ಸ್ನೇಹಿತರೆ ನನ್ನದೊಂದು ಸಣ್ಣ ಪ್ರಶ್ನೆ...ಪ್ರತಿ ದಿನ ನಾವು TV, ದಿನಪತ್ರಿಕೆಗಳಲ್ಲಿ ಭ್ರಷ್ಟಾಚಾರ, ಲಂಚ, ಹಗರಣಗಳು, ಇತ್ಯಾದಿ ಸಮಸ್ಯೆಗಳ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಆರೋಪ ಮತ್ತು ಪ್ರತ್ಯಾರೋಪಗಳನ್ನು ಕೇಳಿ ರೋಸಿಹೊಗಿದ್ದೇವೆ...ಇದಕ್ಕೆ ಸಂಭಂದಿಸಿದಂತೆ ನನ್ನ ಒಂದು ಸಣ್ಣ ಪ್ರಶ್ನೆಯೆಂದರೆ ವ್ಯಕ್ತಿಯಿಂದ ವ್ಯವಸ್ಥೆ ಹಾಳೋ? ಅಥವಾ ವ್ಯವಸ್ಥೆಯಿಂದ ವ್ಯಕ್ತಿ ಹಾಳೋ? ಹಾಳಾಗಿರೋ ವ್ಯವಸ್ಥೆಯಿಂದ ವ್ಯಕ್ತಿ ಹಾಳಗುತ್ತಿದ್ದನೋ ಅಥವಾ ವ್ಯಕ್ಥಿಯಿಂದಲೇ ವ್ಯವಸ್ಥೆ ಹಾಳಗುತ್ತಿದೆಯೋ? ಅನೇಕ ಜನರು ಮಾತನಾಡುವಾಗ...ಮಾತಿನ ಮಧ್ಯೆ ಅಯ್ಯೋ ಬಿಡಿ ನಮ್ಮ ವ್ಯವಸ್ಥೆಯೇ ಹಾಗಿದೆ, ಇಲ್ಲಿ ಲಂಚ ಕೊಡದೆ ಏನು ಆಗುವುದಿಲ್ಲ ಮತ್ತು ಲಂಚ ಪಡೆಯದೇ ಏನು ಮಾಡುವುದಿಲ್ಲ ಇನ್ನು ಜನರು ಬಹಳಷ್ಟು ಮಂದಿ ಇದ್ದಾರೆ.....ಲಂಚ ತೆಗೆದುಕೊಳ್ಳುವವನು ಒಬ್ಬ ವ್ಯಕ್ತಿ ಆದರೆ ಆ ವ್ಯಕ್ತಿಯ ಸುತ್ತಲು ವ್ಯವಸ್ಥೆ ಸುತ್ತುತಿರುತ್ತದೆ....ಇಲ್ಲ ವ್ಯವಸ್ಥೆಯೇ ಭ್ರಷ್ಟ ಎಂದಾದರೆ ಅದರೊಳಗಿನ ಎಲ್ಲಾ ವ್ಯಕ್ತಿಗಳು ಭ್ರಷ್ಟರೇ ಆಗಿರುತ್ತಾರೆ...ಇಡೀ ಭ್ರಷ್ಟ ವ್ಯವಸ್ಥೆಯಲ್ಲಿ ಭ್ರಷ್ಟರಲ್ಲದ ವ್ಯಕ್ತಿಗಳು ಹೇಗೆ ತಮ್ಮ ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು ಬರುತ್ತಾರೆ ಎನ್ನುವುದು ಮುಖ್ಯವಾಗುತ್ತದೆ....ಒಂದು ಸಮಾಜದ ಅಭಿವೃದ್ದಿಗೆ ಅಥವಾ ಅಧಃಪತನಕ್ಕೆ ವ್ಯಕ್ತಿ ಮತ್ತು ವ್ಯವಸ್ಥೆ ಎರಡು ಕೂಡ ಜೊತೆ-ಜೊತೆಯಾಗಿ ಕಾರ್ಯ ನಿರ್ವಹಿಸುತ್ತವೆಯೇ?
ಇತ್ತೀಚಿಗೆ ನಡೆದ ಮತ್ತು ನೆಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಗೆ ಇದನ್ನು ಹೋಲಿಸಿ ನೋಡುವ ಒಂದು ಸಣ್ಣ ಪ್ರಯತ್ನ....ಭೂಹಗರಣಗಳಿಗೆ ಕುರಿತಂತೆ ಅನೇಕ ರಾಜಕೀಯ ವ್ಯಕ್ತಿಗಳು ತಮ್ಮ ಮೂಗಿನ ನೇರಕ್ಕೆ ಮಾತನಾಡಿದ್ದು ನಮೆಗೆಲ್ಲ ತಿಳಿದೇ ಇದೇ...ಯಡಿಯೂರಪ್ಪನವರು ಭೂಹಗರಣಗಳನ್ನು ಮಾಡಿದ ಮೊದಲ ವ್ಯಕ್ಥಿಯೇನಲ್ಲ ಅದಕ್ಕೆ ಹಿಂದೆ ಇದ್ದ JDS, Congress ಪಕ್ಷಗಳು ಕೂಡ ಇಂಥಹ ಹಗರಣಗಳನ್ನು ಮಾಡಿವೆ, ಯಾರೂ ಮಾಡದ್ದನ್ನ ನಾವೇನು ಮಾಡಿಲ್ಲ ಎಂಬುದು ಇವರ ದೂರುಗಳು...ಹಾಗಾದರೆ ಪ್ರಾಮಾಣಿಕವಾಗಿ ದುಡಿಯುವ ಪಕ್ಷ ಯಾವುದು?? ಪ್ರಾಮಾಣಿಕ ವ್ಯಕ್ತಿಗಳು ಯಾರು?? ಅಂದರೆ ಈ ಎಲ್ಲಾ ಹಗರಣಗಳ ಹಿಂದೆ ವ್ಯಕ್ತಿಗಳೇ ಇದ್ದರೂ ಸಹ ಇಡಿಯಾಗಿ ವ್ಯವಸ್ಥೆಯೇ ಭ್ರಷ್ಟ ಎನಿಸಿಬಿಡುತ್ತದೆ.....ಇಗ ನಾವು ವ್ಯವಸ್ಥೆಯನ್ನು ದೂರಬೇಕೋ ಅಥವಾ ವ್ಯವಸ್ಥೆಯನ್ನು ತಾನೆ ಸೃಷ್ಟಿಸಿ, ತಾನೆ ಅದನ್ನು ಹಾಳು ಮಾಡುವ ವ್ಯಕ್ಥಿಯನ್ನೋ?? ಇವೆರಡನ್ನೂ ಇಡಿಯಾಗಿ ನೋಡಿದರೆ ಕಾಣುವುದು ವ್ಯವಸ್ಥೆಯ ಹಿಂದೆ ಇರುವ ವ್ಯಕ್ತಿ ಮತ್ತು ವ್ಯಕ್ತಿಯ ಹಿಂದೆ ಇರುವ ವ್ಯವಸ್ಥೆ.... ವ್ಯವಸ್ಥೆಯನ್ನು ಸೃಷ್ಟಿಸಿದ ವ್ಯಕ್ತಿಯೇ ಅದನ್ನು ಹಾಳು ಮಾಡುತ್ತಿದ್ದಾನೆ... ನಮ್ಮ ಜನರು ಮಾತನಾಡುವಾಗ ಸಾಮಾನ್ಯವೇನೋ ಎಂಬಂತೆ ಹೇಳುವ ಅಭಿಪ್ರಾಯ...ನಮ್ಮ ದೇಶವನ್ನು ಹಾಳು ಮಾಡುತ್ತಿರುವವರು ರಾಜಕೀಯ ವ್ಯಕ್ತಿಗಳು ಎಂದು...ಎಲ್ಲಾ ತಪ್ಪುಗಳನ್ನು ರಾಜಕೀಯ ವ್ಯಕ್ತಿಗಳ ಮೇಲೆ ಹೇರುವುದು ಸರಿಯೇ?? ಇದರಲ್ಲಿ ನಮ್ಮ ಪಾಲೆಷ್ಟು ಅವರ ಭ್ರಷ್ಟಾಚಾರಕ್ಕೆ ನೇರವಾಗಿಯೋ ಅಥವ ಪರೋಕ್ಷವಾಗಿಯೋ ನಾವು ಸಹಕರಿಸುತ್ತಿಲ್ಲವೇ?? ನಾವು ಕೂಡ ಎಷ್ಟು ದುಡ್ಡು ಕೊಟ್ಟಾದರೂ ಸರಿ ನಮ್ಮ ಕೆಲಸವಾಗಬೇಕೆಂದು ಬಯಸುವುದಿಲ್ಲವೇ? ಅಂತೆಯೇ ಅವರು ಸಹ ತನಗೆ ಏನು ಸಿಗುತ್ತದೆಂದು ಯೋಚಿಸುವಾಗ ಕೇವಲ ಅವರನ್ನು ಮಾತ್ರ ಭ್ರಷ್ಟರೆಂದು ಕರೆದು ನಮ್ಮನ್ನು ಅವರಿಗೆ ಬಲಿಪಶುಗಳೆಂದು ಹೇಳಿಕೊಳ್ಳುವಲ್ಲಿ ಯಾವ ಅರ್ಥವೂ ಇಲ್ಲ..ಇಲ್ಲಿ ಎಲ್ಲರು ಬಯಸುವುದು ಸ್ವ-ಹಿತವನ್ನು ಮಾತ್ರ ಅಲ್ಲವೇ??? ಹಾಗಾದರೆ ಸಮಾಜದ ಹಿತವನ್ನು ಬಯಸುವವರು ಯಾರು?? ಇಂದು ಪ್ರಜಾಪ್ರಭುತ್ವ ಯಾವ ಹಂತ ತಲುಪಿದೆಯೆಂದರೆ ಇಲ್ಲಿ ಯಾರಿಗೂ ಆದರ್ಶಗಳು ಬೇಕಿಲ್ಲ... ಅವುಗಳಿಂದ ಹೊಟ್ಟೆ ತುಂಬುವುದಿಲ್ಲ, ಅದಕ್ಕಾಗಿ ತಮ್ಮ ಚಿಕ್ಕ ಚಿಕ್ಕ ಹೊಟ್ಟೆಗಳನ್ನು ತುಂಬಿಸಿಕೊಳ್ಳಲು ದೊಡ್ಡ ದೊಡ್ಡ ಕೆಲಸಗಳನ್ನು ಮಾಡುತ್ತಿರುತ್ತಾರೆ... ಇಂದು ಭ್ರಷ್ಟಾಚಾರದ ಬೇರುಗಳು ಎಲ್ಲೆಲ್ಲಿಯೂ ಹಬ್ಬಿ ಬಿಟ್ಟಿದೆ, ಮನೆಯಿಂದ ಹಿಡಿದು - ಸಮಾಜದವರೆಗೆ. ಹಾಗೆ ಕೇಳಿದವೆರೆಲ್ಲ ದೂರುವುದು ವ್ಯವಸ್ಥೆ ಇರುವುದೇ ಹಾಗೆ ಬಿಡಿ ಇನ್ನುತ್ತ ಅದೇ ವ್ಯವಸ್ಥೆಯಲ್ಲಿನ ವ್ಯಕ್ತಿಗಳನ್ನು ಬೆರಳು ಮಾಡಿ ತೋರಿಸುವ ನಾವು ಇಂಥಹ ಭ್ರಷ್ಟಾಚಾರಿ ವ್ಯವಸ್ಥೆಯನ್ನು ಬದಯಲಿಸುವುದಕ್ಕೆ ಎಂದಾದರೂ ಮನಸ್ಸು ಮಾಡಿದ್ದೆವೆಯೇ ?? ಹೋಗಲಿ ಅದರ ವಿರುದ್ದ ಮಾತನಾಡುವ ದೈರ್ಯವನ್ನಾದರೂ ಮಾಡಿದ್ದೆವೆಯೇ ?? ಮಾತನಾಡುವುದು ಕೇವಲ ಮನೆಯಲ್ಲಿ, ಸ್ನೇಹಿತರ ಮಧ್ಯೆ, ಗುಂಪು ಗುಂಪಾಗಿ ನಿಂತಾಗ ಕಾಲಹರಣದ ಚರ್ಚೆಯ ವಿಷಯಗಳಾಗಿ ಮಾತನಾಡುತ್ತ ಅಲ್ಲೇ ಮರೆತು ಬಿಡುತ್ತೇವೆ...ವ್ಯವಸ್ಥೆಯನ್ನು ಸೃಷ್ಟಿಸಿದ್ದು ವ್ಯಕ್ತಿ, ಅದು ಹಾಳಾಗುತ್ತಿರುವುದು ವ್ಯಕ್ತಿಯಿಂದ ಎಂದಾಗ ವ್ಯಕ್ಥಿಯಿಂದಲೇ ಅದನ್ನು ಬದಲಾಯಿಸುವುದು ಸಾಧ್ಯವಿಲ್ಲವೇ? ಇನ್ನು ಇತ್ತೀಚಿನ ಚುನಾವಣ ಪ್ರಕ್ರಿಯೆಗಳನ್ನು ನೋಡಿದಾಗ ನಮ್ಮ ಪ್ರಜಾಪ್ರಭುತ್ವ ಮತ್ತು ಮತದಾರನ ನೈತಿಕತೆಯ ಬಗ್ಗೆ ಅಸಹ್ಯ ಎನಿಸುವಷ್ಟು ಬೇಸರವಾಗುತ್ತದೆ....ಚುನಾವಣೆಯಲ್ಲಿ ಹಣ-ಹೆಂಡ ಹಂಚುವುದು ಇದೇ ಮೊದಲಲ್ಲ ಆದರೆ ಇತ್ತೀಚಿಗೆ ಹಣ-ಹೆಂಡದ ಜೊತೆಗೆ ಸೀರೆ, ಪಾತ್ರೆ, ಕೋಳಿ, ಅಕ್ಕಿ, ಮೂಗುಬೊಟ್ಟು, ಕೊನೆಗೆ ದೇವರ ವಿಗ್ರಹಗಳನ್ನೂ ಹಂಚುವುದು ಶುರುವಾಗಿಬಿಟ್ಟಿದೆ. ಇಂದು ವ್ಯವಸ್ಥಿತವಾಗಿ ಸಮಾಜದ ಅಭಿವೃದ್ದಿಗಾಗಿ ಮತ "ದಾನ" ವಾಗಿ ಉಳಿಯದೆ ಮತ "ಮಾರಾಟ"ವಾಗುತ್ತಿದೆ. ಹೇಗೆ ಮಾಡುವ ಬದಲಿಗೆ ಸಾರ್ವಜನಿಕವಾಗಿ ಮತಗಳನ್ನು ಹರಾಜು ಹಾಕುವುದೇ ಉತ್ತಮ ಎನಿಸುತ್ತದೆ. ಕೊನೆ ಪಕ್ಷ ಒಬ್ಬರನ್ನೊಬ್ಬರು ಒಳಗಿಂದೊಳಗೆ ದ್ವೇಷಿಸಿ, ಕೊಲೆ, ಅಪಹರಣಗಳಂತಹ ಕಾರ್ಯಗಳು ಸಂಬವಿಸುವುದು ಕಡಿಮೆಯಾಗುತ್ತದೆ. ನೇರವಾಗಿ ಇಷ್ಟು ದೊಡ್ದು ಕೊಟ್ಟು ನಾನು ಮತದಾರರನ್ನು ಖರಿದಿಸಿದ್ದೇವೆ ನೀವು ಬೇಕಾದರೆ ಅದಕ್ಕಿಂತ ಹೆಚ್ಚಿನ ದುಡ್ಡು ಕೊಟ್ಟು ಖರಿದಿಸಿ ಎಂದು ನೇರವಾಗಿ ಹೇಳಬಹುದು ಮತದಾರನು ಸಹ ಎಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆಯೋ ಆ ಪಕ್ಷಕ್ಕೆ ಮತ ಹಾಕ ಬಹುದು ಅಲ್ಲವೇ?? ನೋಡಿ ಎಲ್ಲಿಗೆ ಬಂದು ತಲುಪಿದೆ ನಮ್ಮ ವ್ಯವಸ್ಥೆ ಮತ್ತು ವ್ಯಕ್ತಿಗಳು....ನಮ್ಮ ಸಮಾಜದಲ್ಲಿ ನೈಜ ಪ್ರಜಾಪ್ರಭುತ್ವ ಅರಳುವುದದರು ಎಂದು ???
