ಪುಟಗಳು

04 August 2010

ಮಾನವನ ಸ್ವಾರ್ಥದ ಪರಮಾವದಿ ಎಂದರೆ ಇದೇನಾ???

ಸ್ನೇಹಿತರೆ, ಹೊಸದಾಗಿ ಬ್ಲಾಗ್ ಲೋಕಕ್ಕೆ ಕಾಲಿಟ್ಟಿರುವ ನಾನು ಮೊದಲ ಬರಿ ಬರೆಯುತ್ತಿದ್ದೇನೆ...ಈ ನನ್ನ ಮೊದಲ ಬರವಣಿಗೆಯಲ್ಲಿ ನಾನು ಯಾವುದೊ ಒಂದು ಸಂತೋಷದ, ಮನಸ್ಸಿಗೆ ಮುದ ನೀಡುವ ವಿಷಯದ ಬಗ್ಗೆ ಬರೆಯುತ್ತಿಲ್ಲ ಬದಲಿಗೆ ನಮ್ಮ ನೈತಿಕತೆಗೆ ಅವಮಾನಕಾರಿಗಿರುವ ವಿಷಯದ ಬಗ್ಗೆ ಬರೆಯುತ್ತಿದ್ದೇನೆ. ಖಾಸಗಿ ಚಾನೆಲ್ ಒಂದರಲ್ಲಿ ನೆನ್ನೆ ನಾನು ನೋಡಿದ ಸುದ್ಧಿ ನನಗೆ ಆಘಾತಕಾರಿ ಎನಿಸಿತ್ತು. ಅದೇನೆಂದರೆ, ದೇಶದ ರಕ್ಷಣೆಯ ಹೊಣೆ ಹೊತ್ತು, ನಮ್ಮನ್ನು ಸುರಕ್ಷಿತವಾಗಿ ಕಾಯುತ್ತಿರುವ ನಮ್ಮ ಸೈನಿಕರಿಗೆ ಒದಗಿರುವ ಸ್ಥಿತಿ. ಅದನ್ನುನೋಡಿ  ಒಂದು ಕ್ಷಣ ನಾವು ನಿಜವಾಗಿಯೂ ಭಾರತೀಯರೆ? ಎಂಬ ಪ್ರಶ್ನೆ ನನ್ನ ಎದುರಿಗೆ ಬಂದಿತು. ನಮ್ಮ ಸೈನಿಕರು ಹಗಲು ರಾತ್ರಿ ಎನ್ನದೆ ನಮಗೆ  ವೈರಿಗಳಿಂದ ರಕ್ಷಣೆ ನೀಡುತ್ತಿದ್ದಾರೆ ಆದರೆ ಅವರಿಗೆ ಸಿಗುತ್ತಿರುವುದು ಏನು? ಕೆಟ್ಟು ತಿನ್ನಲಾಗದ ಸ್ಥಿತಿಯಲ್ಲಿರುವ ಅನ್ನ. ಇಂದು ಒಬ್ಬ ಬಿಕ್ಷುಕನು ಸಹ ಹಳಸಿದ ಅನ್ನವನ್ನು ತಿನ್ನಲು ಇಷ್ಟಪಡುವುದಿಲ್ಲ, ಅಂತಹದರಲ್ಲಿ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಹೊರಡುವ ಸೈನಿಕರಿಗೆ ಇದನ್ನು ತಿನ್ನುವ ಪರಿಸ್ಥಿತಿ ಒದಗಿದೆ. ಜೊತೆಗೆ ಅಲ್ಲಿ ತಿಳಿದು ಬಂದ ಮತ್ತೊಂದು ಸುದ್ದಿ ಎಂದರೆ ಸೈನಿಕರಿಗೆ ಸರಬರಾಜು ಮಾಡುವ ಊಟದ ವಿಷಯದಲ್ಲೂ ರಾಜಕೀಯ....... ಖಾಸಗಿ ಕಂಪೆನಿಗಳ ಕಾರುಬಾರು....... ಅಬ್ಬಬ! ಎಂತಹ ವಿಪರ್ಯಾಸ ಅಲ್ಲವೇ? ದೇಶದ ಒಳಗಿನ ಜನರನ್ನು ಲೂಟಿ ಮಾಡುವ ಜೊತೆಗೆ, ದೇಶ ಕಾಯುವ ಸೈನಿಕನ ಊಟವು ಲೂಟಿ ಮಾಡುವುದೇ? ಎಲ್ಲಿ ಹೋಯಿತು ನಮ್ಮ ಭಾರತೀಯ ಸಂಸ್ಕೃತಿಯ ಮಾನವೀಯ ಮೌಲ್ಯಗಳು? ಸ್ನೇಹಿತರೆ ಒಮ್ಮೆ ಯೋಚಿಸಿ...................ನಮ್ಮಲ್ಲಿ ಆಗ್ಗಾಗ್ಗೆ ಡಾಕ್ಟರಗಳು, ಸರ್ಕಾರೀ ವಕೀಲರು, ಸರ್ಕಾರೀ ಕೆಲಸಗಾರರು ಅಷ್ಟೇ ಏಕೆ ನಮ್ಮ ರಾಜಕೀಯ ನಾಯಕರು ಪಾದಯಾತ್ರೆ,  ಬಂದ್, ಉಪವಾಸ ಸತ್ಯಾಗ್ರಹ, ಚಳುವಳಿ ಮಾಡುವಂತೆ ಒಮ್ಮೆ ನಮ್ಮ ಸೈನಿಕರು ಸಹ ತಮ್ಮ ಕರ್ತವ್ಯ ಪಾಲನೆ ಬಿಟ್ಟು ಕೂತರೆ ನಮ್ಮ ಅಂದರೆ ದೇಶದ ಗತಿ ಏನಾಗುತ್ತದೆ ಎಂದು? ಮಾನವನ ಸ್ವಾರ್ಥದ ಪರಮಾವದಿ ಎಂದರೆ ಇದೇನಾ???

