ ಬೇಜವಾಬ್ದಾರಿ ತನಕ್ಕೆ ಒಂದು ದೊಡ್ಡ ಪಾಠ ಕಲಿಸಿಕೊಟ್ಟ ಉಪಾಧ್ಯಾಯರೆಂದು ಕರೆಸಿಕೊಳ್ಳುವ ಅನೇಖ ಮಹನೀಯರುಗಳು.... ನನ್ನ ಮೈಸೂರಿನಿಂದ ಬಂದ ಗೆಳೆತಿಯರುಗಳೊಂದಿಗೆ ವಾಪಾಸ್ ಹೋಗಬೇಕೆಂದು ಅಂದುಕೊಂಡು ಯಾರೋ ಒಬ್ಬರು ಮೈಸೂರಿಗೆ ಹೋಗುತ್ತಿಲ್ಲ ಅವರ ಬದಲಿಗೆ ಅವರ ಟಿಕೆಟ್ ನಲ್ಲಿ ನಾನು ಪ್ರಯಾಣ ಮಾಡಬಹುದೇ?? ಎಂದು ರೈಲ್ವೆ ಸ್ಟೇಷನ್ ನ TC  ಯನ್ನು ಕೇಳಿ ಬಂದೆ ಆತ ಸರಿ ಬನ್ನಿ ನೋಡೋಣ ಎಂದಾಗ ಅಬ್ಬ! ಹೋಗುವಗದರು ಸ್ನೇಹಿತರೊಡನೆ ಹೋಗಬಹುದು ಎಂದು ಅಂದುಕೊಂಡು ಹೋಟೆಲ್ ರೂಂ ಗೆ ಬಂದಾಗ ಅಲ್ಲಿ ಇದ್ದ ಮೈಸೂರಿನಲ್ಲಿ ವಿವಿಧ ಕಾಲೇಜ್ ಗಳಲ್ಲಿ ಉಪಾನ್ಯಾಸಕರುಗಳಾಗಿದ್ದ ಮಹನೀಯರು ನನ್ನೊಡನೆ ನೆದುದುಕೊಂಡ ರೀತಿ ತೀರ ಹೀನಾಯವಾಗಿತ್ತು....ಅವರುಗಳು ನನಗೆ ನೀವು ನಮ್ಮೊಡನೆ ಬರುವುದು ಬೇಡ,,, ಬೇರೆ ಯರೋದೋ ಟಿಕೆಟ್ನಲ್ಲಿ ನೀವು ಪ್ರಯಾಣ ಮಾಡುವುದು ಸರಿ ಇಲ್ಲ,,,,ಅಕಸ್ಮಾತ್ ಏನಾದರು ತೊಂದರೆ ಆದರೆ ಅದು ನಮ್ಮ ಮೇಲೆ ಬರುತ್ತದೆ ಇಂದು ಹೇಳಿ ನೀವು ಬಸ್ ನಲ್ಲಿ ಹೋಗಿ ಎಂದರು. ನನ್ನ ಗೆಳತಿಯರಿಗೂ ಅವರೇ ಟಿಕೆಟ್ ಗಳನ್ನೂ ಬುಕ್ ಮಡಿದ ಕಾರಣ ಅವ್ರು ಹೇಳಿದ್ದನ್ನು ನಾನು ಕೇಳಲೇ ಬೇಕಾಯಿತು...ನಾನು ಹೇಳಬೇಕೆಂದಿರುವುದು ಬೇರೆ ಯರೋದೋ ಟಿಕೆಟ್ನಲ್ಲಿ ಪ್ರಯಾಣ ಮಾಡುವುದು ಸರಿ ಇಲ್ಲ ಅದನ್ನು ನಾನು ಒಪ್ಪುತ್ತೇನೆ...ಆದರೆ ಒಬ್ಬ ಹುಡುಗಿ ಒಬ್ಬಳೇ ಬೆಂಗಳೂರಿಗೆ ಪ್ರಯಾಣಿಸುವುದು ಕಷ್ಟವಾಗುತ್ತದೆ ಎನ್ನುವ ಕನಿಷ್ಠ ಸೌಜನ್ಯವನ್ನು ತೋರದ ಇವರುಗಳು ತಮ್ಮ ವಿದ್ಯಾರ್ಥಿಗಳಿಗೆ ಹೇಳಿಕೊದುವುದದರು ಏನು???  ಅಕಸ್ಮಾತ್ ಏನಾದರು ತೊಂದರೆ ಆದರೆ ಎಂದು ಹೇಳಿದರು...... ರೈಲಿನಲ್ಲಿ ನಾನು ಮಾಡಬಹುದಾದ ಮಹಾಪರಾಧವಾದರೂ ಏನು ??? ನನ್ನ ಜಾಗದಲ್ಲಿ ಅವರ ಮಗಳೋ ಅಥವಾ ವಿದ್ಯಾರ್ಥಿಯೋ ಇದ್ದಾರೆ ಹೀಗೆ ನೆಡೆದು ಕೊಳ್ಳುತ್ತಿದ್ದರ???