10 January 2011
21 December 2010
ಕಳೆಯುತಿಹುದು ಮತ್ತೊಂದು ವರ್ಷ....ಮಾಡಿದ ಸಾಧನೆ...???
ಇಲ್ಲಿ ನಾನು ನನ್ನ ಬಗ್ಗೆಯಾಗಲಿ ಅಥವಾ ಯಾವುದೇ ಒಬ್ಬ ವ್ಯಕ್ತಿಯ ಸಾಧನೆಯ ಬಗ್ಗೆ ಬರೆಯುತ್ತಿಲ್ಲ ಬದಲಿಗೆ ಕೊಳೆತು ಗಬ್ಬು ನಾರುತ್ತಿರುವ ನಮ್ಮ ರಾಜಕೀಯ ಮತ್ತು ಪಕ್ಷಗಳ ಸಾಧನೆಗಳ ಬಗ್ಗೆ ಬರೆಯುತ್ತಿದ್ದೇನೆ. ಇನ್ನೇನು ಕೆಲವು ದಿನಗಳು ಮಾತ್ರ ಉಳಿದಿದೆ 2010 ಕಳೆದು ಹೋದ ವರ್ಷಗಳ ಸಾಲಿಗೆ ಸೇರಿಬಿಡುತ್ತದೆ.... 2010 ರಲ್ಲಿ ಆಗಿಹೋದ ಮತ್ತು ಇನ್ನು ನೆಡುತ್ತಿರುವ ಘಟನೆಗಳು ನಮ್ಮ ಪ್ರಜಾಪ್ರಭುತ್ವವನ್ನು ತಲೆ ತಗ್ಗಿಸುವಂತೆ ಮಾಡಿದೆ... ಬಹುಷಃ ಈ ವರ್ಷದಲ್ಲಿ ಕಂಡುಬಂದಂತಹ ಹಗರಣಗಳು ಬೇರೆ ಇನ್ಯಾವ ವರ್ಷದಲ್ಲೂ ಕಂಡುಬಂದಿಲ್ಲ ಎಂದು ಹೇಳಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಗರಣಗಳು ಒಂದರ ಮೇಲೊಂದಂತೆ ಬೆಳಕಿಗೆ ಬರುತ್ತಿದ್ದರೆ, ಇತ್ತ ಸಾಮಾನ್ಯ ಮನುಷ್ಯ ತನ್ನ ಜೀವನ ಸಾಗಿಸಲು ಪರದಾಡುತ್ತಿದ್ದಾನೆ... ಒಂದೊಂದು ಹಗರಣಗಳಲ್ಲಿ ಭ್ರಷ್ಟರು ನುಂಗಿ ನೀರು ಕೂಡಿರುವ ಹಣವೆಷ್ಟು?? ಇತ್ತೀಚಿಗೆ ಬೆಳಕಿಗೆ ಬಂದ 2G ಸ್ಪೆಕ್ಟ್ರಂ ಹಗರಣದಿಂದಾಗಿ ಸರ್ಕಾರಕ್ಕೆ ಅದ ನಷ್ಟ ಬರೋಬ್ಬರಿ 1.76 ಲಕ್ಷ ಕೋಟಿ...ಅಬ್ಬ!! ಲಕ್ಷ-ಕೋಟಿ ಎರಡರ ಸಮಾಗಮ...ಇನ್ನು ಕಾಮನ್ ವೆಲ್ತ್ ನಿಂದಾದ ಹಗರಣದಿಂದಾಗಿ ಆದ ನಷ್ಟ 27.000 ಕೋಟಿ...ಇನ್ನು ಮುಂಬೈ ನ ಆದರ್ಶ ಹೌಸಿಂಗ್ ಸೊಸೈಟಿಯ ಹಗರಣ....ಕಾರ್ಗಿಲ್ ನಲ್ಲಿ ಮಾಡಿದ ವೀರಯೋಧರ ಕುಟುಂಬಗಳಿಗೆ ನೀಡಿದ ಭೂಮಿಯಲ್ಲಿಯು ನಮ್ಮ ರಾಜಕೀಯ ವ್ಯಕ್ತಿಗಳು, ಅವರ ಸಂಬಂಧಿಕರಿಗೆ ಹಂಚಿದ್ದಾರಂತೆ.....ಇನ್ನು ಬೆಳಕಿಗೆ ಬಾರದ ಹಗರಣಗಳೆಷ್ಟೋ???
ಇದರಲ್ಲಿ ನಮ್ಮ ಕರ್ನಾಟಕದ ಪಾಲೇನು ಕಡಿಮೆಯಿಲ್ಲ...BJP ಆಡಳಿತಕ್ಕೆ ಬಂದು ಎಡರುವರೆ ವರ್ಷ ಆಯಿತು...ಅವರು ಈ ಅವಧಿಯಲ್ಲಿ ಮಾಡಿದ್ದು...ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ಆಪರೇಷನ್ ಕಮಲ....ನಂತರ ತಮ್ಮ ತಮ್ಮ ಅತ್ಮಿಯರಾದವರಿಗೆ ಖಾತೆ ಹಂಚಿಕೆಯಲ್ಲಿ (ಅದೆಷ್ಟು ಭಾರಿ) ಕಾಲಹರಣ....ಅದಾದ ನಂತರ ರೆಡ್ಡಿ ಸಹೋದರರು ತಿರುಗಿ ಬಿದ್ದಾಗ ಅವರ ಸಮಾಧಾನ ಕಾರ್ಯ....ನಂತರ BJP ಸರ್ಕಾರವನ್ನು ಅಲುಗಾಡಿಸಿದ ರೆಸಾರ್ಟ್ ರಾಜಕೀಯ.....ಗಣಿ ಅವ್ಯವಹಾರ...ಭೂ ಹಗರಣ....ಒಂದೆರಡಲ್ಲ ನಮ್ಮ ರಾಜ್ಯ ಸರ್ಕಾರದ ಸಾಧನೆ !!! ಇವುಗಳ ಮಧ್ಯೆ ಸೀರೆ ಹಂಚುವುದರಲ್ಲಿ....ಚುನಾವಣ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಇವರು ಎಂದಾದರೂ ಸಾಮಾನ್ಯ ಜನರ ಕಷ್ಟಗಳೇನು...ಅದಕ್ಕೆ ಮಾಡಬೇಕಾದುದೇನು ಎಂದು ಯೋಚಿಸಿದ್ದಾರೆಯೇ ?? ಯೋಚಿಸಿದ್ದು ಭ್ರಷ್ಟರಾಗಿ ಎಷ್ಟು ಹಣ ಸಂಪಾದಿಸಬಹುದೆಂದು ಮತ್ತು ಮಾಡಿದ್ದು ದಿನ ನಿತ್ಯದ ಅಗತ್ಯ ವಸ್ತುಗಳ ಬೇರೆ ಏರಿಕೆ....ಈ ಎಲ್ಲಾ ಹಗರಣಗಳಿಂದ ಸರ್ಕಾರಕ್ಕೆ ಇಷ್ಟು ಕೋಟಿ ನಷ್ಟವಾಗಿದೆ ಎಂದು ಹೇಳುವಾಗ ನಾವು ತಿಳಯಬೇಕಾಗಿರುವುದು ನಷ್ಟವಾಗಿರುವುದು ಸರ್ಕಾರಕ್ಕೆ ಇನಿಸಿದರು ಅದರ ಪರಿಣಾಮ ಮಾತ್ರ ಆಗುತ್ತಿರುವುದು ಜನರ ಮೇಲೆ....ನಷ್ಟವಾಗಿರುವ ಇಷ್ಟೂ ಹಣವನ್ನು ಜನ ಸಾಮಾನ್ಯರ ಅಭಿವೃದ್ದಿಗಾಗಿ ಕರ್ಚು ಮಾಡಿದರೆ ನಮ್ಮ ದೇಶ ಬಡತನ ಮುಕ್ತ ರಾಷ್ಟ್ರವಾದರೂ ಆಗುತ್ತಿತ್ತೇನೋ..ಇಂದಿಗೂ ಸಹ ನಮ್ಮ ದೇಶದಲ್ಲಿ 37% ಜನ ಬಡತನ ರೇಖೆಗಿಂತ ಕೆಳಗಿದ್ದಾರೆ, ಒಂದು ಹೊತ್ತಿನ ಊಟಕ್ಕಾಗಿ ಪಡುತ್ತಿರುವ ಸಾಮಾನ್ಯರ ಕಷ್ಟಗಳನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ...ತಾವಾಯಿತು...ತಮ್ಮ ಕುರ್ಚಿಯಾಯಿತು ಎಂದಿರುವ ಇವರಿಗೆ ಕನಿಷ್ಠ ಮಾನವಿಯತೆಯು ಇಲ್ಲದಂತಾಗಿದೆ....ಹಗರಣಗಳಿಂದಾದ ನಷ್ಟದ ಹಣ ವಾಪಸ್ಸು ಬರುವುದೇ??? ಇಷ್ಟು ಹಣದಲ್ಲಿ ಯಾರ್ಯಾರು ಎಷ್ಟು ಎಷ್ಟು ಹಣ ನುಂಗಿದ್ದಾರೆ?? ಇವುಗಳ ತನಿಖೆ ಆಗುವಷ್ಟರಲ್ಲಿ ಜನರು ಎಲ್ಲವನ್ನು ಮರೆತುಬಿಟ್ಟಿರುತ್ತಾರೆ. ಇವುಗಲ್ಲನ್ನೇ ಅಸ್ತ್ರವಾಗಿಸಿಕೊಂಡು ಪರಸ್ಪರ ಕೆಸೆರೆರಚಾಟವನ್ನು ಪ್ರತಿನಿತ್ಯ ನೋಡುತ್ತಿದ್ದೇವೆ....ಯಾವಾಗಲು "ರಾಜೀನಾಮೆ ನೀಡಲಿ" ಎಂಬ ಮಾತು ಮಾತ್ರ ಕೇಳಿಬರುತ್ತದೆ....ಕೇವಲ ರಾಜೀನಾಮೆ ನೀಡಿದರೆ ಅವರು ಮಾಡಿರುವ ನಷ್ಟಕ್ಕೆ ಸುಮನಾದಂತೆ ಏನು??? ಯಾವ ಪಕ್ಷದವರು ಹೆಚ್ಚು ದುಡ್ಡು ಕೊಡುತ್ತಾರೋ ಆ ಕಡೆಗೆ ಹಾರುವ ಶಾಸಕರು..... ಕುರ್ಚಿ ಕಳೆದುಕೊಂಡಾಗ ಕಣ್ಣಲ್ಲಿ ನೀರು ಹಾಕುವ ಇವರು ನಾವು ಆರಿಸಿ ಕಳುಹಿಸಿರುವ ನಾಯಕರು....
