ಶಾಸಕರ, ಸಚಿವರ ವೇತನದಲ್ಲಿ ಭಾರೀ ಹೆಚ್ಚಳ...ವಾಹ್
ಎಂತಹ ಸರ್ಕಾರ ನೋಡಿ... ರೈತನಂತೆ ಭೂಮಿ ಉತ್ತಲಿಲ್ಲ, ಭಿತ್ತಲಿಲ್ಲ...ಸರ್ಕಾರಿ ಕೆಲಸಗಾರರಂತೆ 10-5
ಘಂಟೆ
ಆಫೀಸಿನಲ್ಲಿ ಕುಳಿತು ಕೆಲಸ ಮಾಡಲಿಲ್ಲ...ಮಹಿಳೆಯರಂತೆ ಸಮಯದ ಅಂಕೆಯೇ ಇಲ್ಲದೆ ದುಡಿಯುತ್ತಿಲ್ಲ...
ಆದರೂ ನಮ್ಮ ಜನನಾಯಕರಿಗೆ ವೇತನ ಹೆಚ್ಚಳ. ಎಂತಹ ನಾಡಿನಲ್ಲಿ ಬದುಕುತ್ತಿದೇವೆ...tomato ಬೆಲೆ
ಒಂದೂವರೆ ಕೆ.ಜಿ. ಗೆ 10 ರುಪಾಯಿಯಾಗಿ ಬೆಳೆದ ರೈತ ಕಣ್ಣೀರಿನಲ್ಲಿ ಅಲ್ಲಲ್ಲ tomato ರಸದಲ್ಲಿಯೇ
ಕೈತೊಳೆಯುತ್ತಿದ್ದಾನೆ. ರಾಜ್ಯದಲ್ಲಿ ಮಳೆ ಇಲ್ಲದೆ ಬರ ಇಂದು ಘೋಷಣೆಯಾಗಿರುವಾಗ ಇವುರುಗಳಿಗೆ ವೇತನದಲ್ಲಿ
ಹೆಚ್ಚಳ. ಚುನಾವಣಾ ವೇಳೆ ಆಸ್ತಿ ಘೋಷಣೆ ಮಾಡುವಾಗ ಕೋಟ್ಯಂತರ ರುಪಾಯಿ ಆಸ್ತಿ ಇದೆ (ತಮ್ಮ
ಕುಟುಂಬ/ಗಳ ಹೆಸರಿನಲಲ್ಲೂ) ಎಂದು ತೋರಿಸುವ ಶಾಸಕರ, ಸಚಿವರು ಪಾಪ ತಮ್ಮ ತಮ್ಮ ಸರ್ಕಾರೀ
ವೇತನದಲ್ಲಿಯೇ ತಮ್ಮ ಕುಟುಂಬಗಳನ್ನೂ ಸಾಕುತ್ತಿದ್ದಾರೆ. ಸದನ ನೆಡೆಯುವಾಗ ದಿನಕ್ಕೆ 1500 ಭತ್ಯೆ.
ಅಬ್ಬಾ... ಸದನದ ಹಾಜರಾತಿಗೆ ಸಹಿ ಮಾಡಿ ನಿದ್ದೆ ಮಾಡುತ್ತ ಭತ್ಯೆ ಪಡೆಯುವವರು ಒಂದು ಕಡೆಯಾದರೆ,
ಸಹಿ ಮಾಡಿ ಹೊರಗೆ ಹೋಗುವವರು ಇನ್ನೊದು ಕಡೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಒನ್ನುವುದಕ್ಕೆ
ಇದು ಒಳ್ಳೆಯ ನಿದರ್ಶನ.
ಬ್ರಿಟೀಷರಿಗೆ ಕಪ್ಪ ಕೊಡಬೇಕಾಗಿ ಬಂದಾಗ ಗಂಡೆದೆಯ ಕಿತ್ತೂರಿನ ರಾಣಿ ಚೆನ್ನಮ್ಮ
ಹೇಳಿದ ಮಾತುಗಳು ನಾವೆಲ್ಲರೂ ಎಂದು ಮರೆಯುವಂತಿಲ್ಲ...ಅದರ ಒಂದು ಚಿಕ್ಕ ಸಾಲು ‘ನೀವೇನು ರೈತರಂತೆ
ಭೂಮಿ ಉತ್ತಿರೆ, ಬಿತ್ತಿರೆ ನಿಮಗೇಕೆ ಕೊಡಬೇಕು ಕಪ್ಪ’ ಎಂದು...ಇಲ್ಲಿಯೂ ಹಾಗೆ ನಮ್ಮದೇ
ತೆರಿಗೆಯ ದುಡ್ಡಿನಲ್ಲಿ ನಮ್ಮನ್ನು ಸಾಲಗರರನ್ನಾಗಿ ಮಾಡಿ, ಹೆಗ್ಗಣಗಳಂತೆ ತಿಂದು ತೇಗುತ್ತಿರುವ ಶಾಸಕರ,
ಸಚಿವರ, ಮುಖ್ಯಮಂತ್ರಿಗಳಿಗೂ ಸೇರಿತಂದೆ ವೇತನ ಹೆಚ್ಚಿಸಲು ಅನುಸರಿಸಿರುವ ಮಾನದಂಡಗಳು ಯಾವುದೆಂದು
ಯಾರಿಗಾದರು ತಿಳಿದಿದೆಯೇ ?ಗೊತ್ತಿದ್ದರೆ ದಯವಿಟ್ಟು ತಿಳಿಸಿ...
‘ಮಾಡಿದ್ದುನ್ನೋ ಮಹರಾಯ’ ಎನ್ನುವಂತೆ ನಾವೇ ಆರಿಸಿ ಕಳುಹಿಸಿರುವ ಇವರುಗಳಿಗೆ ಒಂದು
ಚೂರೂ ನೋವಾಗದಂತೆ ಇವರ ಮತ್ತು ಇವರ ಕುಟುಂಬ/ಗಳನ್ನೂ ನೋಡಿಕೊಳ್ಳುವುದು ನಮ್ಮ ಹೊಣೆ ಅಲ್ಲವೇ
ಅದಕ್ಕಾಗಿ ನಮ್ಮ ತೆರಿಗೆಯ ಹಣದಿಂದ ಇವರಿಗೆ ಸಂಭಳ ಭಾಗ್ಯ ನೀಡೋಣ ....
No comments:
Post a Comment