ಸ್ನೇಹಿತರೆ ಇದು ನನ್ನ ಮೊದಲ ಬರವಣಿಗೆ ಅದ್ದರಿಂದ ತಪ್ಪುಗಳೆನಾದರೂ ಕಂಡು ಬಂದರೆ ಕ್ಷಮೆ ಇರಲಿ .........

3 comments:

  1. ಪ್ರಿಯ ಸ್ನೇಹಿತೆ,

    ಹೊಸದಾಗಿ ಬ್ಲಾಗ್ ಎಡೆಗೆ ಹೆಜ್ಜೆಯಿಟ್ಟಿರುವ ನಿಮಗೆ ಶುಭ ಹಾರೈಕೆಗಳು.
    ಸೈನಿಕರ ಬಗೆಗಿನ ನಿಮ್ಮ ಕಳಕಳಿ ಸ್ವಾಗತಾರ್ಹವಾಗಿದೆ. ಸೈನಿಕರಿಗೆ ಆಗಿರುವ ಮತ್ತು ಆಗುತ್ತಿರುವ ಅನ್ಯಾಯದ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕೆಂಬ ಹಂಬಲ ನಿಮಗಿದ್ದರೆ ಒಮ್ಮೆ ರವಿ ಬೆಳೆಗೆರೆಯವರ "ಹಿಮಾಲಯನ್ ಬ್ಲಂಡರ್" ಓದಿ.

    ಹೀಗೆ ಬರೆಯುತ್ತಿರಿ.......

    ಗುರು

    ReplyDelete
  2. ಧನ್ಯವಾದಗಳು.....................
    ಆದರೆ ಕಾಳಜಿಯನ್ನು ಕೇವಲ ಬರವಣಿಗೆಯಲ್ಲಿ ತೋರಿಸಿದರೆ ಸಾಕೆ?

    ಸವಿತ

    ReplyDelete
  3. ಸಮಾಜದೆಡೆಗಿರುವ ನಿಮ್ಮ ಕಾಳಜಿ ಮತ್ತು ಬರವಣಿಗೆಯೆಡೆಗಿರುವ ಆಸಕ್ತಿ ನಿಮಗೆ ಯಶಸ್ಸನ್ನು ತರಲಿ

    ReplyDelete