ಇದರ ಜೊತೆಗೆ ಮತ್ತೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯ ಚುನಾವಣ ಭರಾಟೆ...ಮತ್ತೆ ಅದೇ ಕುರುಡು ಕಾಂಚನ ಆಟ, ಚುನಾವಣ ನೀತಿ ಸಂಹಿತಿಯನ್ನು ಪಾಲಿಸುವರು ಯಾರು?? ಸಾಮಾನ್ಯ ಜನರ ಬಡತನವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳುವ ಪಕ್ಷಗಳು....ನೋಟಿನ ಆಸೆಗೆ ಓಟನ್ನು ಮಾರಿಕೊಳ್ಳುವ ಕೆಲವು ಮತದಾರರು....ನಮ್ಮನ್ನಾಳುವ ನಾಯಕರನ್ನು ಆರಿಸುವಾಗ ಅವರನ್ನು ಅಳೆಯುವ ಮಾನದಂಡವಾದರೂ ಯಾವದು?? ಜಾತಿ?? ಅಂತಸ್ತು ?? ಇದುವರೆಗೆ ಅವರು ಮಾಡಿರುವ ಜನಸೇವೆಯೇ?? ಇಲ್ಲ ನಮಗೆ ಅವರು ಆ ಕ್ಷಣದಲ್ಲಿ ನೀಡುವ ನೋಟು?? ನಮ್ಮ ಮಾನ್ಯ ಮುಖ್ಯಮಂತ್ರಿಗಳು ಮೊನ್ನೆ ಚುನಾವಣ ಪ್ರಚಾರಕ್ಕಾಗಿ ಹೋಗಿದ್ದಾಗ ಪತ್ರಿಕಾ ಪ್ರತಿನಿಧಿಯೊಬ್ಬರು ಹಗರಣಗಳ ಬಗ್ಗೆ ಕೇಳಿದಾಗ ಅವರಿಂದ ಬಂದ ಉತ್ತರ...ನಮ್ಮ ಸಾಮಾನ್ಯ ಜನರು ಹಗರಣಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅವರಿಗೆ ಇವುಗಳ ಅರಿವೇ ಇಲ್ಲ...ಈ ಬಾರಿಯೂ BJP ಗೆದ್ದು ಬರಲಿದೆ ಎಂದು....ಇದೇ ಸಾಮಾನ್ಯ ಜನರ ಓಟು ಬೇಕಿತ್ತು ಅವರು ಮುಖ್ಯಮಂತ್ರಿಗಳಾಗಲು....ಸಂಮಿಶ್ರ ಸರ್ಕಾರದ ಅವಧಿಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಇದನ್ನು ನಾನು ಸಾಮಾನ್ಯ ಜನರ ಮುಂದೆ ಇಡುತ್ತೇನೆ ಎಂದು ಹೇಳುವಾಗ ಸಾಮಾನ್ಯ ಜನ ಬೇಕಿತ್ತು....ಅಷ್ಟೆ ಯಾಕೆ ಕುರ್ಚಿ ಹೋಗುತ್ತದೆ ಎನ್ನುವ ಸಂದರ್ಭ ಬಂದಾಗಲೆಲ್ಲ ಕಣ್ಣಲ್ಲಿ ನೀರು ಹಾಕಿದ್ದು ಇದೆ ಸಾಮಾನ್ಯ ಜನರ ಮುಂದೆ ತಾನೆ??? ಯಾರಿಗೆ ಏನಾದರು ಆಗಲಿ ನಾವು ಭ್ರಷ್ಟರಾಗಿಯೇ ಇರುತ್ತೇವೆ ...ಹಾಗೆಯೆ ಮುಂದುವರೆಯುತ್ತೇವೆ ಎನ್ನುವ ಇಂಥಹವರ ಮಧ್ಯೆ ಜನರ ಗೋಳು ಕೇಳುವರಾರು?? ಎಷ್ಟೆಲ್ಲಾ ನಡೆಯುತ್ತಿದ್ದರು ಸುಮ್ಮನೆ ನೋಡುತ್ತಾ....ಶಾಪ ಹಾಕುತ್ತ...ಅವರಾಡುವ ರಾಜಕೀಯ ದೊಂಬರಾಟ ನೋಡುತ್ತಾ ಏನು ಮಾಡಲಾಗದೆ ಕೈಚೆಲ್ಲಿ ಕುಳಿತಿರುವ ಭವ್ಯ ಭಾರತದ, ಗಂಧದ ಗುಡಿಯ ಚೆಂದದ ಪ್ರಜೆಗಳು ನಾವುಗಳು.......

11 November 2010
ಎತ್ತ ಸಾಗುತ್ತಿದೆ ನಮ್ಮ ಸಮಾಜ???
ಇಂದು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇಲ್ಲಿನ ಪ್ರತಿಯೊಬ್ಬ ಪ್ರಜೆಯನ್ನು ಬೆಚ್ಚಿ ಬೀಳಿಸಿದೆ. ಎಲ್ಲೆಲ್ಲು ಅನ್ಯಾಯ, ಅಕ್ರಮ, ಮೋಸವೆ ತುಂಬಿ ಹೋಗಿದೆ. ಅಸಲಿಗೆ ಸಮಾಜಕ್ಕೆ ಬೇಕಾಗಿರುವುದದರು ಏನು? ಮನುಷ್ಯ-ಮನುಷ್ಯರ ನಡುವೆ ನಂಬಿಕೆ ಕಳೆದುಕೊಳ್ಳುತ್ತಿದ್ದಾನೆ. ನಮ್ಮ ಸಮಾಜ ಸಾಗುತ್ತಿರುವುದದಾರು ಎತ್ತ ಕಡೆಗೆ?? ಮಾನವನ ನೈತಿಕತೆ ಅಧೋಗತಿಗೆ ಇಳಿದೆದೆ.. ನಂಬಿಕೆ ಎಂಬ ಪದದ ಅರ್ಥವನ್ನು ಮರೆತಂತೆ ವರ್ತಿಸುತ್ತಿದ್ದೇವೆ...ಅದರಲ್ಲೂ ನಮ್ಮ ರಾಜಕೀಯ ಪಕ್ಷದ ನಾಯಕರಂತೂ....ಹೇಳುವುದೇ ಬೇಡ....ಗಾಳಿ ಬಂದಾಗ ತುರಿಕೋ ಎಂಬ ಗಾದೆಯನ್ನು ಅವಕಾಶ ಸಿಕ್ಕಾಗ ಸಿಕಷ್ಟು ಕೋಟಿ ದೋಚಿಕೊ ಎಂಬಂತಾಗಿದೆ....ನಾವು ಬದುಕುತ್ತಿರುವುದು ಸಮಾಜದಲ್ಲಿ "ನಮ್ಮ ಕುಟುಂಬ" ಎಂದಾಗ ಬರುವ ನಮದೆಂಬ ಭಾವನೆ, ಪ್ರೀತಿ, ಕಾಳಜಿ ನಮ್ಮ ಸಮಾಜ ಎನ್ನುವಾಗ ಏಕೆ ಇರುವುದಿಲ್ಲ..ಯಾವಾಗಲು ನಮಗೆ ಏನು ಸಿಗುತ್ತದೆ ಎಂದೂ ಯೋಚಿಸುವಾಗ ನಾವು ಬದುಕುತ್ತಿರುವ ಸಮಾಜಕ್ಕೆ ನಾವು ಮಾಡುತ್ತಿರುವುದಾದರೂ ಏನು??
ಗಬ್ಬು ನಾರುತ್ತಿರುವ ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ಇಂದು ಬೀದಿ ಬೀದಿಗಳಲ್ಲಿ ಹಾಸ್ಯಾಸ್ಪದವಾಗಿ ಮಾತನಾಡುತ್ತಿರುವುದನ್ನು ಎಷ್ಟೋ ಬರೀ ಕಂಡಿದ್ದೇನೆ..ಅದರಲ್ಲೂ ಇತ್ತೀಚಿಗೆ ಅದು ಹೆಚ್ಚಾಗಿಯೇ ಹೋಗಿದೆ. ನಾವು ನಮ್ಮನ್ನು ಆಳುತ್ತಿರುವ ನಾಯಕರನ್ನು ಜೋಕರ್ ಗಳೆಂದು ತಿಳಿದು ನಗುತ್ತಿದ್ದೆವೋ?? ಇಲ್ಲ ನಮ್ಮ ಕೈನಲ್ಲಿ ಏನು ಮಾಡಲಗದೆಂದು ಅಸಹಾಯಕತೆ ಇಂದ ನಗುತ್ತಿದ್ದೆವೋ ತಿಳಿಯದಾಗಿದೆ. ಸಮಾಜದಲ್ಲಿ ಬುದ್ದಿಜೀವಿಗಳೆನಿಸಿಕೊಂಡವರು ಮಾಡುತ್ತಿರುವುದಾದರೂ ಏನು?? ಎಲ್ಲವು ಸರಿ ಇದ್ದಾಗ ಕೊಂಕು ತೆಗೆಯುವ, ಏನು ಸರಿ ಇಲ್ಲದಿದ್ದಾಗ ಸುಮ್ಮನಿರುವ ಎಲ್ಲಿಗೆ ಹೋಗಿದ್ದಾರೆ?? ನಾವು ಚಿಕ್ಕವರಿದ್ದಾಗ ನಮ್ಮ ತಂದೆ-ತಾಯಿ, ಗುರುಗಳು, ನಮಗೆ ಗಾಂಧೀಜಿ, ನೆಹರು, ಬೋಸ್, ವಿಶ್ವೇಶ್ವರಯ್ಯ ಮುಂತಾದವರ ಜೀವನ-ಸಾದನೆಗಳ ಬಗ್ಗೆ ಹೇಳಿ ತಿಳಿಸುತ್ತಿದ್ದರು. ಆದರೆ ನಮ್ಮ ಮುಂದಿನ ಪೀಳಿಗೆಗೆ ಇಂಥಹ ಮಹಾನ್ ವ್ಯಕಿಗಳ ಬಗ್ಗೆ ತಿಳಿಸುವುದನ್ನು ಬಿಟ್ಟು ಹೀನ ರಾಜಕೀಯ ನಡೆಸುತ್ತಿರುವ, ನಮ್ಮ ರಾಜಕೀಯ ಮಹಾನ್ ನಾಯಕರೆಂದು ಕರೆಸಿಕೊಳ್ಳುವ (ಸ್ವ)ತಂತ್ರ ವ್ಯಕಿಗಳ ಬಗ್ಗೆ ತಿಳಿಸಿ ಕೊಡುವ ಕಾಲ ಬಂದರು ಬರಬಹುದು... ಗಾಂಧಿ, ನೆಹರು ಮುಂತಾದವರ ಬಗ್ಗೆ ಹೇಳುವಾಗ ಇರುವ ಹೆಮ್ಮೆ, ಪ್ರತಿಷ್ಠೆ, ಗೌರವ, ದೇಶ ಭಕ್ತಿ ಮತ್ತು ಇವರು ನಮ್ಮವರೆಂಬ ಭಾವನೆ ಇರುತ್ತದೆ. ಆದರೆ ನಮ್ಮ ಇಂದಿನ ನಾಯಕರ ಬಗ್ಗೆ ಹೇಳುವಾಗ ನಮ್ಮ ಬಗ್ಗೆ ನಮಗೆ ನಾಚಿಕೆ ಎನಿಸಿ, ಏನು ಮಾಡಲಾಗದ ಅಸಹಾಯಕ ಪರಿಸ್ಥಿತಿಯ ಬಗ್ಗೆ ವಿವರಿಸಬೇಕಗುತ್ತದೆ.
ಇಂದು ಸಹ ಅದೆಷ್ಟೋ ಸಂಖ್ಯೆಯಲ್ಲಿ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಾಗದೆ ಬಾಲ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಆದರೆ ನಮ್ಮ (ಅ )ನಾಯಕರು ಪಕ್ಷದಿಂದ ಪಕ್ಷಕ್ಕೆ ಹಾರಲು ಕೋಟಿಗಟ್ಟಲೆ ಹಣ ತೆಗೆದುಕೊಳ್ಳುತ್ತಿದ್ದಾರೆ. ತಲೆ ಬುರುಡೆ ಸೀಳಿದರು ಎರಡಕ್ಷರವಿಲ್ಲದ, ನಾಗರಿಕತೆ ತಿಳಿಯದ, ಸಭೆ-ಸಮಾರಂಭಗಳಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕೆಂದು ತಿಳಿಯದ, ಬಟ್ಟೆ ಹರಿದುಕೊಂಡು ಪ್ರಾಣಿಗಳಂತೆ ಅಧಿಕಾರಕ್ಕಾಗಿ ಕೂಗಾಡುವ ಇವರು ನಮ್ಮ ನಾಯಕರು....ಇವರಿಗೆ ಬೇಕಾಗಿರುವುದು ದುಡ್ಡು ಸಂಪಾದನೆ ಮಾತ್ರ. BA, MA, Ph.D...ಶಿಕ್ಷಣ ಪಡೆದು 15-20 ಸಾವಿರ ಸಂಬಳ ಪಡೆಯುವವರ ಮಧ್ಯೆ ಶಿಕ್ಷಣದ ಮೂಲ ಧ್ಯೇಯವೇ ತಿಳಿಯದ ಇಂಥವರು, ಪೂರ್ವಿಕರು ಮಾಡಿಟ್ಟ ಆಸ್ತಿ ಖರ್ಚು ಮಾಡುತ್ತ ಚುನಾವಣೆಗಳಲ್ಲಿ ಗೆದ್ದು ಖರ್ಚು ಮಾಡಿದ ಹತ್ತರಷ್ಟು ಸಂಪಾದಿಸುವ ಇವರ ಮಧ್ಯೆ ವಿಧ್ಯೆ, ವಿದ್ಯಾವಂತರಿಗೆ ಇರುವ ಮೌಲ್ಯವಾದರೂ ಏನು?? ನಮ್ಮ ಯುವ ಸಮುದಾಯ ಮಾಡುತ್ತಿರುವುದಾದರೂ ಏನು? ತಿಂಗಳಿಗೊಮ್ಮೆ ಸಂಬಳ ಪಡೆದು ತಮ್ಮ ಮನೆ ಕಷ್ಟ-ಸುಖಗಳಿಗೆ ಸ್ಪಂದಿಸಿದರೆ ಸಾಕೆ? ಹೇಗೆ ಮಾಡುವ ನಮಗೂ ಬ್ರಷ್ಟ ರಾಜಕಾರಣಿಗಳಿಗೂ ಇರುವ ವ್ಯತ್ಯಾಸ ವಾದರೂ ಏನು? ನಮ್ಮ ನಾಯಕರ ಆಸ್ತಿಯ ಬೆಲೆ ಕೋಟಿಗಟ್ಟಲೆ ಇದೆ. ಆದರೆ ಅಂದು ಸ್ವಾತಂತ್ರಕ್ಕಾಗಿ ಹೋರಾಡಿದವರ bank balance ಎಷ್ಟಿತ್ತು? ಅವರ ಬಳಿ ಇದ್ದ ಕಾರುಗಳೆಷ್ಟು? ಮನೆಗಳೆಷ್ಟು? ಚಿನ್ನ ಎಷ್ಟು? ಇಂದು ಜನರಿಗಾಗಿ ಏನು ಮಾಡದೇ ಇರುವ ಒಬ್ಬ MLA, MP ಯ ಬಳಿ ಇರುವ ಆಸ್ತಿ ಎಷ್ಟು ?? ರಾಜಕೀಯ ರಂಗ ಇಂದು ಸಮಾಜಸೇವೆಗಲ್ಲ ಬದಲಿಗೆ ಸ್ವ ಸೇವೆಗಿದೆ..
