ಇಂದು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇಲ್ಲಿನ ಪ್ರತಿಯೊಬ್ಬ ಪ್ರಜೆಯನ್ನು ಬೆಚ್ಚಿ ಬೀಳಿಸಿದೆ. ಎಲ್ಲೆಲ್ಲು ಅನ್ಯಾಯ, ಅಕ್ರಮ, ಮೋಸವೆ ತುಂಬಿ ಹೋಗಿದೆ. ಅಸಲಿಗೆ ಸಮಾಜಕ್ಕೆ ಬೇಕಾಗಿರುವುದದರು ಏನು? ಮನುಷ್ಯ-ಮನುಷ್ಯರ ನಡುವೆ ನಂಬಿಕೆ ಕಳೆದುಕೊಳ್ಳುತ್ತಿದ್ದಾನೆ. ನಮ್ಮ ಸಮಾಜ ಸಾಗುತ್ತಿರುವುದದಾರು ಎತ್ತ ಕಡೆಗೆ?? ಮಾನವನ ನೈತಿಕತೆ ಅಧೋಗತಿಗೆ ಇಳಿದೆದೆ.. ನಂಬಿಕೆ ಎಂಬ ಪದದ ಅರ್ಥವನ್ನು ಮರೆತಂತೆ ವರ್ತಿಸುತ್ತಿದ್ದೇವೆ...ಅದರಲ್ಲೂ ನಮ್ಮ ರಾಜಕೀಯ ಪಕ್ಷದ ನಾಯಕರಂತೂ....ಹೇಳುವುದೇ ಬೇಡ....ಗಾಳಿ ಬಂದಾಗ ತುರಿಕೋ ಎಂಬ ಗಾದೆಯನ್ನು ಅವಕಾಶ ಸಿಕ್ಕಾಗ ಸಿಕಷ್ಟು ಕೋಟಿ ದೋಚಿಕೊ ಎಂಬಂತಾಗಿದೆ....ನಾವು ಬದುಕುತ್ತಿರುವುದು ಸಮಾಜದಲ್ಲಿ "ನಮ್ಮ ಕುಟುಂಬ" ಎಂದಾಗ ಬರುವ ನಮದೆಂಬ ಭಾವನೆ, ಪ್ರೀತಿ, ಕಾಳಜಿ ನಮ್ಮ ಸಮಾಜ ಎನ್ನುವಾಗ ಏಕೆ ಇರುವುದಿಲ್ಲ..ಯಾವಾಗಲು ನಮಗೆ ಏನು ಸಿಗುತ್ತದೆ ಎಂದೂ ಯೋಚಿಸುವಾಗ ನಾವು ಬದುಕುತ್ತಿರುವ ಸಮಾಜಕ್ಕೆ ನಾವು ಮಾಡುತ್ತಿರುವುದಾದರೂ ಏನು??
ಗಬ್ಬು ನಾರುತ್ತಿರುವ ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ಇಂದು ಬೀದಿ ಬೀದಿಗಳಲ್ಲಿ ಹಾಸ್ಯಾಸ್ಪದವಾಗಿ ಮಾತನಾಡುತ್ತಿರುವುದನ್ನು ಎಷ್ಟೋ ಬರೀ ಕಂಡಿದ್ದೇನೆ..ಅದರಲ್ಲೂ ಇತ್ತೀಚಿಗೆ ಅದು ಹೆಚ್ಚಾಗಿಯೇ ಹೋಗಿದೆ. ನಾವು ನಮ್ಮನ್ನು ಆಳುತ್ತಿರುವ ನಾಯಕರನ್ನು ಜೋಕರ್ ಗಳೆಂದು ತಿಳಿದು ನಗುತ್ತಿದ್ದೆವೋ?? ಇಲ್ಲ ನಮ್ಮ ಕೈನಲ್ಲಿ ಏನು ಮಾಡಲಗದೆಂದು ಅಸಹಾಯಕತೆ ಇಂದ ನಗುತ್ತಿದ್ದೆವೋ ತಿಳಿಯದಾಗಿದೆ. ಸಮಾಜದಲ್ಲಿ ಬುದ್ದಿಜೀವಿಗಳೆನಿಸಿಕೊಂಡವರು ಮಾಡುತ್ತಿರುವುದಾದರೂ ಏನು?? ಎಲ್ಲವು ಸರಿ ಇದ್ದಾಗ ಕೊಂಕು ತೆಗೆಯುವ, ಏನು ಸರಿ ಇಲ್ಲದಿದ್ದಾಗ ಸುಮ್ಮನಿರುವ ಎಲ್ಲಿಗೆ ಹೋಗಿದ್ದಾರೆ?? ನಾವು ಚಿಕ್ಕವರಿದ್ದಾಗ ನಮ್ಮ ತಂದೆ-ತಾಯಿ, ಗುರುಗಳು, ನಮಗೆ ಗಾಂಧೀಜಿ, ನೆಹರು, ಬೋಸ್, ವಿಶ್ವೇಶ್ವರಯ್ಯ ಮುಂತಾದವರ ಜೀವನ-ಸಾದನೆಗಳ ಬಗ್ಗೆ ಹೇಳಿ ತಿಳಿಸುತ್ತಿದ್ದರು. ಆದರೆ ನಮ್ಮ ಮುಂದಿನ ಪೀಳಿಗೆಗೆ ಇಂಥಹ ಮಹಾನ್ ವ್ಯಕಿಗಳ ಬಗ್ಗೆ ತಿಳಿಸುವುದನ್ನು ಬಿಟ್ಟು ಹೀನ ರಾಜಕೀಯ ನಡೆಸುತ್ತಿರುವ, ನಮ್ಮ ರಾಜಕೀಯ ಮಹಾನ್ ನಾಯಕರೆಂದು ಕರೆಸಿಕೊಳ್ಳುವ (ಸ್ವ)ತಂತ್ರ ವ್ಯಕಿಗಳ ಬಗ್ಗೆ ತಿಳಿಸಿ ಕೊಡುವ ಕಾಲ ಬಂದರು ಬರಬಹುದು... ಗಾಂಧಿ, ನೆಹರು ಮುಂತಾದವರ ಬಗ್ಗೆ ಹೇಳುವಾಗ ಇರುವ ಹೆಮ್ಮೆ, ಪ್ರತಿಷ್ಠೆ, ಗೌರವ, ದೇಶ ಭಕ್ತಿ ಮತ್ತು ಇವರು ನಮ್ಮವರೆಂಬ ಭಾವನೆ ಇರುತ್ತದೆ. ಆದರೆ ನಮ್ಮ ಇಂದಿನ ನಾಯಕರ ಬಗ್ಗೆ ಹೇಳುವಾಗ ನಮ್ಮ ಬಗ್ಗೆ ನಮಗೆ ನಾಚಿಕೆ ಎನಿಸಿ, ಏನು ಮಾಡಲಾಗದ ಅಸಹಾಯಕ ಪರಿಸ್ಥಿತಿಯ ಬಗ್ಗೆ ವಿವರಿಸಬೇಕಗುತ್ತದೆ.
ಇಂದು ಸಹ ಅದೆಷ್ಟೋ ಸಂಖ್ಯೆಯಲ್ಲಿ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗದೆ ಬಾಲ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಆದರೆ ನಮ್ಮ (ಅ )ನಾಯಕರು ಪಕ್ಷದಿಂದ ಪಕ್ಷಕ್ಕೆ ಹಾರಲು ಕೋಟಿಗಟ್ಟಲೆ ಹಣ ತೆಗೆದುಕೊಳ್ಳುತ್ತಿದ್ದಾರೆ. ತಲೆ ಬುರುಡೆ ಸೀಳಿದರು ಎರಡಕ್ಷರವಿಲ್ಲದ, ನಾಗರಿಕತೆ ತಿಳಿಯದ, ಸಭೆ-ಸಮಾರಂಭಗಳಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕೆಂದು ತಿಳಿಯದ, ಬಟ್ಟೆ ಹರಿದುಕೊಂಡು ಪ್ರಾಣಿಗಳಂತೆ ಅಧಿಕಾರಕ್ಕಾಗಿ ಕೂಗಾಡುವ ಇವರು ನಮ್ಮ ನಾಯಕರು....ಇವರಿಗೆ ಬೇಕಾಗಿರುವುದು ದುಡ್ಡು ಸಂಪಾದನೆ ಮಾತ್ರ. BA, MA, Ph.D...ಶಿಕ್ಷಣ ಪಡೆದು 15-20 ಸಾವಿರ ಸಂಬಳ ಪಡೆಯುವವರ ಮಧ್ಯೆ ಶಿಕ್ಷಣದ ಮೂಲ ಧ್ಯೇಯವೇ ತಿಳಿಯದ ಇಂಥವರು, ಪೂರ್ವಿಕರು ಮಾಡಿಟ್ಟ ಆಸ್ತಿ ಖರ್ಚು ಮಾಡುತ್ತ ಚುನಾವಣೆಗಳಲ್ಲಿ ಗೆದ್ದು ಖರ್ಚು ಮಾಡಿದ ಹತ್ತರಷ್ಟು ಸಂಪಾದಿಸುವ ಇವರ ಮಧ್ಯೆ ವಿಧ್ಯೆ, ವಿದ್ಯಾವಂತರಿಗೆ ಇರುವ ಮೌಲ್ಯವಾದರೂ ಏನು?? ನಮ್ಮ ಯುವ ಸಮುದಾಯ ಮಾಡುತ್ತಿರುವುದಾದರೂ ಏನು? ತಿಂಗಳಿಗೊಮ್ಮೆ ಸಂಬಳ ಪಡೆದು ತಮ್ಮ ಮನೆ ಕಷ್ಟ-ಸುಖಗಳಿಗೆ ಸ್ಪಂದಿಸಿದರೆ ಸಾಕೆ? ಹೇಗೆ ಮಾಡುವ ನಮಗೂ ಬ್ರಷ್ಟ ರಾಜಕಾರಣಿಗಳಿಗೂ ಇರುವ ವ್ಯತ್ಯಾಸ ವಾದರೂ ಏನು? ನಮ್ಮ ನಾಯಕರ ಆಸ್ತಿಯ ಬೆಲೆ ಕೋಟಿಗಟ್ಟಲೆ ಇದೆ. ಆದರೆ ಅಂದು ಸ್ವಾತಂತ್ರಕ್ಕಾಗಿ ಹೋರಾಡಿದವರ bank balance ಎಷ್ಟಿತ್ತು? ಅವರ ಬಳಿ ಇದ್ದ ಕಾರುಗಳೆಷ್ಟು? ಮನೆಗಳೆಷ್ಟು? ಚಿನ್ನ ಎಷ್ಟು? ಇಂದು ಜನರಿಗಾಗಿ ಏನು ಮಾಡದೇ ಇರುವ ಒಬ್ಬ MLA, MP ಯ ಬಳಿ ಇರುವ ಆಸ್ತಿ ಎಷ್ಟು ?? ರಾಜಕೀಯ ರಂಗ ಇಂದು ಸಮಾಜಸೇವೆಗಲ್ಲ ಬದಲಿಗೆ ಸ್ವ ಸೇವೆಗಿದೆ..
ರಾಜ್ಯದ ಹಲವು ಕಡೆ ಸಮಸ್ಯೆಗಳು ತುಂಬಿ ತುಳುಕಾಡುತ್ತಿದೆ. ಹಾಸನದಲ್ಲಿ ಆಲೂಗೆಡ್ಡೆ ಬೆಳೆದ ರೈತನಿಗೆ ಸರಿಯಾದ ಬೆಲೆ ಸಿಗದೇ ಕಂಗಲಾಗಿದ್ದಾನೆ, ಬಳ್ಳಾರಿಯಲ್ಲಿ ಮಲೇರಿಯಾದಿಂದ ಜನ ಸಾಯುತ್ತಿದ್ದಾರೆ, ಹಾವೇರಿಯಲ್ಲಿ ಬೆಳೆ ಬೆಳೆದ ರೈತ ಆತ್ಮಹತ್ಯೆಗೆ ಶರಣಗುತ್ತಿದ್ದಾನೆ, ಮೊನ್ನೆ ಮೊನ್ನೆಯಷ್ಟೇ ಸಂಭವಿಸಿದ ಜಲ್ ಚಂಡಮಾರುತದಿಂದಾಗಿ ಅದೆಷ್ಟೋ ಜನರು ಮನೆ ಕಳೆದು ಕೊಂದು ಬೀದಿಗೆ ಬಿದ್ದಿದ್ದಾರೆ, ಇಂತಹ ವೇಳೆಯಲ್ಲಿ ಒಬ್ಬ ಜವಾಬ್ಧಾರಿಯುತ ಮುಖ್ಯಮಂತ್ರಿಯಾಗಿ ಭಾಗ್ಯಲಕ್ಷ್ಮಿ ಯೋಜನೆಯಡಿ ತಾಯಂದಿರಿಗೆ ಸೀರೆ ವಿತರಿಸಲು CM ಹೋಗಬೇಕೆ ?? ಹಾಗೆ ಹೋಗಲು ಮಾಡುವ ಖರ್ಚು-ವೆಚ್ಚ ಎಷ್ಟು... ಸೀರೆ ವಿತರಿಸಲು ಅಲ್ಲಿನ ಅಧಿಕಾರಿಗಳು ನಿರಾಕರಿಸುವರೆ? ಇಲ್ಲ ತಾಯಂದಿರು CM ಬಂದೆ ನೀಡಲಿ ಎಂದೂ ಹಠ ಹಿಡಿದಿದ್ದರೆಯೇ?? ಪ್ರಜ್ಞಾವಂತ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳದ ಹೊರತು ನಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ಸಿಗದು....ಇದು ನನ್ನ ವಯುಕ್ತಿಕ ನಿಲುವು......
good thought.
ReplyDelete