ಸರಿ ಎಂದು ವೋಲ್ವೋ ಬಸ್ ನಲ್ಲಿ ಪ್ರಯಾಣ ಮಾಡೋಣ ಎಂದು ತೀರ್ಮಾನಿಸಿ ಟಿಕೆಟ್ ಬುಕ್ ಮಾಡಲು ಹೋದಾಗ ರಾತ್ರಿ 9 .35 ನನ್ನ ಬುಕ್ ಮಡಿದ ಬಸ್ ಇರುವುದು ರಾತ್ರಿ 11 .45 ಕ್ಕೆ ....ಅಷ್ಟು ಹೊತ್ತಿನಲ್ಲಿ ಹೋಟೆಲ್ ನಿಂದ ಬಸ್ ನಿಲ್ದಾಣಕ್ಕೆ ಹೋಗುವುದಾದರೂ ಹೇಗೆ ಎಂದು ಯೋಚಿಸುತ್ತ ಕುಳಿತೆ...ಇತ್ತ ಮೈಸೂರಿಗೆ ಹೊರಡಲು ನನ್ನ ಗೆಳೆತಿಯರು ತಯಾರಾಗಿದ್ದರು,,,ಎಲ್ಲರು ನನಗೆ ಹುಷಾರು ಎಂದು ಹೇಳಿ ಹೊರಟರು.......ಆದರೆ .........ಬಾಯಿ ಮಾತಿಗಾದರೂ.....ಒಬ್ಬಳೇ ಹೋಗುತ್ತಿದ್ದೀನಿ ಎಂದು ತಿಳಿದಿದ್ದರು ಒಂದು ಮಾತು ಹೇಳದೆ ಅವರ ಜೊತೆ ಬಂದಿದ್ದ ಲೇಡಿ Lecturer ಗಳ luggage  ತೆಗೆದುಕೊಂಡು ಹೋಗುತ್ತಿದ್ದ ಅವರನ್ನು ನೋಡಿ ನನಗೆ ಅನಿಸಿದ್ದು "ಎಂಥಹ ಉದಾತ್ತ ಮನೋಭಾವ ಉಳ್ಳವರು" ಎಂದು.....ಸರಿ ಅಲ್ಲಿಯೇ ಇದ್ದ ಒಂದು ಆಟೋ ಚಾಲಕ ಮತ್ತು ಹೋಟೆಲ್ ಸಿಬ್ಬಂದಿ ನನ್ನನ್ನು ಬಸ್ ನಿಲ್ದಾಣಕ್ಕೆ ತಲುಪಿಸಿದರು....ಗೊತ್ತಿಲ್ಲದ  ಊರಿನಲ್ಲಿ ನನಗೆ ಸಹಾಯ ಮಾಡಿ ಹೊಸಪೇಟೆ ಅಲ್ಲಿನ ಜನಕ್ಕೆ ನಾನು ಚಿರಋಣಿ....

ಬರುವಾಗ ಕತ್ತಲೆ, ಹೋಗುವಾಗ ಕತ್ತಲೆ
ಬಂದು ಹೋಗುವ ನಡುವೆ ಬರೀ ಬೆತ್ತಲೆ..........ಎನ್ನುವ ಈ ಹಾಡನ್ನು ನಾನು 

ಬರುವಾಗ ಒಬ್ಬಳೇ, ಹೋಗುವಾಗ ಒಬ್ಬಳೇ 
ಬಂದು ಹೋಗುವ ನಡುವೆ ಸಮ್ಮೇಳನದ ಗದ್ದಲೇ....ಬರೀ ಗದ್ದಲೇ....   
      

2 comments:

  1. ಬಹಳ ಚೆನ್ನಾಗಿ ಮೂಡಿ ಬಂದಿದೆ ಸವಿತಾ!!!! ನೇರವಾಗಿ ಸುಂದರವಾಗಿ ನಮ್ಮ ಮುಂದೆ ಬಹಳ ಹಾಸ್ಯ ಪ್ರಜ್ನೆಯಿಂದ ಇಟ್ಟಿರುವುದಕ್ಕೆ ಧನ್ಯವಾದಗಳು!!!

    ReplyDelete