ರಾಜ್ಯದ ಹಲವು ಕಡೆ ಸಮಸ್ಯೆಗಳು ತುಂಬಿ ತುಳುಕಾಡುತ್ತಿದೆ. ಹಾಸನದಲ್ಲಿ ಆಲೂಗೆಡ್ಡೆ ಬೆಳೆದ ರೈತನಿಗೆ ಸರಿಯಾದ ಬೆಲೆ ಸಿಗದೇ ಕಂಗಲಾಗಿದ್ದಾನೆ, ಬಳ್ಳಾರಿಯಲ್ಲಿ ಮಲೇರಿಯಾದಿಂದ ಜನ ಸಾಯುತ್ತಿದ್ದಾರೆ, ಹಾವೇರಿಯಲ್ಲಿ ಬೆಳೆ ಬೆಳೆದ ರೈತ ಆತ್ಮಹತ್ಯೆಗೆ ಶರಣಗುತ್ತಿದ್ದಾನೆ, ಮೊನ್ನೆ ಮೊನ್ನೆಯಷ್ಟೇ ಸಂಭವಿಸಿದ ಜಲ್ ಚಂಡಮಾರುತದಿಂದಾಗಿ ಅದೆಷ್ಟೋ ಜನರು ಮನೆ ಕಳೆದು ಕೊಂದು ಬೀದಿಗೆ ಬಿದ್ದಿದ್ದಾರೆ, ಇಂತಹ ವೇಳೆಯಲ್ಲಿ ಒಬ್ಬ ಜವಾಬ್ಧಾರಿಯುತ ಮುಖ್ಯಮಂತ್ರಿಯಾಗಿ ಭಾಗ್ಯಲಕ್ಷ್ಮಿ ಯೋಜನೆಯಡಿ ತಾಯಂದಿರಿಗೆ ಸೀರೆ ವಿತರಿಸಲು CM ಹೋಗಬೇಕೆ ?? ಹಾಗೆ ಹೋಗಲು ಮಾಡುವ ಖರ್ಚು-ವೆಚ್ಚ ಎಷ್ಟು... ಸೀರೆ ವಿತರಿಸಲು ಅಲ್ಲಿನ ಅಧಿಕಾರಿಗಳು ನಿರಾಕರಿಸುವರೆ? ಇಲ್ಲ ತಾಯಂದಿರು CM ಬಂದೆ ನೀಡಲಿ ಎಂದೂ ಹಠ ಹಿಡಿದಿದ್ದರೆಯೇ?? ಪ್ರಜ್ಞಾವಂತ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳದ ಹೊರತು ನಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ಸಿಗದು....ಇದು ನನ್ನ ವಯುಕ್ತಿಕ ನಿಲುವು......

08 November 2010
ಭಾವನೆಗಳ ಸುಳಿಯಲ್ಲಿ ನಾನು...!!!
ಮಾನವ ಭಾವನಾಜೀವಿ ಎಂದು ಎಲ್ಲರು ಹೇಳುವುದು ಸರ್ವೇ ಸಾಮಾನ್ಯ ಮಾತು..ಅದರಲ್ಲಿಯೂ ನನಗೆ ಅತೀ ಭಾವುಕತೆ ಎಂಬುದು ಆ ದೇವರು ನನಗೆ ಕೊಟ್ಟಿರುವ ವರವೋ ಅಥವಾ ಶಾಪವೋ ನನಗೆ ತಿಳಿದಿಲ್ಲ...ನನಗೆ ಅತಿ ಸಂತೋಷವಾದರೂ ಇಲ್ಲ ಆತಿ ದುಃಖವಾದರೂ ನನ್ನ ಮೊದಲ ಪ್ರತಿಕ್ರಿಯೆ ಕಣ್ಣು ಮುಚ್ಚಿ ಅತ್ತುಬಿಡುವುದು.....ಆಫೀಸ್ ಕೆಲಸದ ನಿಮಿತ್ತ ಕೊಡಗಿಗೆ ಹೋಗಿ ಅಲ್ಲಿ ಕೆಲ ದಿನಗಳನ್ನು ಕಳೆದ ನಾನು ಅಲ್ಲಿ ನಡೆದ ಎರಡು ಘಟನೆಗಳನ್ನು ಇಲ್ಲಿ ಹೇಳುತ್ತಿದ್ದೇನೆ....
ನಾನು ಮತ್ತು ನನ್ನ ಸಹೋದ್ಯೋಗಿ ಇಬ್ಬರು ಕೊಡಗಿನಲ್ಲಿ ಉಳಿದುಕೊಳ್ಳಲು ಹೋಟೆಲ್ ರೂಂ ಬೇಕೆಂದು ಹೇಳಿದಾಗ ನನ್ನ ಪರಿಚಯವೇ ಇಲ್ಲದ, ನನ್ನ ಮುಖವನ್ನೇ ನೋಡದ ವ್ಯಕ್ತಿಯೊಬ್ಬರು ನಮಗೆ ಕುಶಾಲನಗರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟರು...ಅವರ ಹೆಸರು ಮಂಜೇಶ್, ಅವರು ಹುಟ್ಟಿ ಬೆಳೆದಿದ್ದೆಲ್ಲ ಕುಶಾಲನಗರದಲ್ಲಿಯೇ....ನಾನು ಅತಿ ಹೆಚ್ಚು ಗೌರವಿಸುವ ಶಿಕ್ಷಕ ವೃತ್ತಿ ಮಾಡುತ್ತಿದ್ದಾರೆ. 24/10/10 ಭಾನುವಾರ ಬೆಂಗಳೂರಿನಿಂದ ಹೋರಾಟ ನಮಗೆ ನಿರಂತರ ಸಂಪರ್ಕದಲ್ಲಿದ್ದು ನಾನು ಹೋಟೆಲ್ ತಲುಪುವವರೆಗೂ ಫೋನ್ ಮಾಡುತ್ತ ನಾವೆಲ್ಲಿದ್ದೇವೆ..ಅಲ್ಲಿಂದ ಯಾವ ಮಾರ್ಗವಾಗಿ, ಹೇಗೆ ಬರಬೇಕೆಂದು ತಿಳಿಸುತ್ತಿದ್ದರು...ಅಂತೆಯೇ ನಾವು ಹೋಟೆಲ್ ತಲುಪಿದ ಮೇಲೆ ನಮ್ಮ ಟೂರ್ ಪ್ಲಾನ್ ಏನೆಂದು ಕೇಳಿ ಪ್ರತಿದಿನ ಬೆಳಿಗ್ಗೆ ಫೋನ್ ಮಾಡಿ ನಾವು ತಲುಪಬೇಕಾದ ಮಾರ್ಗಕ್ಕೆ ಹೇಗೆ ತಲುಪಿದರೆ ಸೂಕ್ತ ಎಂದು ತಿಳಿಸುತ್ತಿದ್ದರು...ನಾನು ಬಂದು ಆರು ದಿನಗಳು ಕಳೆದರು ಕೆಲಸ ಒತ್ತಡದಲ್ಲಿ ಅವರನ್ನು ಭೇಟಿಮಾಡಲು ನನಗೆ ಸಮಯ ಸಿಕ್ಕಿರಲಿಲ್ಲ...ಆದರೆ ಶುಕ್ರವಾರ 29/10/10 ರಂದು ಮಂಜೇಶ ಅವರು ಬೆಳಿಗ್ಗೆ ಸುಮಾರು 10.30 ಕ್ಕೆ ಫೋನ್ ಮಾಡಿ ತಮ್ಮ ಹೆಂಡತಿಯನ್ನು ಹೆರಿಗೆಗಾಗಿ ಗೋಣಿಕೊಪ್ಪಲಿನ ಸರ್ಕಾರೀ ಆಸ್ಪತ್ರೆಗೆ ಸೇರಿಸಿರುವುದಾಗಿ ಎಂದು ಹೇಳಿದರು ನಾನು ಕೂಡ ಅದೇ ಸ್ಥಳಕ್ಕೆ ಹೋಗುತ್ತಿದ್ದೆ...ನಾನು ಅಲ್ಲಿಯೇ ನಿಮ್ಮನ್ನು ಬಂದು ಕಾಣುವುದಾಗಿ ಅವರಿಗೆ ತಿಳಿಸಿದೆ ಅದಕ್ಕೆ ಅವರು ನಿಮ್ಮ ಕೆಲಸ ಮುಗಿಸಿ ಬನ್ನಿ ಎಂದರು..ಸರಿ ಎಂದು ಸುಮಾರು 2.30 ಕ್ಕೆ ನನ್ನ ಕೆಲಸವನೆಲ್ಲ ಮುಗಿಸಿ ಅವರನ್ನು ಕಾಣಲು ಹೋದೆ..ಆಸ್ಪತ್ರೆ ಪ್ರವೇಶಿಸಿದ ನನಗೆ ಎದುರಿಗೆ ಕಂಡೆ ಅವರನ್ನು ಗುರುತಿಸಲು ಕಷ್ಟ ಆಗಲಿಲ್ಲ ಕಾರಣ ಒಂದು ಅವರ ದ್ವನಿ ಪರಿಚಯ ಮತ್ತೊಂದು ಅವರ ಮುಖದ ಮೇಲಿದ್ದ ಆತಂಕ ಮತ್ತು ಕಾತರತೆ...ನಾನು ತಂದಿದ್ದ ಹಣ್ಣಿನ ಚೀಲವನ್ನು ಅವರ ಕೈಗೆ ಕೊಟ್ಟು ನಿಮ್ಮ ಹೆಂಡತಿ ಎಲ್ಲಿ ಎಂದೆ.. ಈಗ ತಾನೆ ನೋವು ಕಾಣಿಸಿಕೊಂಡಿತು ಒಳಗೆ ಇದ್ದರೆ ಎಂದು ಹೇಳಿ ಇಬ್ಬರು ಒಳಗೆ ಹೋದೆವು..ಅಲ್ಲಿ ಮಂಜೇಶ್ ಅವರ ಅತ್ತೆ ಸ್ವಲ್ಪ ಗಾಬರಿಯಿಂದ ತಮ್ಮ ಮಗಳನ್ನು ಓಡಾಡಿಸುತ್ತಿದ್ದರು.. ನನ್ನ ಪರಿಚಯವಾದ ಮೇಲೆ ಅವರನ್ನು ನಾನೇ ಕೈ ಹಿಡಿದು ಓಡಾಡಿಸುತ್ತಿದ್ದೆ... ಆಕೆ ಅತಿಯಾದ ನೋವಿನಿಂದ ನರಳುವುದನ್ನು ಕಂಡು ನಾನು ಗಾಬರಿಯಾದೆ...ನಾನು ಹೆಣ್ಣಲ್ಲವೇ....??? ಕೊನೆಗೆ ನಡೆಯಲು ಆಗದೇ ಇದ್ದಾಗ ನುರ್ಸೆ ಬಂದು labour ward ಗೆ ಕರೆದು ಕೊಂದು ಹೋದರು.. ಅಲ್ಲಿದ್ದ ಮಂಜೇಶ್, ಅವರ ಅತ್ತೆ ಮತ್ತು ನಾನು..ಎಲ್ಲರ ಮುಖದಲ್ಲಿಯೂ ಗಾಬರಿ.....ಇತ್ತಿಚೆಗೆಷ್ಟೆ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿ ಓದಿ ಅಲ್ಲಿ ಹೇಳುವ ಅಜ್ಜಿಯ ಮಾತುಗಳಿಂದ ಪ್ರಭಾವಿಥಳಗಿದ್ದ ನಾನು ಅಂದಿನಿಂದ ದೇವರ ಮುಂದೆ ನಿಂತು ನನಗೆ ಅದು ಕೊಡು...ಇದು ಕೊಡು ಎಂದು ಕೇಳುವುದನ್ನು ಬಿಟ್ಟುಬಿಟ್ಟಿದ್ದೆ. ಆದರೆ ಮಂಜೇಶ ಅವರ ಪತ್ನಿ ಅನುಭವಿಸುತ್ತಿದ್ದ ನೋವನ್ನು ನೋಡಿ...ಅಳು ಬರುವಂತಾಗಿ ದೇವರನ್ನು ಪ್ರಾರ್ಥಿಸಿದೆ. ನನ್ನನ್ನು ನೋಡಿ ಮಂಜೇಶ್ ನೀವು ಮೊದಲ ಬಾರಿಗೆ ಇದನೆಲ್ಲ ನೋಡುತ್ತಿದ್ದೀರ ಎಂದು ಕೇಳಿದರೂ..ನಾನು ಹೌದು ನಾನು ಚಿಕ್ಕವಳಿದ್ದಾಗಲೇ ನನ್ನ ಅಣ್ಣಂದಿರು ಮತ್ತು ಅಕ್ಕನಿಗೆ ಮದುವೆಯಾಗಿದ್ದು ಇಂಥಹ ಸಂದರ್ಭ ಎದುರಿಸುತ್ತಿರುವುದು ಇದೆ ಮೊದಲಿಗೆ ಎಂದೆ...ಅದೇನೇ ಇದ್ದರು ನನ್ನ ಬಗ್ಗೆ ಹೆಚ್ಚೇನೂ ತಿಳಿಯದೆ ಇದ್ದರು ಕೇವಲ ಕೆಲ ಕ್ಷಣಗಳ ಪರಿಚಯದ ಮೂಲಕ ನಾನು ಕೂಡ ಅವರ ಮನೆಯವರಲ್ಲಿ ಒಬ್ಬಳಾಗಿಬಿಟ್ಟೆ ಎನಿಸಿತು...ಹೆರಿಗೆ ಅದ ನಂತರ ಮಗುವನ್ನು ಅವರ ತಾಯಿಯ ಕೈಗೆ ಕೊಟ್ಟರು. ನನಗೆ ಅತೀ ಆಶ್ಚರ್ಯ ಎನಿಸಿದ್ದು ಮಗುವನ್ನು ನೋಡಿದ ಕೂಡಲೇ ಮಂಜೇಶ್ ಅದು ಗಂಡು ಮಗುವೋ ಅಥವ ಹೆಣ್ಣೋ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಅತೀ ಭಾವುಕರಾಗಿ ಮಗುವನ್ನು ನೋಡುತ್ತಿದ್ದ ಪರಿ...ಆದರೆ ಅವರ ಅತ್ತೆ ಮಾತ್ರ ಮಗು ಕೈಸೇರಿದ ಕೂಡಲೇ ಅಲ್ಲಿಯೇ ಕೆಳಗೆ ಕೂತು ಅವಸವಸರವಾಗಿ ನೋಡಿ ಮಗು ಗಂಡು ಎಂದು ಬಿಟ್ಟರು ಆದರೆ ಸ್ವಲ್ಪ ಸಮಯದ ನಂತರ ತಿಳಿದುದು ಅದು ಹೆಣ್ಣು ಮಗುವೆಂದು ಆದರೆ ಹೆಣ್ಣು ಮಗು ಎಂದಾಕ್ಷಣ ಯಾವುದೇ ನಿರಾಸೆ ಭಾವ ತೋರದೆ ತಂದೆಯಾದನೆಂಬ ತೃಪ್ತ ಭಾವ ಮಂಜೇಶ ಅವರ ಮುಖದಲ್ಲಿ ಎದ್ದು ಕಾಣಿಸುತ್ತಿತ್ತು...ಅಲ್ಲಿಂದ ಹೊರಬಂದ ನಾನು ಬಸ್ಸಿನಲ್ಲಿ ಕೂತು ಯೋಚಿಸುತ್ತಿದ್ದೆ...ಯಾರಿಗಾದರೂ ಸಹಾಯ ಮಾಡಬೇಕಾದ ಸಂದರ್ಭ ಬಂದಾಗ ಅನೇಕರು ಅಯ್ಯೋ ನನಗೆ ಆರೋಗ್ಯ ಸರಿ ಇಲ್ಲ...ನಾನು ಕೂಡ ಊರಿನಲ್ಲಿ ಇರುವುದಿಲ್ಲ...ಹೇಗೆ ಅನೇಕ ಕಾರಣ ಕೊಡುವ ಜನರು ನಮ್ಮಲ್ಲಿ ಅನೇಕರಿದ್ದಾರೆ...ಆದರೆ ತಮ್ಮ ಹೆಂಡತಿಯನ್ನು ಹೆರಿಗೆಗೆ ಸೇರಿಸಿದ ನಂತರವೂ ನನಗೆ ಫೋನ್ ಮಾಡಿ ನಮ್ಮನ್ನು ವಿಚಾರಿಸುತ್ತಿದ್ದ ಜೊತೆಗೆ ನನ್ನು ಆಸ್ಪತ್ರೆ ಯಿಂದ ಹೊರ ಬಂದ ಮೇಲೂ ಅಲ್ಲಿನ ಆತಂಕದ ವಾತಾವರಣದಲ್ಲಿಯೂ ನನ್ನ ಮತ್ತು ನನಗೆ ಬಸ್ ಸಿಕ್ಕಿತ...ಇಲ್ಲವೆಂದು....ಕೇಳಿ ತಿಳಿಯುತ್ತಿದ್ದ ಅವರ ಮೇಲೆ ನನಗೇನೋ ಅತ್ಹ್ಮಿಯ ಭಾವ ಮೂಡಿತ್ತು...ನನಗೆ ಪ್ರತಿ ಹೆಜ್ಜೆಯಲ್ಲಿಯೂ ಸಹಾಯ ಮಾಡಿದ ಮಂಜೇಶ್ ಅಂಥವರು ಸಮಾಜಕ್ಕೆ ಅಗತ್ಯವಾಗಿ ಬೇಕು...ಹೇಗೆ ಅವರ ಸಹಾಯ ಮನೋಭಾವ ಮುಂದುವರೆಯಲೆಂದು ನನ್ನ ಹಾರೈಕೆ ಮತ್ತು ಅವರ ಈ ದೊಡ್ಡಗುಣಕ್ಕೆ ನನ್ನ ಸಣ್ಣ ಕೃತಜ್ಞತೆ....
ಇದರ ನಂತರ ನನ್ನನ್ನು ಭಾವುಕಳಗುವಂತೆ ಮಾಡಿದ ಇನ್ನೊಂದು ಘಟನೆ..ಪ್ರತಿ ದಿನ ನಾನು ಉಟಕ್ಕೆ ಹೋಗುತ್ತಿದ್ದ ಹೋಟೆಲ್ ನಲ್ಲಿ cleaning ಕೆಲಸ ಮಾಡುತ್ತಿದ್ದ ಸುಮಾರು 75-80 ವರ್ಷದ ವೃದ್ದ... ಅವರನ್ನು ನೋಡಿದ ವೇಳೆ ಊಟ ಮಾಡಲು ನನ್ನಿಂದ ಆಗುತ್ತಿರಲಿಲ್ಲ..ನಾನು ಬಹಳಷ್ಟು ಹೋಟೆಲ್ ಗಳಲ್ಲಿ ಇದನ್ನು ನೋಡಿದ್ದೇನೆ. ವಯಸ್ಸಾದ ಹಿರಿಯರು ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ನೋಡಿದ ಕೂಡಲೇ ನನಗೆ ಅನ್ನಿಸಿದ್ದು ಅಯ್ಯೋ ಪಾಪ ಎಷ್ಟು ವಯಸ್ಸಾಗಿದೆ ಆದರೂ ಕೆಲಸ ಮಾಡುತ್ತಿದ್ದಾರೆ ಇವರಿಗೆ ಯಾರು ಇಲ್ಲವೇ ? ಇದ್ದರೆ ಏಕೆ ವಯಸ್ಸಾದ ತಂದೆ-ತಾಯಿಯರನ್ನು ನೋಡಿಕೊಳ್ಳದೆ ಏಕೆ ಬೀದಿಗೆ ತಳ್ಳುತ್ತಾರೆ ಎಂದು ಅವರಿಗೆ ಶಾಪ ಹಾಕುವುದೇನೋ ಖಚಿತ...ಅದಾರು ಹೀಗೆ ಬೀದಿಗೆ ಬಿದ್ದ ವಯಸ್ಸಾದವರಿಗೆ ಹೋಟೆಲ್ ನವರು ಕೆಲಸ ಕೊಟ್ಟು ತಮ್ಮ ಅನ್ನವನ್ನು ತಾವೇ ಸಂಪಾದಿಸಿ ಕೊಂದು ತಿನ್ನಿವಂತೆ ಮಾಡಿದ್ದರೆ ಅಂದುಕೊಂಡು ಅಕಸ್ಮಾತ್ ಇವರಿಗೆ ಇಲ್ಲಿ ಕೆಲಸ ಇಲ್ಲ ಎಂದಾದರೆ ಅವರ ಪಾಡು ಏನು? ಬಿಕ್ಷೆ ಬೇಡುವುದು ಇಲ್ಲ ಹಸಿವಿನಿಂದ ಬೀದಿ ಹೆಣವಾಗಿ ಹೋಗುವುದು...ಅವರನ್ನು ನಿತ್ಯ ನೋಡುತ್ತಿದ್ದ ನಾನು ಒಂದು ದಿನ ನಿಮಗೆ ಮಕ್ಕಳು ಇಲ್ಲವೇ ಎಂದು ಕೇಳಿಯೇ ಬಿಟ್ಟೆ ಅದಕ್ಕೆ ಆತ ಇದ್ದರೆ ಇಂದು ಹೇಳಿ ಅವರ ಮಕ್ಕಳನ್ನು ದೂರುವುದಗಲಿ....ಶಪಿಸುವುದಗಲಿ ಮಾಡಲಿಲ್ಲ...ಸರಿ ಇಂದು ಅವರಿಗೆ ಹತ್ತು ರೂಪಾಯಿ ಕೊಟ್ಟು ಅಲ್ಲಿಂದ ಎದ್ದು ಬಂದೆ.....
ನಾನು ಕೊಟ್ಟ ಹತ್ತು ರೂಪಾಯಿ ಕೇವಲ ಒಂದು ಕಾಫೀ ಕುಡಿದರೆ ಕಾಲಿಯಗುವುದು. ಹೆತ್ತ ಮಕ್ಕಳಿದ್ದರು ಹೇಗೆ ವಯಸ್ಸಾದ ಕಾಲದಲ್ಲಿ ದುಡಿದು ತಿನ್ನುವ ಇಂತಹವರಿಗೆ ಶಾಶ್ವತ ಪರಿಹಾರ ಏನು?? ಹೆತ್ತವರಿಗೆ ಸ್ವರ್ಗ ಸುಖ ನೀಡುವುದು ಬೇಡ ಕೊನೆಪಕ್ಷ ಅವರಿಗೆ ತಿನ್ನಲು ಎರಡು ಹೊತ್ತು ಊಟ ಹಾಕುವ ಶಕ್ತಿ ಮಕ್ಕಳಿಗೆ ಇಲ್ಲವೇ ?? ಹಾಗೆಯೆ ಕೊಡವರ ಸಂಸ್ಕೃತಿ ಅರಿಯಲು ಅಲ್ಲಿನ ಕೊಡವರ ಮನೆಗೆ ಬೀಟಿ ನೀಡುತ್ತಿದ್ದ ನನಗೆ ಎಷ್ಟೋ ವಯಸ್ಸಾದ ವ್ರುದ್ದರನ್ನು ಕಾಣುವ ಸಂದರ್ಭವು ಎದುರಾಯಿತು....ಅಲ್ಲಿಯೂ ಕೂಡ ಹೀಗೆ ಮಕ್ಕಳು ತಂದೆ-ತಾಯಿಯರನ್ನು ಒಂಟಿಯಾಗಿ ಬಿಟ್ಟು ವಿದೇಶಗಳಲ್ಲಿ, ಬೆಂಗಳೂರು, ಮಂಗಳೂರು, ...ಹೇಗೆ ಅನೇಕ ಕಡೆ ನೆಲಸಿದ್ದಾರೆ...ಎಲ್ಲಿಯೂ ಸಹ ಪೋಷಕರು ಒಂಟಿ ...ಆದರೆ....ಕೂತು ತಿನ್ನುವಷ್ಟು ಆಸ್ತಿ ಇದೆ. ಜೊತೆಗೆ ಮನೆ ಕೆಲಸಕ್ಕೆ, ಅಡುಗೆ ಮಾಡಲು ಕೆಲಸದವರು ಇರುತ್ತಾರೆ ಆದರೂ ಅವರು ಒಂಟಿ....ಇತ್ತ ಆಸ್ತಿಯು ಇಲ್ಲದ... ಮಕ್ಕಳು ತಮ್ಮ ಹೊಣೆ ಹೊರದ ಅನೇಕ ವೃದ್ದರು ನಮ್ಮ ನಡುವೆ ಇದ್ದರೆ...ಒಂದೇ ಸಮಾಜದಲ್ಲಿ ಎಷ್ಟೊಂದು ವೈವಿದ್ಯತೆ...ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವ ಸಂಭಂದಗಳ ಸ್ವರೂಪ, ಸುಖ-ದುಃಖ, ಜೀವನದ ಕಲ್ಪನೆ, ಪ್ರೀತಿ-ವಿಶ್ವಾಸ....ಅದೇನೇ ಇದ್ದರು ಮೊದಲು ನಾವು ಮಾನವರು..ಭಾವನೆಗಳೇ ನಮ್ಮ ಬದುಕು ಆದ್ರೆ ವಾಸ್ತವಾಂಶ ಬೇರೆ ಅಲ್ಲವೇ ??
ನನ್ನ ಆಯಸ್ಸು ನೂರು ವರ್ಷ ಎಂದು ಅಂದುಕೊಂಡರು ಎಗಾಗಲೇ ನಾನು 1/4 ಭಾಗ ಸುಮ್ಮನೆ ವ್ಯರ್ಥ ಮಾಡಿದ್ದೇನೆ...ನನ್ನ ಈ 26 ವರ್ಷಗಳಲ್ಲಿ ನಾನು ಯಾರಿಗೂ ಕಿಂಚಿತ್ತು ಸಹಾಯ ಮಾಡಿಲ್ಲ...ಯಾರಿಗೆ ಯಾಕೆ ಇನ್ನು ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ನನ್ನ ಜೀವನದ ಮಹತ್ವದ ಕನಸೆಂದರೆ ಕೊನೆ ಪಕ್ಷ 5-6 ಅನಾಥ ಮಕ್ಕಳನ್ನು ಸಾಕುವುದು ಇದಕ್ಕಾಗಿ ಕೆಲ ಅನಾಥ ವ್ರುದ್ದರನ್ನು ಸಾಕಿ ಆ ಮಕ್ಕಳನ್ನು ಬೆಳೆಸಲು ವೃದ್ದರ ಸಹಾಯ ಪಡೆಯುವುದು.. ಇದು ಎಷ್ಟರ ಮಟ್ಟಿಗೆ ಸಫಲವಗುವುದೆಂದು ನನಗೆ ತಿಳಿದಿಲ್ಲ ಆದರೆ ಎಲ್ಲಾ ಏರುವುದು ನಮ್ಮ ಕೈಯಲ್ಲೇ ಅಲ್ಲವೇ?? ನಿರಂತರ ಪ್ರಯತ್ನ ಅಗತ್ಯ......ನಾನು ಅದೇ ಪ್ರಯತ್ನದಲ್ಲಿದ್ದೇನೆ.......

05 October 2010
B B M P ಭಿತ್ತಿ ಚಿತ್ರಗಳು ಮತ್ತು ನಮ್ಮ (ಮರ್ಯಾದಸ್ಥ ?) ಜನರು !!!
ನೆನ್ನೆ ಮತ್ತು ಇಂದು ಯಾವುದೊ ಒಂದು ಕಾರ್ಯನಿಮಿತ್ತ ನಮ್ಮ ನಿರ್ಮಲ ಬೆಂಗಳೂರನ್ನು ಸುತ್ತುವ ಭಾಗ್ಯ ನನಗೆ ಒದಗಿ ಬಂದಿತ್ತು. ಬೆಂಗಳುರಿನಲ್ಲೇ ಹುಟ್ಟಿ ಬೆಳದರೂ ಸರಿಯಾಗಿ ಬೆಂಗಳೂರು ತಿಳಿಯದ ನಾನು BMTC ಬಸ್ ಹಿಡಿದು ಸಂಚರಿಸುವಾಗ ದಾರಿಯ ಉದ್ದಕ್ಕೂ ಅಕ್ಕ-ಪಕ್ಕ ಗೋಡೆಗಳಲ್ಲಿ ಬಿಡಿಸಿದ್ದ ಚಿತ್ರಗಳನ್ನು ನೋಡಿ ಮನಸ್ಸಿಗೆ ತುಂಬಾ ಸಂತೋಷವಾಗಿ ಒಂದು ಕ್ಷಣ ನಾನು ಬೆಂಗಳೂರಿನಲ್ಲಿ ಇದ್ದೆನೆಯೇ ಎಂಬ ಅನುಮಾನ ಬಂತು...ಅವು ನನ್ನ ಕಣ್ಣಿಗೆ ಕೇವಲ ಚಿತ್ರಗಳಂತೆ ಕಾಣಲಿಲ್ಲ...ಕರ್ನಾಟಕದ ಸಂಸ್ಕೃತಿ, ಕಲೆಯ ಇತಿಹಾಸದ ಗತವೈಭವ ಸಾರುತ್ತಿರುವ ಮಹಾನ್ ವ್ಯಕ್ತಿಗಳಂತೆ ಕಂಡವು...ಏನೆ ಆದರು ನಾನು ಇದುವರೆಗೂ ನೋಡಲು ಸಾಧ್ಯವಾಗದಂಥಹ ಅನೇಕ ಚಿತ್ರಗಳನ್ನು ನಾನು ಕಂಡೆ....ಇಂಥಹ ಕಲಾಕೃತಿಗಳನ್ನು ಭಿತ್ತಿಚಿತ್ರಗಳ ಮೂಲಕ ನೋಡಲು ಅಣುವುಮಾಡಿಕೊಟ್ಟ B B M P ಮತ್ತು ಇವುಗಳನ್ನು ಗೋಡೆಯಮೇಲೆ ಚಿತ್ರಸಿದ ಕಲಾವಿದರಿಗೆ ನನ್ನ ನಮನಗಳು....
ಆದರೆ ನನ್ನ ಈ ಸಂತೋಷ ತುಂಬ ಸಮಯ ಉಳಿಯಲಿಲ್ಲ....ಮುಂದೆ ಸಾಗುತ್ತಾ ನಮ್ಮ ನಾಗರೀಕ ಸಮಾಜದ ಮೇಲೆ ಅದರಲ್ಲೂ ನಮ್ಮ ಬೆಂಗಳೂರಿನ ಜನರ ಬಗ್ಗೆ ಅಸಹ್ಯದ ಭಾವನೆ ಹುಟ್ಟಿತು...B B M Pಯವರು ಗೋಡೆ ಕಂಡಲ್ಲಿ ನಮ್ಮ ಜನರು ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಮತ್ತು ನಮ್ಮ ನಿರ್ಮಲ ನರಗದ ಸೌಂದರ್ಯವನ್ನು ಹೆಚ್ಚಿಸಲು ಬಿಡಿಸಿದ್ದ ಇಷ್ಟು ಸುಂದರವಾದ ಭಿತ್ತಿಚಿತ್ರಗಳ ಎದುರಿಗೆ ನಮ್ಮ ಜನರು (ಕೆಲವರು) ನಾಚಿಕೆಯಿಲ್ಲದೆ ಮೂತ್ರ ವಿಸರ್ಜನೆ ಮಾಡುತ್ತಿದ್ದರು....ಇದನ್ನು ನೋಡಿ ಅನಿಸಿದ್ದು ಮೊದಲು ಸಹ ಅಂದರೆ ಬಿತ್ತಿಚಿತ್ರಗಳನ್ನು ಬಿಡಿಸುವ ಮುಂಚೆಯೂ ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದೆಂಬ ಬರಹ ಕಾಣಿಸುತ್ತಿದ್ದರು ಅದು ನಮಗಲ್ಲ ಕೇವಲ ಮರ್ಯಾದಸ್ಥರಿಗೆಂದು ಅಲ್ಲಿಯೇ ತಮ್ಮ ಕೆಲಸ ಮುಗಿಸಿ ಹೋಗುತ್ತಿದ್ದರು. ಆದರೆ ಭಿತ್ತಿ ಚಿತ್ರಗಳನ್ನು ಬಿಡಿಸಿದ ಮೇಲಾದರೂ ನಮ್ಮ ಈ ಮರ್ಯಾದಸ್ಥ ಜನರು ನಮ್ಮ ಕಲೆ, ಸಂಸ್ಕೃತಿಗೆ ಬೆಲೆ ನೀಡಿ, ಅವುಗಳನ್ನು ಗೌರವಿಸಿ ಹಾಗೆ ಮಾಡುವುದಿಲ್ಲವೆಂದು ತಿಳಿದ B B M P ಯವರ ನಂಬಿಕೆಯನ್ನು ಸುಳ್ಳು ಮಾಡಿದ್ದರೆ...ಬರೀ ಇದೊಂದೇ ಘನ ಕಾರ್ಯವಲ್ಲ ಅದರ ಜೊತೆಗೆ ಅದೇ ಗೋಡೆಗಳ ಕೆಳಗೆ ಕಸದ ರಾಶಿ ನೋಡಿ ನನಗೆ ಅನ್ನಿಸಿದ್ದು ಕಾನೂನನ್ನು ಪಾಲಿಸುವುದು ಬೇಡ ಕೊನೆಪಕ್ಷ ಆ ಚಿತ್ರಗಳಿಗಾದರು, ಅವುಗಳನ್ನು ಬಿಡಿಸಲು ಕಷ್ಟ ಪಟ್ಟ ಕಲಾವಿದರಿಗದರೂ ಗೌರವ ನೀಡದ ನಮ್ಮ ಜನರ ಹೃದಯ ವೈಶಾಲ್ಯತೆಯನ್ನು ಹೋಗಳಬೇಕಲ್ಲವೇ???
ಸರ್ಕಾರ ಇದಕ್ಕೆಂದೆ ಕಂಡಕಂಡಲ್ಲಿ ನಿರ್ಮಲ ಬೆಂಗಳೂರು ಎಂಬ ಶೀರ್ಷಿಕೆಯಡಿ ಸಾರ್ವಜನಿಕ ಶೌಚಾಲಯಗಳನ್ನೂ ನಿರ್ಮಿಸಿದ್ದರು ಅದನ್ನು ಬಳಸುವ ಬದಲು ಹೀಗೆ ನಗರದ ಸೌಂದರ್ಯ ಹಾಳುಮಾಡುವ, ನಮ್ಮ ಸಂಸ್ಕೃತಿ, ಕಲೆಗೆ ಅಗೌರವ ತೋರಿಸುವ ಜೊತೆಗೆ ಅನಾರೋಗ್ಯ ಹರಡಲು ಕಾರಣವಾಗುವ ಇಂಥಹ ಜನರಿಗೆ ಎಂದು ತಾವು ಮಾಡುತ್ತಿರುವುದು ನಾಚಿಕೆ ಇಲ್ಲದ ಕೆಲಸ ಎಂದು ಅನಿಸುವುದಿಲ್ಲವೇ??? ಜೊತೆಗೆ ಅನೇಕ ಪ್ರವಾಸಿಗರು ಇವುಗಳನ್ನು ನೋಡಿ ನಮ್ಮ ಜನರ ಬಗ್ಗೆ ಅವರಿಗೆ ಮೂಡುವ ಭಾವನೆಗಳೇ ಬೇರೆ ಅಲ್ಲವೇ?? ಇದು ನಮ್ಮ ನಾಡು ಇದರ ಸ್ವಚ್ಚತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಅದಕ್ಕಾಗಿ ಸರ್ಕಾರ ಕಾನೂನು ಮಾಡಿ ಅದನ್ನು ಬಲವಂತವಾಗಿ ನಮ್ಮ ಮೇಲೆ ಹೆರುವ ಅಗತ್ಯವಿರಬಾರದು ಆದರೆ ಅದು ಸಾಧ್ಯವಿಲ್ಲ ಎಲ್ಲಿಯವರಿಗೆ ನಾನು ನಮ್ಮ ಜವಾಬ್ಧಾರಿಯನ್ನು ಅರಿತು ನಡೆದುಕೊಳ್ಳುವ ಹೊರತು ಸರ್ಕಾರವನ್ನು ದೂಷಿಸುವ ನಮ್ಮ ಕಾರ್ಯ ನಿಲ್ಲುವುದಿಲ್ಲ ಅಸಿಲಿಗೆ ಕಾನೂನು ಮಾಡುವುದು ಮಾಡಲಿ ನಾವು ಮುರಿದೆ ತೀರುತ್ತಿವೆ ಎನ್ನುವ ಇಂಥವರು ಇರುವವರೆಗೂ ನಮ್ಮ ಸಂಸ್ಕೃತಿ, ಕಲೆ ಉಳಿಯಲು ಸಾಧ್ಯವಾಗದು.....ಜೊತೆಗೆ ಅವುಗಳ ಮೇಲೆ ಗೌರವವು ಬರುವುದಿಲ್ಲ....ಎಲ್ಲೋ ಒಂದು ಕಡೆ ನನಗೆ ಅನಿಸಿದ್ದು B B M P ಯವರು ಹೀಗೆ ಬಿತ್ತಿಚಿತ್ರಗಳನ್ನು ಬಿಡಿಸಿ ಅವುಗಳ ಮೌಲ್ಯ ಕುಸಿಯಲು ಪರೋಕ್ಷವಾಗಿ ಕಾರಣವಾಗಿದ್ದರೆ ಎಂದು.........

02 October 2010
ಗಾಂಧಿತಾತ...........ರಾಷ್ಟ್ರಪಿತ....
ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ...ಪದಗಳಿಗೆ ನಿಲುಕದ ಅವರ ವ್ಯಕ್ತಿತ್ವ, ಅಹಿಂಸ ತತ್ವದ ಪ್ರತಿಪಾದಕ ಹಾಗು ಪಾಲಕ.... ಗಾಂಧೀಜಿ ಬ್ರಿಟಿಷರೊಡನೆ ಹೋರಾಡಿ ನಮ್ಮನೆಲ್ಲಾ ಸ್ವತಂತ್ರ ದೇಶದ ಪ್ರಜೆಗಳನ್ನಾಗಿ ಮಾಡಿದ್ದರೆ..... ಕೇವಲ ಗಾಂಧೀಜಿ ಮಾತ್ರವಲ್ಲ ಅನೇಖ ಸ್ವತಂತ್ರ ಹೋರಾಟಗಾರರ ಶ್ರಮದ ಪ್ರತಿಪಲವೇ ಇಂದು ನಾವೆಲ್ಲರೂ ಅನುಭವಿಸುತ್ತಿರುವ ಸ್ವತಂತ್ರ....ಇವರಿಗೆಲ್ಲರಿಗೂ ನಮ್ಮ ನಮನಗಳು...
ಗಾಂಧೀಜಿ ಎಂದಾಗ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವ ಚಿತ್ರ...ಶುಭ್ರ ಬಿಳುಪಿನ ಬಿಳಿ ಪಂಚೆ....ಅರ್ದಂಭರ್ದ ಮೈಮುಚ್ಚಿದ ಬಿಳಿ ಶಾಲು....ದುಂಡಗಿನ ಆಕಾರದ ಕನ್ನಡಕ....ಕೈಯಲ್ಲಿ ಒಂದು ಕೋಲು....ಕಾಲಿಗೆ ಚಪ್ಪಲಿ..ಇದು ಅವರ ಚಿತ್ರಣ..... ಇಡೀ ದೇಶ ಹಸಿವು ಬಡತನದಿಂದ ಬಳಲುತ್ತಿರುವ ನಾನು ಮಾತ್ರ ಮೈತುಂಬ ಬಟ್ಟೆ ಧರಿಸಿ ಹೇಗೆ ನಡೆಯಲಿ ಎಂದು ತಮ್ಮ ಉಡುಗೆಯಲ್ಲಿ ಇಡೀ ಭಾರತದ ಚಿತ್ರಣವನ್ನು ಪ್ರತಿಕಿಸಿ ಬಡತನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು......ರಾಷ್ಟ್ರಪಿತ ಗಾಂಧೀಜಿ ಬಯಸಿದ್ದು ಕೇವಲ ಬ್ರಿಟಿಷರಿಂದ ಸ್ವತಂತ್ರ ಮಾತ್ರವಲ್ಲ ಬದಲಿಗೆ ಭಾರತದ ಪ್ರತಿ ಹಳ್ಳಿಗಳು ಸ್ವಯಂ ಪರಿಪೂರ್ಣತೆ, ಸ್ವಾವಲಂಬನೆ ಸಾಧಿಸುವುದು, ಸ್ತ್ರಿ ಸ್ವತಂತ್ರದ ಜೊತೆಗೆ ಅವಳು ಸ್ವಾವಲಂಬಿಯಾಗಿ ಬದುಕುವುದು, ಪ್ರತಿಯೊಬ್ಬರೂ ಶಿಕ್ಷಣ ಹೊಂದುಬೇಕೆನ್ನುವುದು.....ಅವರು ರೈತ ನಮ್ಮ ದೇಶದ ಬೇನ್ನೆಲುಬೆಂದು ಹೇಳಿದ್ದರು........ಇವೆಲ್ಲ ಅವರು ಕಂಡ ಕನಸುಗಳು....ಈ ಕನಸುಗಳಲ್ಲಿ ಇಷ್ಟು ನನಸಾಗಿವೆ ಇನ್ನು ಎಷ್ಟೋ ಕನಸಾಗಿಯೇ ಉಳಿದಿವೆ....
ಅವರ ಕನಸಿನಂತೆ ನಮ್ಮ ಹಳ್ಳಿಗಳು ಸ್ವತಂತ್ರ ಬಂದು ಇಷ್ಟು ವರ್ಷವಾದರೂ ಸ್ವಯಂ ಪರಿಪೂರ್ಣತೆ, ಸ್ವಾವಲಂಬನೆಯನ್ನು ಸಾದಿಸುವಲ್ಲಿ ವಿಫಲವಾಗಿದೆ...ಇಂದು ಕೂಡ ಹಳ್ಳಿಗಳು ಸರ್ಕಾರದ ಸಹಾಯಹಸ್ತ ಬಯಸುತ್ತಿವೆ...ಅದು ತಪ್ಪು ಕೂಡ ಅಲ್ಲಾ....ಕಾರಣ ನಮ್ಮ ಪ್ರಜಾಪ್ರಭುತ್ವ ದೇಶದ ಮಹಾದೊರೆಗಳು (ರಾಜಕೀಯ ವ್ಯಕ್ತಿಗಳು) ಅವುಗಳನ್ನು ಮುಂದುವರೆಯಲು ಬಿಡುವುದು ಇಲ್ಲ ಅಲ್ಲವೇ?? ಇನ್ನು ಸ್ತ್ರಿ ಸ್ವತಂತ್ರ.........ಗಾಂಧಿ ಎಂದು ಒಂಟಿಯಾಗಿ ಹೆಣ್ಣು ಮಧ್ಯ ರಾತ್ರಿ ಓಡಾಡುತ್ತಲೋ ಅಂದು ನಮಗೆ ನಿಜವಾದ ಸ್ವತಂತ್ರ ಎಂದರು....ಆದರೆ ಅದು ಇಂದು ಸ್ವಲ್ಪ ಮಟ್ಟಿಗೆ ಸಾಕರವಗಿದ್ದರು ಬಹಳಷ್ಟು ಹೆಣ್ಣು ಮಕ್ಕಳು ಇದನ್ನು ದುರುಪಯೋಗ ಪಡಿಸಿಕೊಂದಿರುವುದೇ ಹೆಚ್ಚು ಎನ್ನುವುದು ವಾಸ್ತವ......ಇಂದು ಶಿಕ್ಷಣ ಕ್ಷೇತ್ರದಲ್ಲಂತೂ ಕ್ರಾಂತಿಯನ್ನೇ ಮಾಡಿಬಿಟ್ಟಿದ್ದೇವೆ....ಆದರೂ ಇಂದಿನ ಶಿಕ್ಷಣ ಬಹಳ ದುಬಾರಿಯೇ ಸರಿ.......
ಇನ್ನು ನಮ್ಮ ರಾಜಕೀಯ ವ್ಯಕ್ತಿಗಳು ಎಷ್ಟರ ಮಟ್ಟಿಗೆ ಇವರ ತತ್ವ, ಆದರ್ಶಗಳನ್ನು ಪಾಲಿಸುತ್ತಾರೆ ??? ಹೌದೌದು ನಮ್ಮ ರಾಜಕೀಯ ವ್ಯಕ್ತಿಗಳು ಹಿಂಸೆಯನ್ನು ಕನಸಿನಲ್ಲಿಯೂ ಕಂಡವರಲ್ಲ ಬದಲಿಗೆ ನಿಜವಾಗಿ ಹಿಂಸೆಯನ್ನು ಮಾಡುತ್ತ ಅಧಿಕಾರಕ್ಕಾಗಿ ದೊಡ್ಡ (ಸ್ವ)ತಂತ್ರ ಹೋರಾಟವನ್ನೇ ಮಾಡಿಬಿಡುತ್ತಾರೆ....ಗಾಂಧೀಜಿಯಾ ಬಗ್ಗೆ ಬರೆಯುವಾಗ ರಾಜಕೀಯ ವ್ಯಕ್ತಿಗಳ ಬಗ್ಗೆ ಬರೆಯುವುದು ಗಾಂಧೀಜಿಗೆ ಮಾಡುವ ಅವಮಾನವೆನಿಸಿದರು ಅದನ್ನು ಬರೆಯಲೇ ಬೇಕೆಂದು ನನ್ನ ಕೈಬೆರಳುಗಳು ಹಾತೊರೆಯುತ್ತವೆ....ದೇಶದ ಪ್ರತಿಯೊಬ್ಬ ಪ್ರಜೆಯು ಮೂಲಭೂತ ಹಕ್ಕು ದೊರೆಯಬೇಕು...ಆದರೆ ಎಲ್ಲಿ ದೊರೆಯುತ್ತಿದೆ...ಬೆಳೆ ಬೆಳೆದು ಇಡೀ ದೇಶಕ್ಕೆ ಅನ್ನ ನೆಡುತ್ತಿದ್ದ ರೈತ ಇಂದು ಬೆಳೆ ಬೆಳೆಯಲಾಗದೆ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ....ಅವರ ಕುಟುಂಬಕ್ಕೆ ಪರಿಹಾರ ಘೋಷಿಸಿದರು ಅದು ಕೇವಲ ಘೋಷಣೆಯಷ್ಟೇ ಹಣ ಅವರ ಕೈಸೇರುವಷ್ಟರಲ್ಲಿ ಹರಿದು ನೂರಾರು ದಿಕ್ಕು ಸೇರಿ ಕೊನೆಗೆ ಅವರಿಗೆ ಸಿಗುವುದು ಕೇವಲ ಒಂದು ದಿನದ ಅಥವಾ ಒಂದು ವಾರದ ಜೀವನ ಸಾಗಿಸಲು ಅಷ್ಟೆ.....ಇಂಥಹ ಅದೆಷ್ಟೋ ಕಷ್ಟದ ಪರಿಸ್ಥಿಯಲ್ಲಿ ಇಂದು ನಮ್ಮ ದೇಶದ ಜನರಿದ್ದಾರೆ ಆದರೆ ನಮ್ಮ ರಾಜಕೀಯ ವ್ಯಕ್ತಿಗಳು ಇದರ ಪರಿವೆ ಇಲ್ಲದೆ ತಮ್ಮ ಕುರ್ಚಿ, ಅಧಿಕಾರಕ್ಕೆ ಗುದ್ದಾಡುತ್ತಾ.... ಚುನಾವಣೆ ಬಂದಾಗ ಮಾತ್ರ ಆಶ್ವಾಸನೆ ಇತ್ತು ಚುನಾವಣೆ ಮುಗಿದ ಬಳಿಕ ತಿರುಗಿಯೂ ನೋಡುವುದಿಲ್ಲ......ಅದರಲ್ಲೂ ಈಗಂತು ನಮ್ಮ ರಾಜಕೀಯ ವ್ಯಕ್ತಿಗಳಿಗೆ ಹಗರಣ ಗಳೆಂದರೆ ನೀರು ಕುಡಿದಷ್ಟು ಸುಲಭವಾಗಿ ಬಿಟ್ಟಿದೆ .... ಗಾಂಧಿ ಹೇಳಿದ್ದು ಹಳ್ಳಿ ಜನರು ಸ್ವಾವಲಂಬಿಗಳಾಗಬೇಕು ಇಂದು ಆದರೆ ನಮ್ಮ ಜನರು ಅಷ್ಟೆ ಚುನಾವಣೆಯ ವೇಳೆ ನೀಡುವ ನೋಟು, ಬಟ್ಟೆ, ಹೆಂಡಕ್ಕಾಗಿ ತಮ್ಮ ತನವನ್ನೇ ಮಾರಿಕೊಳ್ಳುತ್ತ ದಾಸರಾಗಿ ಬಿಟ್ಟಿದ್ದಾರೆ...
ಅದೆಷ್ಟೋ ಇಂಥಹ ಗಾಂಧಿ ಜಯಂತಿಗಳು, ಸ್ವತಂತ್ರ ದಿನಾಚರಣೆಗಳು, ಬರಬಹುದು ಹೋಗಬಹುದು.....ಕೊನೆಗೆ ಉಳಿಯುವ ಪ್ರಶ್ನೆ.....ನಮಗೆ ಸ್ವತಂತ್ರ ತಂದು ಕೊಡಲು ಹೋರಾಡಿ ಮಾಡಿದ ಜೀವಗಳಿಗೆ ನಾವು ನೀಡುತ್ತಿರುವ ಗೌರವಗಳೆನಾದರೂ ಏನು ?? ಎಷ್ಟರ ಮಟ್ಟಿಗೆ ನಾವು ಸ್ವತಂತ್ರವನ್ನು ನಮ್ಮ ದೇಶದ ಏಳಿಗೆಗಾಗಿ ಬಳಸಿಕೊಳ್ಳುತ್ತಿದ್ದೇವೆ ?? ಅಸಲಿಗೆ ಸ್ವತಂತ್ರ ಎಂಬ ಪದದ ಅರ್ಥವನ್ನು ನಾವು ತಿಳಿದಿರುವುದದರೂ ಹೇಗೆ ??
ನಿಜವಾದ ಸ್ವಾತಂತ್ರದ ಅರ್ಥ ಮತ್ತು ಅದರ ಸುದುಪಯೋಗದ ವಿನಃ ಇಂಥಹ ಅದೆಷ್ಟೋ ಗಾಂಧಿ ಜಯಂತಿಗಳು, ಸ್ವತಂತ್ರ ದಿನಾಚರಣೆಗಳು ಬಂದರು ಅವು ಕೇವಲ ಹೆಸರಿಗಷ್ಟೇ ಆಚರಣೆಗಳಗಿರುತ್ತವೆಯೇ ಹೊರತು ನಿಜವಾಗಿ ಮಾನವನ ಮತ್ತು ದೇಶದ ಅಭಿವೃಧಿ ಸಾಧ್ಯವಿಲ್ಲ ಎಂಬುದು ನನ್ನ ವಯುಕ್ತಿಕ ಅಭಿಪ್ರಾಯ.....
24 September 2010
ಸಾರ್ಥಕ ಬದುಕು ಅಂದರೆ.......???
ಬಹಳಷ್ಟು ಸಲ ನನ್ನನು ಕಾಡುವ ಪ್ರಶ್ನೆ ಬದುಕು ಸಾರ್ಥಕವಾಗಲು ಏನು ಮಾಡುಬೇಕು? ಇದಕ್ಕೆ ಉತ್ತರ ಸಿಗುವುದು ಸುಲಭದ ಮಾತಲ್ಲ ಎಂಬುದು ನನಗೆ ತಿಳಿದೆದೆ. ಪ್ರತಿ ಮನುಷ್ಯನು ಜೀವನದಲ್ಲಿ ಕೆಲವೊಂದು ಆಸೆಗಳನ್ನೂ ಇಟ್ಟುಕೊಂಡಿರುತ್ತಾನೆ ಕೆಲವೊಮ್ಮೆ ಅವು ಅತಿಯಾಸೆಗಳು ಆಗಿರುತ್ತವೆ........ಸಾಮಾನ್ಯವಾಗಿ ಒಬ್ಬ ಸಾಮಾನ್ಯ ಮನುಷ್ಯನನ್ನ ಯಾರಾದರು ನಿನ್ನ ಆಸೆ ಏನು?? ಎಂದು ಕೇಳಿದಾಗ ಮಾಮೂಲಿಯಾಗಿ ಬರುವ ಉತ್ತರ ಸುಖವಾಗಿ ಬಾಳಬೇಕು ಎಂಬುದೇ ಆಗಿರುತ್ತದೆ....ಸುಖ ಅನ್ನುವ ಎರಡಕ್ಷರದಲ್ಲಿ ಏನೇನೆಲ್ಲ ಅಡಗಿದೆ....ಕೆಲವರಿಗೆ ಸುಖ ಹಣ ಸಂಪಾದನೆ ಮಾಡುವಲ್ಲಿ ಸಿಕ್ಕರೆ ಮತ್ತೆ ಕೆಲವರಿಗೆ ಒಂದು ಮನೆ ಕಟ್ಟಬೇಕು, ಮನೆಯವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳಬೇಕು, ನಮ್ಮ ಹೆಣ್ಣು ಮಕ್ಕಳಿಗೆ ಒಳ್ಳೆಯ ಕೆಲಸ, ಆಸ್ತಿ ಹೊಂದಿರುವ ಹುಡುಗನನ್ನು ನೋಡಿ ಮದುವೆ ಮಾಡಬೇಕು, ಗಂಡು ಮಗನಿಗೆ ಒಳ್ಳೆಯೇ ಶಿಕ್ಷಣ ಕೊಡಿಸಿ ಲಂಚ ಕೊಟ್ಟಾದರೂ ಸರಿ ಸರ್ಕಾರೀ ಕೆಲಸ ಕೊಡಿಸಬೇಕು......ಹೇಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹೀಗೆ ಬೆಳೆಯುವ ಪಟ್ಟಿ ಕೇವಲ ತನಗೆ-ತನ್ನ ಮನೆಯವರಿಗೆ ಮಾತ್ರ ಸಂಬಂದಿಸಿರುತ್ತದೆ.....
ಸಾರ್ಥಕ ಬದುಕು ಎಂದರೆ ಇದೇನಾ?? ವಯುಕ್ತಿಕ ಮಟ್ಟದಲ್ಲಿ ನೋಡಿದಾಗ....ಮನೆ ಕಟ್ಟುವುದು....ಹಣ, ಆಸ್ತಿ ಸಂಪಾದನೆ, ನಾನು ಇರುವ ಮನೆ, ಮನೆ ಮುಂದೆ ಇರುವ ಜಾಗ ಸ್ವಚ್ವ ವಾಗಿರಬೇಕು....ಮನೆಯಲ್ಲಿ ಒಬ್ಬ ಮನುಷ್ಯನ ಅಗತ್ಯಗಳನೆಲ್ಲ ಪೂರೈಸುವ ವಸ್ತುಗಳು ಇರಬೇಕು....ದಿನ ಬೆಳಿಗ್ಗೆ ಎದ್ದು ಬಿಸಿ-ಬಿಸಿ ಕಾಫಿ ಕುಡಿದು, ತಿಂಡಿ ತಿಂದು ಆಫೀಸಿಗೆ ಹೋಗಿ ಕೆಲಸ ಮುಗಿಸಿ ಮತ್ತೆ ಊಟ ಮಾಡಿ ಟೈಮ್ ಪಾಸು ಮಾಡೋದಕ್ಕೆ ಒಂದಿಷ್ಟು ಹೊತ್ತು TV ನೋಡಿ ಮತ್ತೆ ಮಲಗುವುದು....ಇನ್ನು ರಜಾ ದಿನಗಳಲ್ಲಿ ಒಂದಿಷ್ಟು ಮೋಜು-ಮಸ್ತಿ ಮಾಡುವುದು....... ಇಷ್ಟೇ ಆದರೆ ಸಾರ್ಥಕ ಬದುಕು ಎಂದು ಕರೆಯಲು ಸಾಧ್ಯವೇ???
ನಾವು ಬದುಕಿರುವ ಸಮಾಜಕ್ಕೆ ನಾವು ನೀಡುವುದಾದರೂ ಏನು?? ಸಹಾಯದ ಅಗತ್ಯವಿರುವವರಿಗೆ ಎಂದಾದರೂ ಕೈಚಾಚಿದ್ದೆವೆಯೇ?? ತಿನ್ನಲು ಒಂದು ಹೊತ್ತು ಊಟ ಇಲ್ಲದವರು ಇಂದು ಎಷ್ಟೋ ಜನರಿದ್ದಾರೆ ಆದರೆ ಉಳ್ಳವರು ಮದುವೆ, ನಾಮಕರಣ, ಅನೇಕ ಸಮಾರಂಭಗಳಲ್ಲಿ ಹೊಟ್ಟೆ ಬಿರಿಯೆ ತಿಂದು ಉಳಿದುದ್ದನ್ನು ತಿಂದ ಎಲೆಯಲ್ಲಿಯೇ ಬಿಟ್ಟು ಹೋಗುವ ಜನರಿದ್ದಾರೆ ಅವರು ಬಿಟ್ಟು ಹೋಗುವ ಊಟದಲ್ಲಿ ಕಡಿಮೆಯೆಂದರೆ ಎರಡು ಮಕ್ಕಳಿಗೆ ಹೊಟ್ಟೆ ತುಂಬಿಸಬಹುದಾಗಿದೆ.....ಇಂಥಹ ಸಮಾರಂಭಗಳಲ್ಲಿ ಸಂಬ್ರಮದಿಂದ ಓಡಾಡಿಕೊಂಡು ಊಟ ಮಾಡುವವರು ಯಾರಾದರು ಅದರ ಬಗ್ಗೆ ಯೋಚನೆ ಮಾಡಿದ್ದಾರೆಯೇ...?? ಇಲ್ಲ... ಮಾನ ಮುಚ್ಚಲು ಬೇಕಿರುವ ಬಟ್ಟೆ ಇಲ್ಲದವರು ಎಷ್ಟೋ ಜನರಿದ್ದಾರೆ....ಆದರೆ ನಾವುಗಳು ತಿಂಗಳಿಗೊಮ್ಮೆ ಹೊಸ ಬಟ್ಟೆ ಖರಿದಿಸುತ್ತಲೇ ಇರುತ್ತೇವೆ...ಎಂದಾದರೂ ಇದರ ಬಗ್ಗೆ ಯೋಚಿಸುತ್ತೆವೆಯೇ?? ಯಾರ ಯಾರಿಗೋ ಬೇಡ ನಮ್ಮ ಹೆತ್ತ ತಂದೆ-ತಾಯಿಯರಿಗೆ ನೀಡುವುದಾದರೂ ಏನು ?? ವಯಸ್ಸಾದ ಕಾಲದಲ್ಲಿ ಅವರಿಗೆ ನೀಡಬೇಕದ ಆಸರೆಯನ್ನು ಕೊಡಲು ಇಂದು ನಾವು ವೃದ್ಧಶ್ರಮಗಳ ಮೊರೆ ಹೋಗಿದ್ದೇವೆ....ಅನೇಕ ಕುರುಡರು ರಸ್ತೆ ದಾಟಲು, ಬಸ್ಸು ಹತ್ತಲು ಪರದಾಡುತ್ತಿದ್ದರು ನಮ್ಮ ಪಾಡಿಗೆ ನಾವು ಇರುತ್ತೇವೆ......ದಿನ ನಿತ್ಯ ನಾವು ಬೇಟಿಕೊಡುವ ಸ್ಥಳಗಳಲ್ಲಿ ಮಾಮೂಲಿ ಎಂಬಂತೆ ಚಿಕ್ಕ ವಯಸ್ಸಿನ ಮಕ್ಕಳು ಶಾಲೆ ತೊರೆದು ದುಡಿಯುವುದನ್ನು ನಾವು ನೋಡುತ್ತಲೇ ಇರುತ್ತೇವೆ....
ಇನ್ನು ಎಲ್ಲೋ ಯಾರೋ ಸತ್ತರೆ ನಮಗೇನು ಎಂಬ ಭಾವನೆ ನಾನು ಅನೇಕರಲ್ಲಿ ಕಂಡಿದ್ದೇನೆ....ಇಂದು ಮುಂಜಾನೆ ಕೂಡ ಆದದ್ದು ಅದೇ..ನಮ್ಮ ಆಫೀಸ್ ನಲ್ಲಿ ಡ್ರೈವರ್ ಆಗಿ ಕೆಲಸಮಾಡುತ್ತಿದ್ದ ಶ್ರೀಕಂಠ ಅವರು ಮುಂಜಾನೆ ತೀರಿಹೋದರು ಎಂದು ತಿಳಿದು ಬೇಸರದಿಂದ ಕುಳಿತು ಅಳುತ್ತಿದ್ದ ನಾನು...ಅದೇ ಆಫೀಸಿನಲ್ಲಿ ವಿಷಯ ತಿಳಿದಿದ್ದರೂ ತಮ್ಮ ಪಾಡಿಗೆ ತಾವು ತಮಾಷೆ ಮಾತನಾಡುತ್ತ ನಗುತ್ತಿದ್ದರವರನ್ನು ಕಂಡೆ.....ನಮ್ಮ ಜೊತೆಯಲ್ಲಿಯೇ ಕೆಲಸಮಾಡುತ್ತಿದ್ದ ಒಬ್ಬ ವ್ಯಕ್ತಿ ಇನ್ನಿಲ್ಲ ಎಂದು ತಿಳಿದಾಗ ನಾವು ನೀಡುವ ಪ್ರತಿಕ್ರಿಯೆ ಇದೇನಾ ??? ಸರಿ ಅವರಿಗಾಗಿ ಅಳುತ್ತ.... ಗಲಾಟೆ ಮಾಡಿ... ಆಫೀಸ್ ಗೆ ರಜಾ ನೀಡಿ ಎಂದು ಕೇಳಲು ಆಗುವುದಿಲ್ಲ ಕಾರಣ ಅವರು Dr ರಾಜಕುಮಾರ್ ಸತ್ತಗಲೋ, ವಿಷ್ಣುವರ್ಧನ್ ಸತ್ತಗಲೋ, ನಾವು ಮಾಡಿದ್ದನ್ನು ಕೇವಲ ಒಬ್ಬ ಮಾಮೂಲಿ ವ್ಯಕ್ತಿ ಸತ್ತಾಗ ನಾವು ಮಾಡುವುದಿಲ್ಲ ಅಲ್ಲವೇ...... ಎಲ್ಲಿ ನನ್ನ ಪ್ರಶ್ನೆ ಇಷ್ಟೇ....ಸತ್ತ ವ್ಯಕ್ತಿ ಯಾರೇ ಆದರೂ ಅವರನ್ನು ಕ್ಷಣ ಮಾತ್ರ ನೆನೆಯುವುದು ಮುಖ್ಯ...ಅದು ಪ್ರಸಿದ್ದ ವ್ಯಕ್ತಿಗಳಾದ Dr ರಾಜಕುಮಾರ್, ವಿಷ್ಣುವರ್ಧನ್, ಗಂಗೂಬಾಯಿ ಹಾನಗಲ್ಲ, ಅಶ್ವಥ್, ರಾಜಶೇಕರ್ ರೆಡ್ಡಿಯೇ ಆಗಿರಲಿ ಅಥವಾ ವೀರಪ್ಪನ್, ಪ್ರಭಾಕರನ್ ರಂಥಹ ಕುಖ್ಯಾತ ವ್ಯಕ್ತಿ ಗಳೇ ಆಗಿರಲಿ ಸತ್ತಮೇಲೆ ಅವರುಗಳನ್ನು ಕೇವಲ ಒಬ್ಬ ಮನುಷ್ಯನನ್ನಗಿಯೇ ನೋಡಬೇಕು....ನಂತರ ಆತ ಮಾಡಿರುವ ಕೆಲಸಗಳು ಬರುತ್ತವೆ ಎಂಬುದು ನನ್ನ ವಯುಕ್ತಿಕ ಅಭಿಪ್ರಾಯ.... ನಮ್ಮ ದೇಶದಲ್ಲಿ ನಮ್ಮ ಬಂಧುಗಳೋ , ಸ್ನೇಹಿತರೋ ಸತ್ತಾಗ ನೀಡುವ ಪ್ರತಿಕ್ರಿಯೆಯನ್ನ ಪಾಕಿಸ್ತಾನದಲ್ಲಿ ಯಾರೋ ಒಬ್ಬರನ್ನು ಗುಂಡಿಕ್ಕಿ ಕೊಂದ ದೃಶ್ಯವನ್ನು ನೇರವಾಗಿ ನೋಡಿದಾಗಲು ನಾವು ಮರುಗುವುದಿಲ್ಲ ಕಾರಣ ಅವರು ನಮ್ಮವರಲ್ಲ..ಅವರಿಗೂ ನಮಗೂ ಸಂಭಂದವಿಲ್ಲ ಎಂದು.......
ನಾವು ಪ್ರಪಂಚದಲ್ಲಿ ಕಷ್ಟದಲ್ಲಿರುವ ಎಲ್ಲರಿಗೂ ಸಹಾಯ ಮಾಡಲು ಸಾಧ್ಯವಿಲ್ಲವೆಂದು ನನಗೆ ತಿಳಿದೆದೆ....ಆದರೆ ಬದುಕನ್ನು ಸಾರ್ಥಕಗೊಳಿಸಲು ನಮ್ಮ ಮನೆಯವರಿಗಾಗಿ ನಾವು ಮಾಡುವ ಪ್ರಯತ್ನದಲ್ಲಿ ಕಿಂಚಿತ್ತಾದರೂ ಕೈಲಾಗದವರ, ಸಹಾಯದ ಬೇಕಾಗಿರುವವರಿಗೆ ನಮ್ಮ ಕೈಲಾದ ಸಹಾಯ ಮಾಡಬಹುದು ಎಂಬುದು ನನ್ನ ಅಭಿಪ್ರಾಯ....ಸರಿ ಇನ್ನು ನಾವು ಹೇಗೆ ಇಂಥಹವಿರಿಗೆ ಸಹಾಯ ಮಾಡಬಹುದು ಎಂಬ ಪ್ರಶ್ನಗೆ ನನಗೆ ಅನ್ನಿಸಿದ ಕೆಲವು ಉತ್ತರಗಳನ್ನು ಇಲ್ಲಿ ನೀಡಲು ಇಷ್ಟ ಪಡುತ್ತೇನೆ......ಊಟದ ವಿಷಯ ಬಂದಾಗ ಯಾವುದೇ ಸಭೆ- ಸಮಾರಂಭಗಳಿಗೆ ಹೋದಾಗ ಅಗತ್ಯವಿರುವಷ್ಟು, ನಿಮಗೆ ತಿನ್ನಲು ಆಗುವಷ್ಟು ಮಾತ್ರ ಹಾಕಿಸಿಕೊಳುವುದು ಒಂದು ವೇಳೆ ಉದಿದರೆ ಅದನ್ನ ಯಾವುದಾದರು ಅನಾಥಾಶ್ರಮ, ವೃದ್ದಾಶ್ರಮ ಅಥವ ದೇವಸ್ಥಾನದ ಮುಂದೆ ಸಾಲಾಗಿ ಕುಳಿತು ದುಡಿಯಗದೆ ಇರುವ ಜೀವಗಳಿಗೆ ನೀಡಬಹುದು. ಬಟ್ಟೆ ವಿಷಯಕ್ಕೆ ಬಂದಾಗ ನೀವು ತಿಂಗಳಿಗೊಮ್ಮೆ ಹೊಸ ಬಟ್ಟೆ ಖರೀದಿಸುವುದು ತಪ್ಪಲ್ಲ ಆದರೆ ನಿಮ್ಮ ಹಳೆಯ ಬಟ್ಟೆಗಳನ್ನು ಬೀರುವಿನಲ್ಲಿ ಗಂತು ಕಟ್ಟಿ ಇಡುವ ಬದಲಿಗೆ ಅನಾಥ ಮಕ್ಕಳಿಗೆ ನೀಡುವುದು ಉತ್ತಮವಲ್ಲವೇ. ಕೇವಲ ನಿಮ್ಮ ಮನೆ, ಮನೆ ಮುಂದಿನ ಜಾಗ ಮಾತ್ರ ಸ್ವಚ್ಛತೆ ಬಗ್ಗೆ ಮಾತ್ರ ಕಾಳಜಿ ವಹಿಸದೆ ಇಡೀ ಬೀದಿಯ ಸ್ವಚ್ಛತೆಯ ಬಗ್ಗೆ ಎಲ್ಲರು ಕುಡಿ ಶ್ರಮಿಸಿದರೆ....ಒಂದು ಬೀದಿ ಸ್ವಚ್ಛವಾಗಿದ್ದರೆ.......ಒಂದು ಊರು ಸ್ವಚ್ಚವಗಿದ್ದಂತೆ...ಒಂದು ಊರು ಸ್ವಚ್ಚವಗಿದ್ದರೆ ಒಂದು ರಾಜ್ಯ.....ಒಂದು ರಾಜ್ಯ ಸ್ವಚ್ಛವಾಗಿದ್ದರೆ..... ಒಂದು ದೇಶ ಆರೋಗ್ಯ ಪೂರ್ಣವಾಗಿದ್ದಂತೆ ಅಲ್ಲವೇ..? ಹಣ ಸಂಪಾದನೆಯೊಂದೆ ಸಾರ್ಥಕ ಜೀವನದ ಗುರುತಲ್ಲ.....ತಾಣ ಮನೆ- ಮನೆಯವರು ಎಂಬ ಭಾವನೆಯಾ ಜೊತೆಗೆ....ಒಂದು ಚೂರು-ಪಾರು ಕಷ್ಟದಲ್ಲಿರುವವರ ಸಹಾಯಕ್ಕೆ ಬರಬಹುದಲ್ಲವೇ? ಪ್ರತಿ ವಾರವನ್ನು ಮೋಜು-ಮಸ್ತಿ ಮಾಡಿ ಕಳೆಯುವುದಕಿಂತ ಶಲ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಓದುವುದನ್ನು ಕಲಿಸುದಕ್ಕೆ ಮೀಸಲಿಡಬಹುದಲ್ಲವೇ. ಕಾಣದ ದೇವರ ಮುಂದೆ ನಿಂತು ಎಲ್ಲರನ್ನು ಚೆನ್ನಾಗಿ ಇಟ್ಟಿರು ಎಂದು ಕೇಳುತ್ತ ಸಮಯ ವ್ಯರ್ಥ ಮಾಡುವ ಬದಲು ನಿಮ್ಮ ಕಣ್ಣಿಗೆ ಕಾಣುವ ನಿಮ್ಮ ಸಹಾಯದ ಅಗತ್ಯವಿರುವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಸಾರ್ಥಕ ಬದುಕು ಸಾಗಿಸಲು ಇಷ್ಟು ಸಾಕಲ್ಲವೇ???
ಸಲಹೆಗನ್ನು ಕೊಡುವುದು ತುಂಬಾ ಸುಲಭ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟ..ಇಷ್ಟು ಹೇಳಿ ತೋಚಿದ್ದನೆಲ್ಲ ಗೀಚಿರುವ ನೀವು ಇಲ್ಲಿಯವರೆಗೆ ಮಾಡಿರುವ ಸಹಾಯದ ಪಟ್ಟಿ ಕೊಡಿ ಎಂದರೆ.....ದಯವಿಟ್ಟು ಕ್ಷಮಿಸಿ ಇಲ್ಲಿಯವರೆಗೆ ನನ್ನನ್ನು ಪ್ರೀತಿಸಿದ ಜೀವಗಳಿಗೆ ತೊಂದರೆ ಕೊಡುವುದನ್ನು ಬಿಟ್ಟು ಬೇರೆ ಯಾವುದೇ ಸಹಾಯವನ್ನು ನಾನು ಮಾಡಿಲ್ಲ....................

Subscribe to:
Posts (Atom)